ಉತ್ತಮ ಸಮಾಜಕ್ಕಾಗಿ

ವಿಸ್ಮಯ ಮೂಡಿಸಿದ ರಾಜಕೀಯ ಪಟುಗಳು!

news belagavi

0

ಬೆಳಗಾವಿ: (news belgaum)ಅತ್ತ ಸಾಂಬ್ರಾದಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಸಿಂಗಲ್ ಶಬ್ದ ಒಡೆಯದೇ ಮುಖ ಮರೆಮಾಚಿಕೊಂಡಿದ್ದವರು, ಇತ್ತ ಜಿಐಟಿ ಅಮೃತ ಮಹೋತ್ಸವ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಸಚಿವ ರಮೇಶ ಜಾರಕಿಹೊಳಿ ಸಹೋದರ ಶಾಸಕ ಸತೀಶ ಜಾರಕಿಹೊಳಿ ಪಕ್ಕವೇ ಕುಳಿತುಕೊಳ್ಳುವ ಆಕಸ್ಮಿಕದಲ್ಲಿ ಕಾಣಿಸಿಕೊಂಡರು.
ಸಿಎಂ ಕಾರಿನಲ್ಲಿ ಆಗಮಿಸಿದ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ ಹಾಲ್ ನಲ್ಲಿ ಬರುತ್ತಿದ್ದಂತೆ ವಿಐಪಿಗಳಿಗೆ ಒದಗಿಸಿದ್ದ ಆಸನದಲ್ಲಿ ಶಾಸಕ ಸತೀಶ ಜಾರಕಿಹೊಳಿ ಪಕ್ಕವೇ ಕುಳಿತಿದ್ದರು. ಇಬ್ಬರೂ ನಾಯಕರ ಮುಖದಲ್ಲಿ ಗೆಲುವು ಕಾಣದಿದ್ದರೂ ಪರಸ್ಪರ ಲೊಕಾಭಿರಾಮ ಸಂಭಾಷಣೆ ನಡೆಸಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು.
ರಾಜಕೀಯ ಗುದ್ದಾಟ, ಪಿಎಲ್ಡಿ ಬ್ಯಾಂಕ್‌ ನ ಚುನಾವಣೋತ್ತರ ಮುನಿಸು ಸರಕಾರವೇ ಅಲುಗಾಡುವ ಮಟ್ಟಕ್ಕೆ ಡೆವಲಪ್ ಆಗಿತ್ತು ಎಂಬುವುದು ಈಗ ಸಾರ್ವಜನಿಕ ಚರ್ಚೆಯ ಜೀವಾಳವೂ ಸಹ. ಕೆಎಲ್ಎಸ್ ಅಮೃತ ಮಹೋತ್ಸವ ಇಬ್ಬರೂ ನಾಯಕರನ್ನು ತಹಬದಿಗೆ ತಂದಿತು ಎಂಬ ಚರ್ಚೆ ಗರಿಗೆದರಿಸಿದೆ.Politicians Who Amazed!

Leave A Reply

 Click this button or press Ctrl+G to toggle between Kannada and English

Your email address will not be published.