ಉತ್ತಮ ಸಮಾಜಕ್ಕಾಗಿ

ಒಂದು ದಿನದ ವಿಚಾರ ಸಂಕಿರಣ

One day seminar

0

 

ಸಾಹಿತ್ಯ ಮತ್ತು ಧರ್ಮಗಳ ಸಮನ್ವಯದ ಸಾಹಿತಿ ಮಿರ್ಜಿ ಅಣ್ಣಾರಾಯರು – ಪ್ರೋ. ಹಂಪ ನಾಗರಾಜಯ್ಯ
News Belgaum-ಒಂದು ದಿನದ ವಿಚಾರ ಸಂಕಿರಣಬೆಳಗಾವಿ: (news belagavi) ಗುರುವಾರದಂದು 12-04-2018 ನಗರದ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ಮಂಜುನಾಥ ಸಭಾಭವನದಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಮಿರ್ಜಿ ಅಣ್ಣಾರಾಯರ ಜನ್ಮಶತಮಾನೋತ್ಸವ ಪ್ರಯುಕ್ತ ಮಿರ್ಜಿ ಅಣ್ಣಾರಾಯರ ಸಾಹಿತ್ಯದ ಸೃಷ್ಟಿ ಮತ್ತು ದೃಷ್ಟಿ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವುನೆಡೆಯಿತು.
ವ್ಯಕ್ತಿ ಮೌಲ್ಯಗಳು ಸಾಮಾಜೀಕರಣ ಪ್ರಕ್ರಿಯೆಗೆ ಒಳಪಟ್ಟಾಗ ಅವು ಸಾಮಾಜಿಕ ಮೌಲ್ಯಗಳಾಗಿ ಮಾರ್ಪಡುತ್ತವೆ. ಅಂತಹ ಸಹೃದಯ ಸಾಹಿತಿಗಳಾಗಿ ಬದುಕು-ಬರಹಗಳ ಸಮತೂಕದ ಸಾಹಿತಿಗಳಾದವರು ಮಿರ್ಜಿ ಅಣ್ಣಾರಾಯರು.ಪ್ರಾಥಮಿಕ ಶಾಲಾ ಶಿಕ್ಷಕನೋರ್ವ ನೆಲದ ಪ್ರತಿನಿಧಿಯಾಗಿ ಆದರ್ಶ ಮತ್ತು ಉದಾತ್ತ ಧ್ಯೇಯಗಳನ್ನು ಹೊಂದಿದರೆ, ಶ್ರೇಷ್ಠ ಚಿಂತಕರಾಗಿ ರೂಪಗೊಳ್ಳಲು ಸಾಧ್ಯವೆನ್ನುವುದನ್ನು ತೋರಿಸಿಕೊಟ್ಟವರು ಮಿರ್ಜಿ ಅಣ್ಣಾರಾಯರು.
News Belgaum-ಒಂದು ದಿನದ ವಿಚಾರ ಸಂಕಿರಣ 1 News Belgaum-ಒಂದು ದಿನದ ವಿಚಾರ ಸಂಕಿರಣ 2ಧರ್ಮ ಮತ್ತು ಸಾಹಿತ್ಯಗಳ ಸಮನ್ವಯದ ಸಾಹಿತಿ ಅಣ್ಣಾರಾಯರು ಸರಳಜೀವಿ ಹಾಗೂ ತತ್ವವೇತ್ತ ಚಿಂತಕರಾದವರು ಅವರ ಅಗಾಧವಾದ ಸಾಹಿತ್ಯದ ಓದು ವಿಮರ್ಶೆಗಳು ಸದ್ಯ ಮರು ಚಿಂತನೆಗಳಿಗೆ ಒಳಬೇಕಿದೆ ಎಂದು ಕುರಿತಾದ ವಿಚಾರ ಸಂಕಿರಣದ ಉದ್ಘಾಟನೆಯನ್ನ ನೆರೆವೇರಿಸಿದ ಹಿರಿಯ ಸಾಹಿತಿಗಳಾದ ಪ್ರೋ. ಹಂಪನಾಗರಾಜ್ಯನವರು ನುಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಅರವಿಂದ ಮಾಲಗತ್ತಿಯವರು ಸುಮಾರು 14000ಕ್ಕೂ ಹೆಚ್ಚು ಪುಟಗಳ ಸಾಹಿತ್ಯ ರಚಿಸಿದ ಹಾಗೂ ಗಡಿನಾಡಿನ ಆದರ್ಶ ಚಿಂತಕರಾದ ಮಿರ್ಜಿ ಅಣ್ಣಾರಾಯರ ಸ್ಮಾರಕ ಟ್ರಸ್ಟನ್ನು ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸ್ಥಾಪಿಸುವ ಮುಖಾಂತರ ಅವರ ಸಮಗ್ರ ಸಾಹಿತ್ಯವನ್ನು ಹೊರತರುವ ಕೆಲಸ ಮಾಡಬೇಕಿದೆ ಎಂದು ನುಡಿದರು.
ವಿಚಾರ ಸಂಕಿರಣದ ಸಂಚಾಲಕರಾದ ಡಾ.ಕವಿತಾ ಕುಸುಗಲ್ಲ ಅವರು ಆಶಯ ನುಡಿಗಳನ್ನಾಡುತ್ತ ಗಡಿಭಾಗದ ಮಧ್ಯಮ ವರ್ಗದ ಭಾಷೆ ಮತ್ತು ಬದುಕನ್ನು ಸಾಹಿತ್ಯದಲ್ಲಿ ಕಟ್ಟಿಕೊಟ್ಟು ತಮ್ಮದೇ ಆದ ದೇಸಿಮಾರ್ಗವನ್ನು ರೂಪಿಸುವುದಲ್ಲದೇ ಗುರು ಶಿಷ್ಯ ಸಂಬಂಧಕ್ಕೆ ಮಾದರಿಯಾಗಿದ್ದರು ಹಾಗೂ ಮಿರ್ಜಿ ಅಣ್ಣಾರಾಯರ ಜೀವನ ಮತ್ತು ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಅಕ್ಯಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮದಾರ,ಬಿ.ಎಂ ಹರಪನಹಳ್ಳಿ, ಅಶೋಕ ಹಳ್ಳಿಯವರ, ಡಾ.ಕೆ.ವಿ ರಾಜೇಶ್ವರಿಡಾ. ರಂಗರಾಜ ವನದುರ್ಗ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ ಸರಜೂ ಕಾಟ್ಕರ್, ಡಾ ಬಾಳಣ್ಣ ಶೀಗಿಹಳ್ಳಿ,ಶಿ.ಗು ಕುಸುಗಲ್ ಡಾ ಮರಿಗುದ್ದಿಮತ್ತು ವೇದಿಕೆ ಮೇಲೆ ಜಗದೀಶ ಸವದತ್ತಿ, ಡಾ ಅಶೋಕ ಪಾಟೀಲ, ಪ್ರೋ. ಶಾಂತಿನಾಥದಿಬ್ಬದ ನಿರ್ಮಲಾ ಗಡದ ಹಾಗೂ ಕಾರ್ಯಕ್ರಮದಲ್ಲಿ ಮಿರ್ಜಿ ಅಣ್ಣಾರಾಯರ ಮಗಅಜೀತ ಮಿರ್ಜಿ ಹಾಗೂ ಮೊಮ್ಮಗರಾದ ಕುಮಾರ ಮಿರ್ಜಿ ಹಾಗೂ ಅಣ್ಣಾರಾಯರಕುಟುಂಬದ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಅಕ್ಷಯ ಹಿರೇಮಠ ಮತ್ತು ವೈಷ್ಣವಿ ಕುಲಕರ್ಣಿ ನಾಡಗೀತೆ ಹಾಡಿದರು ಸಾವಿತ್ರಿ ಮುಜುಮದಾರ ಸ್ವಾಗತಿಸಿದರು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ನಿರೂಪಿಸಿದರುಎಂ,ಬಿ, ಹರಪನಹಳ್ಳಿ ವಂದಿಸಿದರು.One day seminar

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.