ಉತ್ತಮ ಸಮಾಜಕ್ಕಾಗಿ

ಉತ್ತರ ಕರ್ನಾಟಕ ಜನರು ಹಾಸ್ಯಪ್ರಿಯರು ಪ್ರೊ. ಜಿ. ಕೆ. ಕುಲಕರ್ಣಿ

0

ಬೆಳಗಾವಿ-tarunkranti ಉತ್ತರ ಕರ್ನಾಟಕ ಜನರು ಹಾಸ್ಯಪ್ರಿಯರು ಪ್ರೊ. ಜಿ. ಕೆ. ಕುಲಕರ್ಣಿ ನಗಬೇಕರಿ ನಗಬೇಕು ಕಾರ್ಯಕ್ರಮದಲ್ಲಿ ಪ್ರೊ. ಜಿ. ಕೆ. ಕುಲಕರ್ಣಿ ನಗಬೇಕರಿ ನಗಬೇಕು ಅಂತ ಗುಂಡೇನಟ್ಟಿ ಮಧುಕರ ಹೇಳುತ್ತಾರೆ ಆದರೆ ಸುಮಾರಾಗಿ ಉತ್ತರಕರ್ನಾಟಕದ ಜನ ಎಷ್ಟೋ ನೋವಿರಲಿ ಯಾವಾಗಲೂ ನಗುನಗುತ್ತಾ ಇರ್ತಾರೆ. ಇವರು ಹಾಸ್ಯಪ್ರಿಯರು, ಹಾಸ್ಯಾರಾಧಕರು ಆದರೆ ದಕ್ಷಣ ಕರ್ನಾಟಕ ಜನತೆಯಲ್ಲಿ ಈ ನಗೆಯ ಕೊರತೆ ಎದ್ದು ಕಾಣುತ್ತೆ. ಅಲ್ಲಿಯ ಆ ಯಾಂತ್ರಿಕ ಬದುಕಿನಿಂದ ಅವರು ನಗೆಯಿಂದ ತುಂಬ ದೂರವಾಗಿದ್ದಾರೇನೋ ಅನ್ನಿಸುತ್ತದೆ. ಅವರ ಮುಖದಲ್ಲಿ ನಗೆ ಹುಡುಕಿದರೂ ಸಿಗದು ಅವರಿಗಿನ್ನು “ನಗಬೇಕರಿ ನಗಬೇಕು” ಎಂದು ನಗಿಸುವ ಪ್ರಯತ್ನ ಮಾಡಬೇಕಿದೆ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಇಂದಿಲ್ಲಿ ಹೇಳಿದರು.
ಉತ್ತರ ಕರ್ನಾಟಕ ಜನರು ಹಾಸ್ಯಪ್ರಿಯರು- Tarun krantiನಗರದ ಹಾಸ್ಯ ಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 46 ನೆ ತಿಂಗಳ ಕಾರ್ಯಕ್ರಮ “ನಗ ಬೇಕರಿ ನಗಬೇಕು” ಎಂಬ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಬಂದಿದ್ದ ಪ್ರೊ.ಜಿ.ಕೆ. ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಹಾಸ್ಯಪ್ರತಿಭೆಗಳಾದ ಶುಭಮ ಪಾಟೀಲ, ದತ್ತಾತ್ರಯ ಪೂಜಾರ ಹಾಗೂ ರಾಜು ಹಿರೇಮಠ ಕುರಿತು ಹೇಳತ್ತ ಇವು ಅರಳುವ ಪ್ರತಿಭೆಗಳಲ್ಲ ಅರಳಿದ ಪ್ರತಿಭೆಗಳು ಅಭ್ಯಾಸ ಹಾಗೂ ಅನುಭವದಿಂದ ಇವರು ಒಳ್ಳೆಯ ಹಾಸ್ಯಕಲಾವಿದರಾಗುವುದರಲ್ಲಿ ಸಂಶಯವಿಲ್ಲವೆಂದರು
ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಂಗ ಎಂಬ ಬೇಂದ್ರೆ ಮಾತನ್ನು ನೆನಪಿಸಿಕೊಂಡ ಪ್ರೊ.ಜಿ. ಕೆ ಕುಲಕರ್ಣಿಯವರು ಗಂಡ ಹೆಂಡಿರ ಮದ್ಯ ಘಟಿಸುವ ಹಲವಾರು ಹಾಸ್ಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತ ಸುಮಾರು ಮುಕ್ಕಾಲು ಗಂಟೆ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖ್ಯಾತ ನಗೆಮಾತುಗಾರ ಖಾನಾಪುರದ ಆನಂದ ಭಿಂಗೆ ಹಾಸ್ಯಕೂಟವೆಂಬ ಈ ಪ್ರಯೋಗಾಲಯದಿಂದ ಒಳ್ಳೊಳ್ಳೆ ಹಾಸ್ಯಪ್ರತಿಭೆಗಳು ಹೊರಬರುತ್ತಿದ್ದು, ಈಗಾಗಲೆ ಮೊದಲನೇ ಬ್ಯಾಚ್ನ ಕಲಾವಿದರಾದ ಸೋನಾರ, ಹೊಸಳ್ಳಿ ಸಾಕಷ್ಟು ಹೊರ ಹಾಸ್ಯಕಾರ್ಯಕ್ರಮಗಳನ್ನು ಪಡೆಯುತ್ತಿದ್ದು. ಈಗ ಎರಡನೇ ಹೊಸ ಬ್ಯಾಚ್ ಆರಂಭವಾಗಿದ್ದು ಉಪಸ್ಥಿತರಿರುವ ಈ ಯುವ ಪ್ರತಿಭೆಗಳು ಹಾಸ್ಯ ಕ್ಷೇತ್ರದಲ್ಲಿ ಹೆಸರನ್ನು ಮಾಡಲಿ, ಮಿಂಚುವಂತಾಗಲೆಂದು ಹಾರೈಸಿದ ಅವರು ಹಲವಾರು ನಗೆಪ್ರಸಂಗಗಳನ್ನು ಹಂಚಿಕೊಂಡರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ ಸ್ವಂತ ಯಶಸ್ಸಿಗಿಂತ, ಬೇರೆಯವರ ಯಶಸ್ಸಿನಲ್ಲಿ ಕಾಣುವ ಖುಷಿಯ ರುಚಿಯೇ ಬೇರೆ. ಇಂದಿನ ಯುವಪ್ರತಿಭೆಗಳು ಬೆಳದು ರಾಜ್ಯಮಟ್ಟದಲ್ಲಿ ಮಿಂಚುವಂತಾದಾಗ ನಮ್ಮ ಸಂಘಟನೆಯ ಫಲ ಸಾರ್ಥಕವಾದಂತಾಗುತ್ತದೆಂದು ಹೇಳಿದರು.
ಶುಭಮ ಪಾಟೀಲ, ದತ್ತಾತ್ರಯ ಪೂಜಾರ ಹಾಗೂ ರಾಜು ಹಿರೇಮಠ ಜನರನ್ನು ನಗಿಸುತ್ತ ನಮ್ಮಲ್ಲಿರುವ ಕಲೆ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಹುಕ್ಕೇರಿ ತಾಲೂಕಾ ಪರಿಷತ್ತ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಪ್ರಾಯೋಕತ್ವ ವಹಸಿದ್ದರು ಪ್ರೊ. ಎಂ ಎಸ್ ಇಂಚಲ ಅಧ್ಯಕ್ಷತೆಯನ್ನು ವಹಿಸಿದ್ದರು. ಅಶೋಕ ಮಳಗಲಿ ನಿರೂಪಿಸಿದರು. ಡಾ| ಪಿ. ಜಿ. ಪಟಗುರಿ ವಂದಿಸಿದರು.

belgaumnews     People from North Karnataka G. K. Kulkarni ಉತ್ತರ ಕರ್ನಾಟಕ ಜನರು ಹಾಸ್ಯಪ್ರಿಯರು ಪ್ರೊ. ಜಿ. ಕೆ. ಕುಲಕರ್ಣಿ

Leave A Reply

 Click this button or press Ctrl+G to toggle between Kannada and English

Your email address will not be published.