ಉತ್ತಮ ಸಮಾಜಕ್ಕಾಗಿ

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಶರಣರ ತತ್ವಾದರ್ಶಗಳನ್ನು ಅವಲೋಕನ ಮಾಡಿಕೊಳ್ಳೋನಾ : – ಸುರೇಶ ಅಂಗಡಿ

Overview of Jayanti Sharan's commentary on Mr. Nirshanaar Ambigar Chaudharya:

0

ಬೆಳಗಾವಿ:(taru kranti) ಯಾವುದೇ ವಿಶ್ವವಿದ್ಯಾಲಯ ಇಲ್ಲದೇ 12ನೇ ಶತಮಾನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಅಪಾರ ಜ್ಞಾನ ಮತ್ತು ಸಮಾಜದ ಬಗೆಗೆ ಉತ್ತಮ ಕಳಕಳಿಯನ್ನು ಹೊಂದಿದ್ದರು ಎಂದು ಸಂಸದರಾದ ಸುರೇಶ ಅಂಗಡಿ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಶರಣರ ತತ್ವಾದರ್ಶಗಳನ್ನು ಅವಲೋಕನ ಮಾಡಿಕೊಳ್ಳೋನಾ :  - ಸುರೇಶ ಅಂಗಡಿ- Tarun krantiಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 12ನೇ ಶತಮಾನದ ತತ್ವಾದರ್ಶಗಳನ್ನು ಇಂದು ನಾವೇಲ್ಲರೂ ಅವಲೋಕನ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿ ಎಂದು ಹೇಳಿದರು.
ಸಮಾಜದಲ್ಲಿ ಇಂದು ನಾವೇಲ್ಲರು ಹಣ ಮತ್ತು ಅಪಾರ ಆಸ್ತಿಯನ್ನು ಗಳಿಸುವಲ್ಲಿ ಮುಂದಾಗಿದ್ದೇವೆ. ಆದರೆ ಶರಣರ ತತ್ವಗಳನ್ನು ಮರೆತು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮಾಜ ಸುಧಾರಣೆಯಲ್ಲಿ ಮಹಿಳಿಯರ ಪಾತ್ರವು ಅಪಾರವಾಗಿದ್ದು, ಅವರೊಂದಿಗೆ ನಾವೇಲ್ಲರು ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮೀಸೋನಾ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಿಗಿಮಠ ಅವರು ಮಾತನಾಡಿ, ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 12ನೇ ಶತಮಾನದ ತತ್ವಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಜಾತಿ ಯಾವುದಾದರೇನು, ನಾವು ಮಾಡುವ ಕಾಯಕ ಉತ್ತಮವಾಗಿರಬೇಕು ಎಂದು ಹೇಳಿದ ಶರಣನರು, ನಂಬಿದವರನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದು ಹೇಳಿದರು.
ಕೇವಲ ಸರ್ಕಾರದಿಂದ ಬರುವ ಸೌಲಭ್ಯಗಳಿಗೆ ಜೋತು ಬಿಳದೆ, ಕಷ್ಟಪಟ್ಟು ದುಡಿದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಗಮನ ಹರಿಸಬೇಕು ಎಂದು ಸಾರ್ವಜನಿಕರಿಗೆ ವಿನಂತಿಸಿಕೊಂಡರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್.ಎಂ. ಗಂಗಾಧರಯ್ಯ ಅವರು ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಸಂಭಾಜಿ ಪಾಟೀಲ, ಅಪರ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶ್ರೀಮತಿ ಮಂಗಲಾ ಮಠದ ಹಾಗೂ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶೆಂಕರಿ ಅವರು ಸ್ವಾಗತಿಸಿದರು. ಬಸವರಾಜ ಸುಣಗಾರ ಅವರು ವಂದಿಸಿದರು.

ಅದ್ಧೂರಿ ಮೆರವಣಿಗೆ:
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಶರಣರ ತತ್ವಾದರ್ಶಗಳನ್ನು ಅವಲೋಕನ ಮಾಡಿಕೊಳ್ಳೋನಾ :  - ಸುರೇಶ ಅಂಗಡಿ- Tarun kranti 1ಕಾರ್ಯಕ್ರಮಕ್ಕೂ ಮುನ್ನ ಸಂಸದರಾದ ಸುರೇಶ ಅಂಗಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಶ್ರೀ ನಿಜಶರಣ ಅಂಬಿಗರಯ್ಯ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಯು ಚನ್ನಮ್ಮ ವೃತ್ತ, ಜಿಲ್ಲಾಸ್ಪತ್ರೆ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ಸಮಾಜದ ಮುಖಂಡರು ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

(belgaum)Overview of Jayanti Sharan’s commentary on Mr. Nirshanaar Ambigar Chaudharya:

Leave A Reply

 Click this button or press Ctrl+G to toggle between Kannada and English

Your email address will not be published.