ಉತ್ತಮ ಸಮಾಜಕ್ಕಾಗಿ

ಯೋಜನಾಬದ್ಧ ಅಧ್ಯಯನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾರಿದೀಪ: – ಸಿಇಒ ರಾಮಚಂದ್ರನ್

Planned study led to competitive exams: - CEO Ramachandran

0


ಬೆಳಗಾವಿ 🙁tarun kranti) ಯೋಜನಾಬದ್ಧ ಅಧ್ಯಯನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾರಿದೀಪವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್.ಆರ್ ಅವರು ಹೇಳಿದರು.
ಯೋಜನಾಬದ್ಧ ಅಧ್ಯಯನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾರಿದೀಪ:  - ಸಿಇಒ ರಾಮಚಂದ್ರನ್- Tarun kranti 1ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸುಭಾಸ ನಗರದ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೋಲಿಗೆ ಹೆದರದೆ, ದಿಟ್ಟವಾಗಿ ಎದುರಿಸಿ ಸೋಲನ್ನೇ ಸೋಲಿಸುವ ಧೈರ್ಯ ವಿಶೇಷವಾಗಿ ಮಹಿಳೆಯರಲ್ಲಿ ಇರುತ್ತದೆ. ಸೋಲನ್ನು ಸಹಜವಾಗಿ ಒಪ್ಪದೇ ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಸದಾ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಅವರು ಮಾತನಾಡಿ, ಅಪರಿಚಿತರ ಮುಖದಲ್ಲಿ ನಗು ಮೂಡಿಸುವ ಕಾರ್ಯವನ್ನು ಸರಕಾರಿ ಅಧಿಕಾರಿಗಳು ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಯಾಗುವವರು ಚಿಂತಿಸಬೇಕು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಪುಂಡಲೀಕ ಅಲವಾಲ ಅವರು ಮಾತನಾಡಿ, ವಿದ್ಯಾರ್ಥಿನಿಯರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ತಮ್ಮ ಗುರಿ ಸಾಧನೆಗೆ ಸದುಪಯೋಗಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಪ್ರೊಬೆಷನರಿ ಕೆಎಎಸ್ ಅಧಿಕಾರಿಗಳಾದ ನಾರಾಯಣ ಕನಕರೆಡ್ಡಿ ಅವರು ಮಾತನಾಡಿ, ಕೆಎಎಸ್ ಪರೀಕ್ಷೆ ಹಾಗೂ ತಯಾರಿಯ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ರಾಮನಗೌಡ ಕನ್ನೋಳ್ಳಿ, ಮಯೂರ ಕೋಟೆವಾಲೆ ಸೇರಿದಂತೆ ವಿವಿಧ ಅಧಿಕಾರಿಗಳು, ವಸತಿ ನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
(belgaum ) Planned study led to competitive exams: – CEO Ramachandran

Leave A Reply

 Click this button or press Ctrl+G to toggle between Kannada and English

Your email address will not be published.