ಉತ್ತಮ ಸಮಾಜಕ್ಕಾಗಿ

26 ರಂದು ರಂಗ ತರಬೇತಿ ಶಿಬಿರದ ಸಮಾರೋಪ

news belagavi

0

ಬೆಳಗಾವಿ 🙁news bekagavi)ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಯುವರಂಗ ಸಾಂಸ್ಕೃತಿಕ ಸಂಸ್ಥೆ (ರಿ) ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ರಂಗತರಬೇತಿ ಶಿಬಿರದ ಸಮಾರೋಪವನ್ನು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ರವಿವಾರ ದಿ. 26-8-18 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಡಿ.ಎಸ್ ಚೌಗಲೆ ರಚಿತ ಸತ್ಯ ಶೋಧಕ ನಾಟಕವು ಶಿಬಿರಾರ್ಥಿಗಳಿಂದ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಂಗಕರ್ಮಿ ಬಾಬಾಸಾಹೇಬ ಸಿ. ಕಾಂಬಳೆ ನಿರ್ದೇಶಿಸಿದ್ದಾರೆ. ದಿವ್ಯ ಸಾನಿದ್ಯವನ್ನು ಮ.ನಿ.ಪ್ರ.ಸ್ವ.ಶ್ರೀ ಗುರುಸಿದ್ದ ಮಹಾಸ್ವಾಮಿಗಳು ವಹಿಸಲಿದ್ದು. ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದಅನಿಲ ಬೆನಕೆ ವಹಿಸಿಕೊಳ್ಳಲಿದ್ದಾರೆ. ಉದ್ಘಾಟಕರಗಿ ಬೆಳಗಾವಿಯ ಸಾಂಸ್ಕೃತಿಕ ರಾಯಭಾರಿ, ಯಮಕನಮಡಿ‌ ಶಾಸಕರಾದಸತೀಶ್ ಜಾರಕಿಹೊಳಿ ಆಗಮಿಸಲಿದ್ದಾರೆ. ಮುಖ್ಯ ಅಥಿತಿಗಳಾಗ ಜಿಪಂ ಸದಸ್ಯ ಸಿದಗೌಡ ಸುನಗಾರ,ಸಾಮಾಜಿಕಧುರಿಣರಾದ ಅಶೋಕ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಡಾ. ಎಚ್. ಬಿ. ಕೋಲಕಾರ,ಡಾ. ಡಿ.ಎಸ್. ಚೌಗಲೆ , ಅಶೋಕ ಮಳಗಲಿ, ಕಲ್ಲಪ್ಪ ಕಾಂಬಳೆ ಆಗಮಿಸಲಿದ್ದಾರೆ. ಬೆಳಗಾವಿಯ ಎಲ್ಲ ರಂಗಾಸಕ್ತರು ಬಂದು ಸಹಕಾರಿಸಬೇಕಾಗಿ ಎಂದು ಯುವರಂಗದ ಅಧ್ಯಕ್ಷರಾದ ರಾಜು ಮಠಪತಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.