ಉತ್ತಮ ಸಮಾಜಕ್ಕಾಗಿ

ಪೊಲೀಸ್ ದಾಳಿ ಇಬ್ಬರ ಬಂದನ

Police attacked two men arrest

0

ಬೆಳಗಾವಿ 🙁news belgaum) ನಗರ ಪೊಲೀಸ್‍ರಿಂದ ಅಕ್ರಮ ಮರಳು ದಾಳಿ; ಲಾರಿ & ರೂ.6500/- ಮೌಲ್ಯದ ಮರಳು ವಶ ; ಇಬ್ಬರ ಬಂದ್ದಿಸಿ ಅಂದು 27/02/2018 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯಳ್ಳೂರ ಗ್ರಾಮದ ವಡಗಾಂವ ಯಳ್ಳೂರ ರಸ್ತೆಯಲ್ಲಿ ಟ್ರಕ್ ನಂ. ಕೆಎ-22/ಎ-9670 ನೇದ್ದರಲ್ಲಿ ರೂ.6500/- ಮೌಲ್ಯದ ಮರಳನ್ನು ಅನಧೀಕೃತ ಅಥವಾ ಕಳ್ಳತನದಿಂದ ಲೋಡ್ ಮಾಡಿಕೊಂಡು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುವಾಗ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ ಶ್ರೀ ನಾರಾಯಣ ಸ್ವಾಮಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಸದರಿ ವಾಹನ ಮತ್ತು ಮರಳನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳನ್ನೂ ಬಂದಿಸಿದ್ದಾರೆ. 1) ಪರಿಶರಾಮ ವಿಠ್ಠಲ ಕದಂ ಸಾ|| ನಿಡಗಲ್ಲ ತಾ|| ಖಾನಾಪೂರ, 2) ಮರೆಪ್ಪ ಪಕಾರೆ ಸಾ|| ಗರ್ಲಗುಂಜಿ ತಾ|| ಖಾನಾಪೂರ ಇವರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದಾರೆÀ .
ಹಾಗೂ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಹೂನಗರದಲ್ಲಿ ದಿನಾಂಕ. 27/02/2018 ರಂದು ಆರೋಪಿಗಳಾದ 1) ಮುಕ್ತಿಯಾರ ಅಹ್ಮದ ಶೇಖ ಸಾ|| ಭುವನೇಶ್ವರ ನಗರ, ಬೆಂಗಳೂರು ಇವನು ಪಿರ್ಯಾದಿ ಅರುಣ ಅಪ್ಪಾಸಾಹೇಬ ದುಮಾಳೆ ಸಾ|| ಸದಾಶಿವ ನಗರ, ಬೆಳಗಾವಿ ರವರಿಗೆ ನಾನು ಪೊಲೀಸ್ ಇರುತ್ತೇನೆ ಅಂತಾ ಸುಳ್ಳು ಹೇಳಿ ನಾವು ಪೊಲೀಸ್ ಠಾಣೆಯಲ್ಲಿ ಬ್ಯಾಂಕಿನಿಂದ ಸೀಜ್ ಮಾಡಿದ ಇನ್ನೋವಾ ಕ್ರಿಸ್ಟಾ ಕಾರಗಾಡಿಯನ್ನು ಕೊಡಿಸುವುದಾಗಿ ಹೇಳಿ ಆರೋಪಿ 2) ರಾಜಶೇಖರ ಸಾ|| ಬೆಂಗಳೂರು ಈತನ ಕಾರ್ ಏಜನ್ಸಿಗೆ ಕಳುಹಿಸಿ ಅವನ ಮುಖಾಂತರ ನಿಮಗೆ ಅರ್ಧ ಬೆಲೆಗೆ ಮಾರಾಟ ಮಾಡಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿ ಕೊಡುತ್ತೇವೆ ಅಂತಾ ನಂಬಿಸಿ ಆರೋಪಿ ಮುಕ್ತಿಯಾರ ಅಹ್ಮದ ಶೇಖ ಸಾ|| ಭುವನೇಶ್ವರ ನಗರ, ಬೆಂಗಳೂರು ಇವನು ತನ್ನ ಬ್ಯಾಂಕ್ ಅಕೌಂಟಗೆ ಪಿರ್ಯಾದಿಯಿಂದ 7.5 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡು ಪಿರ್ಯದಿಗೆ ಕಾರನ್ನು ಕೊಡದೇ ಮೋಸ ಮಾಡಿದ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸ್ರು ತನಿಖೆ ಕೈಗೊಂಡ್ಡಿದ್ದಾರೆ Police attacked two men arrest

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: