ಉತ್ತಮ ಸಮಾಜಕ್ಕಾಗಿ

ಜನ ನೋಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮತ್ತು ಜಾತಿ ಸೇರಿಸಬಾರದು ಎಂದು: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ,

news belagavi

0

ಬೆಳಗಾವಿ:(news belgaum) ಹೊಸ ಶಾಸಕರು ಬಹಳ ಮೆರೆಯಬಾರದು, ಜನ ನೋಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮತ್ತು ಜಾತಿ ಸೇರಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ನೇರ ಟಾಂಗ ನೀಡಿದ್ದಾರೆ. ಇಂದು ಸಂಜೆ ಸರ್ಕ್ಯೂಟ್ ಹೌಸನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿ ಆಡಳಿತ ಪಕ್ಷದಾಗ ಧರಣಿ ಕೂಡುವುದು ತಪ್ಪು, ವಿರೋಧ ಪಾರ್ಟಿಯಲ್ಲಿದ್ದಾಗ ಕೂಡಬೇಕು ಎಂದು ತಾಕೀತು ಮಾಡಿದರು.

https://youtu.be/01R-n_1Tm90

ಸಹಕಾರ ಸಂಘಗಳಲ್ಲಿ ಪಕ್ಷ ಮತ್ತು ಜಾತಿ ಇರುವುದಿಲ್ಲ ಇದನ್ನು ಶಾಸಕಿ ಅರ್ಥ ಮಾಡಿಕೊಳ್ಳಬೇಕು ಎಂದರು. ತಡರಾತ್ರಿ ಟಿವಿ ನೋಡಿದಾಗಲೇ ಧರಣಿ ವಿಷಯ ಗೊತ್ತಾಗಿದೆ ಎಂದ ಅವರು ಸಚಿವನಾಗಿ ನನ್ನ ಕರ್ತವ್ಯ ನಿಭಾಯಿಸುತ್ತೇನೆ. ಅಧಿಕಾರಿಗಳನ್ನು ಕರೆದು ಚರ್ಚಿಸಲಿದ್ದೇನೆ, ನ್ಯಾಯ ಕೊಡಿಸಲು ಬದ್ಧನಾಗಿದ್ದೇನೆ ಎಂದರು. ನಾನು ಮೊದಲು 58 ಸಾವಿರ ಮತದಿಂದ ಚುನಾವಣೆ ಗೆದ್ದಿದ್ದು, ಎರಡನೇ ಬಾರಿ 14 ಸಾವಿರ ಮತ ಅಂತರಕ್ಕೆ ಇಳಿದಿದ್ದೇನೆ, ಇದನ್ನು ನೂತನ ಶಾಸಕಿ ಅರಿಯಲಿ ಎಂದರು. ಪಿಎಲ್ ಡಿ ಇ ಬ್ಯಾಂಕ್ ಸದಸ್ಯರು ಯಾರ್ಯಾರು ಎಂಬುವುದು ಸಹ ನನಗೆ ಗೊತ್ತಿಲ್ಲ ಎಂದರು.
‘ಸತೀಶ ಜಾರಕಿಹೊಳಿ ಕಾಲ ಕಸಾ ಅಲ್ಲ ಬಿಡ್ರಿ ಆಕೆ…’ ಎಂದು ಪ್ರಶ್ನೆಯೊಂದಕ್ಕೆ ರಭಸದ ಪ್ರತಿಕ್ರಿಯೆ ನೀಡಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರ ಗುಂಪು ಸೀಳಿಕೊಂಡು ಮರೆಯಾದರು.

Leave A Reply

 Click this button or press Ctrl+G to toggle between Kannada and English

Your email address will not be published.