ಉತ್ತಮ ಸಮಾಜಕ್ಕಾಗಿ

ಇಂದು ನಡೆದ ಹಾಸ್ಯಸಂಜೆ ಹಾಗೂ ಕವಿಗೋಷ್ಠಿಯನ್ನು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಹಾಗೂ ರಾಮಕೃಷ್ಣ ಮರಾಠೆ ಉದ್ಘಾಟಿಸಿದರು.

Police poetry fame: Ramakrishna Marathe

0

ಬೆಳಗಾವಿ: (news belgaum)ಯುಗಾದಿ ಹಬ್ಬದ ನಿಮಿತ್ತ ನಗರ ಪೊಲೀಸ್ ವತಿಯಿಂದ ಇಂದು ನಡೆದ ಹಾಸ್ಯಸಂಜೆ ಹಾಗೂ ಕವಿಗೋಷ್ಠಿಯನ್ನು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಹಾಗೂ ರಾಮಕೃಷ್ಣ ಮರಾಠೆ ಉದ್ಘಾಟಿಸಿದರು. ಪೊಲೀಸ್ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳು ತಮ್ಮ ಸ್ವರಚಿತ ಪದ್ಯಗಳು ಹಾಗೂ ಇಷ್ಟದ ಕವನಗಳನ್ನು ವಾಚಿಸಿ ಕಾವ್ಯದ ಹಲವು ಮುಖಗಳನ್ನು ವಾಚಿಸಿ ಸಂಭ್ರಮ ಪಟ್ಟರು.
News Belgaum-ಪೊಲೀಸ್ ಕಾವ್ಯಯಾತ್ರೆ ಸ್ತುತ್ಯಾರ್ಹ: ರಾಮಕೃಷ್ಣ ಮರಾಠೆ News Belgaum-ಪೊಲೀಸ್ ಕಾವ್ಯಯಾತ್ರೆ ಸ್ತುತ್ಯಾರ್ಹ: ರಾಮಕೃಷ್ಣ ಮರಾಠೆ 1ಪೊಲೀಸರು ಮತ್ತು ಪೊಲೀಸ್ ಕುಟುಂಬ ವರ್ಗದವರು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕಿಕ್ಕಿರಿದು ಸೇರಿದ್ದರು. ರಾಮಕೃಷ್ಣ ಮರಾಠೆ ಮಾತನಾಡಿ ಅನುಭವಪೂರ್ವಕ ಮತ್ತು ವಾಸ್ತವ ನೆಲೆಗಟ್ಟಿನ ಕವನ ವಾಚನಗಳನ್ನು ಪೊಲೀಸ್ ಸಿಬ್ಬಂಧಿ ವಾಚಿಸಿದ್ದು ಅದ್ಭುತ ಕಾವ್ಯ ಲಹರಿ ಎಂದು ಮರಾಠ ಬಣ್ಣಿಸಿದರು. ‘…ಮಡದಿ ಇದ್ದರೆ ಸಾಕು ಇನ್ಯಾಕೆ ಬೇಕು ಯುಗಾದಿ… ಅಂತಹ ಪದ್ಯಗಳಿಂದ ಹಿಡಿದು ತಾಯಿ, ಸಹೋದರಿ, ತಿಂಡಿ-ತೀರ್ಥ ಗಳ ಮೇಲೆ & ಅಪರೂಪ ಪ್ರಸಂಗಗಳ ಬಗ್ಗೆ ಮೂಡಿಬಂದ ಕವನಗಳು ಆಕರ್ಷಕ ಎಂದರು. ಸರಕಾರಿ ಶ್ರೇಣಿ ವ್ಯವಸ್ಥೆಯ ಆಚೆ ನಡೆದಿರುವ ಈ ಕಾರ್ಯಕ್ರಮ ‘ಪೊಲೀಸ್ ಕಾವ್ಯ ಯಾತ್ರೆಯೇ ಸರಿ’ ಎಂದರು. ಮನಸ್ಸಿನ ಒತ್ತಡ ನಿವಾರಣೆ ಮತ್ತು ಸುಪ್ತ ಪ್ರತಿಭೆ ಅನಾವರಣಕ್ಕೆ ಹಾಸ್ಯ ಸಂಜೆ ಮತ್ತು ಕವಿಗೋಷ್ಠಿ ಏರ್ಪಡಿಸುವುದು ಸ್ತುತ್ಯಾರ್ಹ. ಇಲಾಖೆಯ ರಾಜ್ಯಮಟ್ಟದ ಕವಿಗೋಷ್ಠಿ ಬೆಳಗಾವಿಯಲ್ಲಿ ನಡೆಸಬೇಕು ಎಂದು ಮರಾಠೆ ಸಲಹೆ ನೀಡಿದರು.
ನಿದ್ದೆಗೊಂದು ನಿದ್ದೆ ಮರಣವಾಗಬೇಕು. ಬೆಳಿಗ್ಗೆ ಎದ್ದಾಗ ಬಾಲಕನಾಗಬೇಕು ಮಧ್ಯಾಹ್ನ ಯುವಕ, ಸಂಜೆ ಮುದುಕನಾಗಿ ಹಾಗೂ ರಾತ್ರಿ ಉತ್ತಮ ನಿದ್ದೆಯಾಚೆ ಬೆಳಿಗ್ಗೆ ಬಾಲಕನ ಚಿಲುಮೆ-ಒಲುಮೆಯಂತೆ ಜೀವನ ಫ್ರೇಶ್ ಆಗಬೇಕು ಎಂಬ ಮಹಾನ್ ಕವಿ ಬೇಂದ್ರೆ ಆಶಯ ಕವನವನ್ನು ಮರಾಠೆ ಭಾಷಣದಲ್ಲಿ ಉಲ್ಲೇಖಿಸಿದರು. ಪತ್ರಕರ್ತ ಭೈರೋಬಾ ಕಾಂಬಳೆ ಹಾಗೂ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಕವನ ವಾಚಿಸಿದರು. ಕವನ ವಾಚಕರೆಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು.
ಡಿಸಿಪಿ ಸೀಮಾ ಲಾಟಕರ, ಮಹಾನಿಂಗ ನಂದಗಾವಿ, ಗುಪ್ತವಾರ್ತೆ ಎಸ್ಪಿ ಬಸವಣ್ಣ ಹಾಗೂ ನಗರದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. Police poetry fame: Ramakrishna Marathe

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.