ಉತ್ತಮ ಸಮಾಜಕ್ಕಾಗಿ

ನಮ್ಮ ಪರ ಕಾಂಗ್ರೆಸ್​-ಜೆಡಿಎಸ್​ ಶಾಸಕರು ಬೆಂಬಲ ನೀಡುತ್ತಾರೆ: ಬಿ.ಎಸ್ ಯಡಿಯೂರಪ್ಪ

Our pro-Congress-JDS supporters support: BS Yeddyurappa

0

ಬೆಂಗಳೂರು:(news belagavi) ಜನಾದೇಶ ನನ್ನ ಮತ್ತು ಬಿಜೆಪಿ ಪರವಿದ್ದರೂ ಕಾಂಗ್ರೆಸ್​-ಜೆಡಿಎಸ್​ ಅಧಿಕಾರ ಕಬಳಿಸಲು ಯತ್ನಿಸುತ್ತಿವೆ. ಆದರೆ ನಮ್ಮ ಪರ ಕಾಂಗ್ರೆಸ್​-ಜೆಡಿಎಸ್​ ಅನೇಕ ಶಾಸಕರಿದ್ದಾರೆ. ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ, ಭಾಷಣದ ಆರಂಭದಲ್ಲೇ ಭಾವುಕರಾದರು. ರಾಜ್ಯದ ಜನರಿಗೆ, ರೈತರ, ಹಿಂದುಳಿದ ವರ್ಗಗಳ ಬೆಂಬಲಕ್ಕೆ ಧನ್ಯವಾದ ಎಂದು ತಿಳಿಸಿದರು.
60ರ ದಶಕದಲ್ಲಿ ಇಂದಿರಾಗಾಂಧಿಗೆ ಬಹುಮತವಿರಲಿಲ್ಲ, ಆತ್ಮಸಾಕ್ಷಿಯಿಂದ ಮತ ಕೇಳಿ ಇಂದಿರಾ ಯಶಸ್ವಿಯಾಗಿದ್ದರು ಅದೇ ರೀತಿ ನಮಗೂ ಬೆಂಬಲ ಸಿಗಲಿದೆ. ರಾಜ್ಯದ ಎಲ್ಲಾ ಶಾಸಕರು ಆತ್ಮ ಸಾಕ್ಷ್ಯಿಗೆ ಅನುಗುಣವಾಗಿ ನಮಗೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ-ಅಮಿತ್​ ಷಾಗೆ ಕೃತಜ್ಞತೆ ಸಲ್ಲಿಸಿದ ಯಡಿಯೂರಪ್ಪ, ಮುಖ್ಯಮಂತ್ರಿಯಾದ ಬಳಿಕ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ಗಳ ಸಾಲ ಮನ್ನಾ ಮಾಡಿದ್ದೇನೆ. ನೇಕಾರರ 1 ಲಕ್ಷ ಸಾಲಮನ್ನಾ ಮಾಡಿದ್ದೇನೆ. ರೈತರ ಸಾಲಮನ್ನಾ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಕೇಳಿದ್ದೇವೆ. ಮಾಹಿತಿ ಸಿಕ್ಕ ನಂತರ ಸಾಲಮನ್ನಾ ಎಂದು ತಿಳಿಸಿದರು.
ರಾಜ್ಯಪಾಲರು ವಿಶ್ವಾಸಮತ ಸಾಬೀತು ಪಡಿಸಲು 15ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಅಲ್ಲಿಯವರೆಗೂ ನಾನು ಕಾದು ಕುಳಿತುಕೊಳ್ಳುವುದಿಲ್ಲ. ಆದಷ್ಟು ಬೇಗ ಸದನ ಕರೆದು ಬಹುಮತ ಸಾಬೀತು ಪಡಿಸುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದರು.Our pro-Congress-JDS supporters support: BS Yeddyurappa  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.