ಉತ್ತಮ ಸಮಾಜಕ್ಕಾಗಿ

ಅಂಗೈಯಲ್ಲಿ ಮತಗಟ್ಟೆ ಮಾಹಿತಿ: ವಿಲಕಚೇತನರಿಗೆ ಗಾಲಿಕುರ್ಚಿ: ರಾಮಚಂದ್ರನ್ ‘ದೇಶದ ಅಭಿವೃದ್ಧಿಗೆ ಮತ ಚಲಾಯಿಸಿ’

Polling Information at Palms: Wheelchairs to Devotees: Ramachandran Vote for 'Development of the Country'

0

ಬೆಳಗಾವಿ:(news belagavi) ಉತ್ತಮ ಆಡಳಿತ ಹಾಗೂ ದೇಶದ ಅಭಿವೃದ್ಧಿಗಾಗಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಅಗತ್ಯವಿದ್ದು, ಇದಕ್ಕಾಗಿ ಮೇ 12ರಂದು ಪ್ರತಿಯೊಬ್ಬ ನಾಗರಿಕರು ವಿಶೇಷವಾಗಿ ಯುವಕರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು ಕರೆ ನೀಡಿದರು.
ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಶುಕ್ರವಾರ(ಏ.13) ಆಯೋಜಿಸಲಾಗಿದ್ದ ಮತದಾರ ಜಾಗೃತಿ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಗಂಟಗಟ್ಟಲೇ ಫೇಸ್ಬುಕ್, ವಾಟ್ಸಾಪ್ ಚಾಟಿಂಗ್ ನಡೆಸುವ ಯುವಕರು ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೇವಲ ಹದಿನೈದು ನಿಮಿಷ ಸರದಿಯಲ್ಲಿ ನಿಂತು ಮತ ಚಲಾವಣೆಗೆ ಮುಂದಾಗಬೇಕು.
ತಾವು ಮತ ಚಲಾಯಿಸುವುದರ ಜತೆಗೆ ತಮ್ಮ ಸ್ನೇಹಿತರು, ಪಾಲಕರು ಹಾಗೂ ನೆರೆಹೊರೆಯವರನ್ನೂ ಮತಗಟ್ಟೆಗೆ ಹೋಗುವಂತೆ ಪ್ರೇರಿಪಿಸಬೇಕು ಎಂದು ಸಲಹೆ ನೀಡಿದರು.

ಅಂಗೈಯಲ್ಲೇ ಮತಗಟ್ಟೆ ಮಾಹಿತಿ:
News Belgaum-ಅಂಗೈಯಲ್ಲಿ ಮತಗಟ್ಟೆ ಮಾಹಿತಿ: ವಿಲಕಚೇತನರಿಗೆ ಗಾಲಿಕುರ್ಚಿ: ರಾಮಚಂದ್ರನ್ ‘ದೇಶದ ಅಭಿವೃದ್ಧಿಗೆ ಮತ ಚಲಾಯಿಸಿ’ News Belgaum-ಅಂಗೈಯಲ್ಲಿ ಮತಗಟ್ಟೆ ಮಾಹಿತಿ: ವಿಲಕಚೇತನರಿಗೆ ಗಾಲಿಕುರ್ಚಿ: ರಾಮಚಂದ್ರನ್ ‘ದೇಶದ ಅಭಿವೃದ್ಧಿಗೆ ಮತ ಚಲಾಯಿಸಿ’ 1ಮೊದಲಿನಂತೆ ಮತಗಟ್ಟೆ ಹುಡುಕಿಕೊಂಡು ಅಲೆಯುವ ಅಗತ್ಯವಿಲ್ಲ; ಮೊಬೈಲ್‍ನಲ್ಲೇ ನಮ್ಮ ಮತಗಟ್ಟೆ ಮಾಹಿತಿಯನ್ನು ಪಡಯಬಹುದು ಎಂಬುದನ್ನು ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ತೋರಿಸಿಕೊಟ್ಟರು.
ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರ ಮತದಾರರ ಗುರುತಿನ ಚೀಟಿ ಪಡೆದುಕೊಂಡು ಅದರಲ್ಲಿರುವ ಎಪಿಕ್ ಸಂಖ್ಯೆಯನ್ನು ತಮ್ಮ ಮೊಬೈಲ್‍ನಲ್ಲಿಯೇ ಟೈಪ್ ಮಾಡಿ KAEPIC<SPACE>EPICNUMBER> 9731979899 ಸಂಖ್ಯೆಗೆ ಕಳುಹಿಸಿದರು.
ತಕ್ಷಣವೇ ಬಂದ ಮಾಹಿತಿಯನ್ನು ಯುವಕರಿಗೆ ಪ್ರದರ್ಶಿಸಿದ ಅವರು, ತಂತ್ರಜ್ಞಾನ ಬಳಕೆಯಿಂದ ಮತದಾರರ ಕೆಲಸ ಸುಲಭವಾಗಿದ್ದು, ಇದನ್ನು ಬಳಸಿಕೊಂಡು ಮತದಾನ ಮಾಡಬೇಕು ಎಂದು ಹೇಳಿದರು.

ಮತದಾರ ಸ್ನೇಹಿ ಮತಗಟ್ಟೆ:
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಬಾರಿ ಎಲ್ಲ ಕಡೆಗಳಲ್ಲೂ ಮತದಾರ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುಚ್ಛಕ್ತಿ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ರಾಮಚಂದ್ರನ್ ಹೇಳಿದರು.
ಹಿರಿಯ ನಾಗರಿಕರಿಗೆ ಸರದಿಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಅದೇ ರೀತಿ ಮತಗಟ್ಟೆಗೆ ಆಗಮಿಸುವ ವಿಕಲಚೇತನರಿಗೆ ಅಗತ್ಯವಿರುವ ಗಾಲಿಕುರ್ಚಿಗಳನ್ನು ಕೂಡ ಒದಗಿಸಲಾಗುತ್ತಿದೆ. ಎಲ್ಲರಿಗೂ ಮತದಾನದ ಅವಕಾಶ ಕಲ್ಪಿಸಲು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಅವರು ಎಲ್ಲ ರೀತಿಯ ಸಿದ್ಧತೆ ಮಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಸಮ ಪ್ರಮಾಣದಲ್ಲಿರುವ ಮಹಿಳೆಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವುದು ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ಮಹಿಳೆಯು ಮತ ಚಲಾಯಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕೈಜೋಡಿಸಬೇಕು ಎಂದು ರಾಮಚಂದ್ರನ್ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಜೆ.ಪಾಟೀಲ ಅವರು, ಯುವಕರು ಮತದಾನದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಎಸ್.ಪಿ.ಹಿರೇಮಠ, ಗಿರೀಶ್ ಪರ್ವತಮಠ, ಮಂಜುಳಾ ಎಮ್ಮಿ, ನಿತೀಶ್ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಮತದಾರರ ಜಾಗೃತಿ ರ್ಯಾಲಿ:
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ಅವರು ಆರ್.ಎನ್.ಶೆಟ್ಟಿ ಕಾಲೇಜು ಆವರಣದಲ್ಲಿ ಮತದಾರರ ಜಾಗೃತಿ ರ್ಯಾಲಿಗೆ ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ರ್ಯಾಲಿಯು ರಾಣಿ ಚನ್ನಮ್ಮ ವೃತ್ತದ ಮೂಲಕ ಧರ್ಮವೀರ ಸಂಭಾಜಿ ವೃತ್ತ(ಬೋಗಾರವೇಸ್) ತಲುಪಿತು.
ರ್ಯಾಲಿಯಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತದಾರರ ಜಾಗೃತಿ ಘೋಷಣೆ ಕೂಗುತ್ತ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.polling-information-at-palms-wheelchairs-to-devotees-ramachandran-vote-for-development-of-the-country

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.