ಉತ್ತಮ ಸಮಾಜಕ್ಕಾಗಿ

ಕಳಕಳಿ ಮೆರೆದ ಪೊಲೀಸ್ ಕಮಿಷ್ನರ್: ಬದುಕುಳಿಯದ ಮಗು

Police Commissioner consoled : Child not survived

0

ಬೆಳಗಾವಿ: (news belagavi) ಮನುಕುಲದ ಕರಳು ಹಿಂಡುವ ಘಟನೆಯೊಂದರಲ್ಲಿ ಸಮಾಧಿಗೆ ತೆರಳಿದ್ದ ಹಸುಗೂಸು; ಉಳಿದು, ಇಂದು ನಾಲ್ಕು ದಿನಗಳ ನಂತರ ಅಸುನೀಗಿದೆ. ಜೀವಂತ ಮಗು ಸಜೀವ ಸಮಾಧಿ ಯತ್ನ ಎಂಬ ಅಪಪ್ರಚಾರದ ನಡುವೆ ಬಚಾವಾಗಿದ್ದ ಎರಡು ತಿಂಗಳ ಹೆಣ್ಣು ಮಗು ತೀವ್ರ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದೆ. ಘಟನೆಯ ಸತ್ಯಾಸತ್ಯತೆ ಹೊರಗೆಡವಲು ಸ್ವತಃ ಪೊಲೀಸ್ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಯತ್ನಿಸಿ ಹಸುಳೆಯ ಪಾಲಕರಿಗೆ ₹11 ಸಾವಿರ ಆರ್ಥಿಕ ಸಹಾಯ ನೀಡಿ ಮಗುವನ್ನು ಉಳಿಸಿಕೊಳ್ಳಲು ಮಾಡಿದ ಯತ್ನಕ್ಕೆ ವಿಧಿ ಕೈ ಹಿಡಿಯಲಿಲ್ಲ.

ಕಳೆದ ಭಾನುವಾರ ನಗರದ ಶಹಾಪುರದ ಸ್ಮಶಾನದಲ್ಲಿ ಹೆಣ್ಣು ಹಸುಳೆಯನ್ನು ಜೀವಂತ ಸಮಾಧಿ ಮಾಡಲು ಸ್ವತಃ ಪೋಷಕರು ಯತ್ನಿಸಿದರು! ಎಂಬ ಸುಳ್ಳು ಸುದ್ದಿಗೆ ಇಡೀ ನಗರದ ಜನತೆ ಮರುಗಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಕಮೀಷನರ್ ಡಾ.ಡಿ.ಸಿ.ರಾಜಪ್ಪ ತನಿಖೆ ಮಾಡಿದಾಗ ಮಗು ಸಹಿತ ಪಾಲಕರು ಜಿಲ್ಲಾಸ್ಪತ್ರೆಯಲ್ಲಿ ಸಿಕ್ಕರು. ಖಾಸಭಾಗ ಭಾರತ ನಗರದ ಬಡ ದಂಪತಿಯ ಎರಡು ತಿಂಗಳಿನ ಹೆಣ್ಣು ಮಗು ಹೃದಯ ಹಾಗೂ ಮೆದುಳು ದುರ್ಬಲತೆಯಲ್ಲಿತ್ತು. ಪಾಲಕರಿಗೂ ತಮ್ಮ ಅಸಹಾಯಕ ಜೀವನದ ಮಧ್ಯೆ ಮಗುವನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವಿತ್ತು. ಮಗು ಬದುಕುಳಿಯಲಾರದು ಎಂದು ಖಾಸಗಿ ವೈದ್ಯರು ತಿಳಿಸಿದರು ಎಂಬ ಕಾರಣದಿಂದ, ದಂಪತಿ ಮಗುವನ್ನು ಅಗತ್ಯ ಸಂಸ್ಕಾರದೊಂದಿಗೆ ಸಮಾಧಿ ಮಾಡಲು ನಿರ್ಧರಿಸಿದ್ದರು. ಆದರೆ ಮಗು ಕೊನೆ ಕ್ಷಣದಲ್ಲಿ ತನ್ನ ಜೀವಂತಿಕೆ ತೋರ್ಪಡಿಸಿದ್ದರಿಂದ ಮತ್ತೆ ಜಿಲ್ಲಾಸ್ಪತ್ರೆಗೆ ಹೆತ್ತವರು ಧಾವಿಸಿದ್ದರು. ಆಗಲೇ ತನಿಖೆಗೆ ಇಳಿದಿದ್ದ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಬಡ ದಂಪತಿಗಳಿಗೆ ಆರ್ಥಿಕ ಸಹಾಯ ನೀಡಿ ಮಗು ಬದುಕುಳಿಯಲು ಹಾರೈಸಿದ್ದರು.

ಕಮಿಷ್ನರ್ ಡಾ. ರಾಜಪ್ಪ ₹ 5 ಸಾವಿರ ಹಾಗೂ ಇತರ ಪೊಲೀಸ್ ಅಧಿಕಾರಿಗಳಿಂದ ಸ್ವಲ್ಪ ಹಣ ಸೇರಿಸಿ ಆರೋಗ್ಯ ಖರ್ಚಿಗೆ ಸಹಾಯ ಮಾಡಿ ಮುಂದೆಯೂ ನೆರವಾಗುವ ಭರವಸೆ ನೀಡಿದ್ದರು. ಆದರೆ ಹೆತ್ತ ಮಗುವನ್ನೇ ಜೀವಂತ ಸಮಾಧಿ ಮಾಡಲೆತ್ನಿಸಿದರು ಎಂಬ ಸುಳ್ಳು ಪ್ರಚಾರ ಹಾಗೂ ಬದುಕುಳಿಯದೇ ಕೊನೆಗೂ ಕಣ್ಮರೆಯಾದ ಮಗು ಈಗ ಹೆತ್ತವರು ಹಾಗೂ ಸಮಾಜಕ್ಕೆ ಅಮಿತ ದುಖಃ ಮಡುಗಟ್ಟಿಸಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.