ಉತ್ತಮ ಸಮಾಜಕ್ಕಾಗಿ

ಇತರ ಪ್ರಮುಖ ನಗರಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಚರಿಸಿ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.: ಬಾಬಾಗೌಡ ಪಾಟೀಲ

Politics makes JDS, Kumarapravarti start: Baba Gowda Patil

0

ಬೆಳಗಾವಿ:(news belagavi)ಬೆಳಗಾವಿ ಗ್ರಾಮೀಣ, ಅಥಣಿ, ಬೈಲಹೊಂಗಲ, ಹಿರೇಬಾಗೆವಾಡಿ ಸೇರಿ ಜಿಲ್ಲೆಯ ಇತರ ಪ್ರಮುಖ ನಗರಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಚರಿಸಿ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ ಮಾಡಲಗಿ ಎಪ್ರಿಲ್ 9ಕ್ಕೆ ಸುಕ್ಷೇತ್ರ ಬಸವನಬಾಗೇವಾಡಿಯಿಂದ ಹೊರಟು ಅಥಣಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ನಂತರ ಬೈಲಹೊಂಗಲದ ಕಾರ್ಯಕರ್ತರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದು, ನಂತರ ಹಿರೆಬಾಗೆವಾಡಿ ಸಾರ್ವಜನಿಕ ಸಭೆ ನಡೆಸಿ ನಂತರ ಧಾರವಾಡ ಜಿಲ್ಲೆಯ ನವಲಗುಂದ ನರಗುಂದ ಭಾಗದತ್ತ ಸಮಾವೇಶಕ್ಕಾಗಿ ಹೊರಡಲಿದ್ದಾರೆ ಎಂದರು.
ಜಗದೀಶ ಮೆಟಗುಡ್ ಅವರು ಹಿರಿಯರು, ಅವರು ಜೆಡಿಎಸ್ ಗೆ ಬಂದು ಬೈಲಹೊಂಗಲ ಅಭ್ಯರ್ಥಿಯಾದರೆ ಪರವಾಗಿಲ್ಲ. ನಾನು ಪಕ್ಷದ ನಿರ್ಧಾರ ಸ್ವಾಗತಿಸುತ್ತೇನೆ. ಜಗದೀಶ ಮೆಡಗುಡ್ ಬೆಳಿಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿ, ಸಂಜೆ ಜೆಡಿಎಸ್ ಪಕ್ಷ ಸೇರುತ್ತಾರೆ ಎಂದು ಶಂಕರ ಮಾಡಲಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಖಾನಾಪುರಕ್ಕೆ ನಾಸೀರ ಬಾಗವಾನ, ಬೈಲಹೊಂಗಲ ಶಂಕರ ಮಾಡಲಗಿ, ಬೆಳಗಾವಿ ಗ್ರಾಮೀಣ ಶಿವನಗೌಡ ಪಾಟೀಲ ಸೇರಿದಂತೆ ಇತರ ಕ್ಷೇತ್ರಗಳಿಗೆ ಟಿಕೇಟ್ ಸಿಗಲಿದೆ ಎಂದರು.
ನಾನು ಕಾಂಗ್ರೆಸ್ ನಲ್ಲಿ ದ್ರೋಹ ಮತ್ತು ಮೋಸಕ್ಕೆ ಒಳಗಾಗಿ ನಾನು ಕಾಂಗ್ರೆಸ್ ತೊರೆದು ಈಗ ಜೆಡಿಎಸ್ ಸೇರಿದ್ದೇನೆ. ಕಾಂಗ್ರೆಸ್ ಮೋಸ ಮಾಡುವ ಜೊಳ್ಳು ಸರಕಾರ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ಜೆಡಿಎಸ್ ಪಕ್ಷ ಒಂದು ಜನರಿಗೆ ಆಶಾದಾಯಕ ಪಕ್ಷವಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲಿದ್ದಾರೆ. ಜೆಡಿಎಸ್ ರೈತರ ಕಲ್ಯಾಣಕ್ಕೆ ದಿಢೀರ್ ನಿರ್ಧಾರಗಳನ್ನು ಪ್ರಕಟಿಸಲಿದೆ. ಬ್ಯಾಂಕ್ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ನೊಟೀಸ್ ಕಳಿಸಿದರೆ ಎಚ್ಚರ ಎಂದು ಬೆಳಗಾವಿ ಗ್ರಾಮೀಣ ಅಭ್ಯರ್ಥಿ ಶಿವನಗೌಡ ಪಾಟೀಲ ತಿಳಿಸಿದರು. ಜೆಡಿಎಸ್ ನಲ್ಲಿ ಕಡಿಮೆ ಕಾರ್ಯಕರ್ತರಿದ್ದರು ಧೀರರಾಗಿದ್ದಾರೆ ಎಂದರು.
ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಜೆಡಿಎಸ್ ನ ಹಿರಿಯ ಮುಖಂಡರು ಆಗಮಿಸಲಿದ್ದು ಬೆಳಗಾವಿ ಭಾಗದಲ್ಲಿ ಜೆಡಿಎಸ್ ಚೈತನ್ಯಗೊಂಡಿದೆ ಎಂದು ಶಂಕರ ಮಾಡಲಗಿ ತಿಳಿಸಿದರು. ಕರ್ನಾಟಕದಲ್ಲಿ ರಾಜಕೀಯ ಹೊಸ ಪರ್ವ ಪ್ರಾರಂಭವಾಗಲಿದೆ. ರಾಷ್ಟ್ರಮಟ್ಟದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಬಿಜೆಪಿ ಬಡ ವರ್ಗದ ಬಗ್ಗೆ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಅಸಡ್ಡೆ ಮಾಡಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಬೇರೆ ದೇಶದಿಂದ ಆಹಾರ ಆಮದು ಮಾಡಿಕೊಂಡಿದ್ದು ಅವಮಾನಕರ ವಿಷಯ ಎಂದರು. ಇತ್ತೀಚೆಗೆ ಅಮಿತ ಶಾ ಹಸಿರು ಟವೆಲ್ ಹಾಕಿ ಸಮಾವೇಶದಲ್ಲಿ ಭಾಷಣ ಮಾಡುತ್ತಾರೆ. ಆದರೆ ಅವರ ಒಳಮನಸ್ಸು ಮಾತ್ರ ಹಸಿರಾಗಿಲ್ಲ. ದೊಡ್ಡ ಉದ್ಯಮಿಗಳ ಮೇಲೆ ರೇಡ್ ಮಾಡಿ ಅವರಿಂದ ಪಾರ್ಟಿ ಪಂಡ್ ದೋಚಲಾಗುತ್ತಿದೆ ಎಂದು ಬಾಬಾಗೌಡ ಅಸಮಧಾನ ವ್ಯಕ್ತಪಡಿಸಿದರು. ಧರ್ಮ ಎಂಬುವುದು ಅವರವರ ವೈಯಕ್ತಿಕ ವಿಚಾರ, ಬಸವರಾಜ ಹೊರಟ್ಟಿ ಅವರದು ವೈಯಕ್ತಿಕ ಅಭಿಪ್ರಾಯದ ಲಿಂಗಾಯತ ಧರ್ಮ ಹೋರಾಟವಾಗಿದೆ. ರಾಷ್ಟ್ರಹಿತಕ್ಕೆ, ಕಾಲನ ಕರೆಗೆ ತಕ್ಕಂತೆ ಇತರರ ತಪ್ಪುಗಳಲ್ಲಿ ಕೆಲವನ್ನು ಕ್ಷಮಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಪಕ್ಷಗಳೊಂದಿಗಿನ ಹೊಂದಾಣಿಕೆಯನ್ನು ಬಾಬಾಗೌಡ ಸಮರ್ಥಿಸಿಕೊಂಡರು.
ಜೆಡಿಎಸ್ ಪಕ್ಷ, ಬಿಎಸ್ಪಿಯೊಂದಿಗೆ ಸೇರಿ ಕನಿಷ್ಠ 100ರ ಮೇಲೆ ಸೀಟ್ ಗೆಲ್ಲಲಾಗುವುದು, ವೃದ್ಧರು, ೬ ಸಾವಿರ ಮಾಸಾಶನ ಪಡೆಯಲಿದ್ದಾರೆ, ಅಂತರ್ಜಲವನ್ನು ಚಾರ್ಜ್(ವೃದ್ಧಿ) ಮಾಡುವ ಕೆಲಸ ಜೆಡಿಎಸ್ ಮಾಡಲಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಒತ್ತಿ ಹೇಳಿದರು. ಆಹಾರ, ಆರೋಗ್ಯ, ಶಿಕ್ಷಣಕ್ಕೆ ನಮ್ಮ ಒತ್ತು. ಬುಲೆಟ್ ಟ್ರೆನ್, ಏರ್ಪೋರ್ಟ್ ನಿರ್ಮಾಣ ನಮ್ಮ ಆದ್ಯತೆಗಳು ಅಲ್ಲ. ಜೆಡಿಎಸ್ ಪ್ರಾಬ್ಲಮ್ ಸಂಬಂಧಿ ವಿಷಯಗಳಡಿ ಎಲೆಕ್ಷನ್ ಎದುರಿಸುತ್ತದೆ ಎಂದರು.
ಫೈಜುಲ್ಲಾ ಮಾಡಿವಾಲೆ, ಖಲೀಂ ಮಾಡಿವಾಲೆ ಇತರರು ಉಪಸ್ಥಿತರಿದ್ದರು.Politics makes JDS, Kumarapravarti start: Baba Gowda Patil

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.