ಉತ್ತಮ ಸಮಾಜಕ್ಕಾಗಿ

ವಾರ್ತಾಭವನದಲ್ಲಿ ಪತ್ರಕರ್ತರಿಗೆ ಪ್ರಾಣಿಕ್ ಹೀಲಿಂಗ್ ಶಿಬಿರ ಪ್ರಾಣಿಕ್ ಹೀಲಿಂಗ್ ಪೂರಕ ಚಿಕಿತ್ಸೆ: ವಿಶ್ವನಾಥ

0

ಬೆಳಗಾವಿ, ಭೌತಿಕ ಶರೀರಕ್ಕೆ ಔಷಧಿ ಚಿಕಿತ್ಸೆಯ ಜತೆ ಜತೆಗೆ ಪ್ರಾಣ ಶಕ್ತಿ ಚಿಕಿತ್ಸೆ ಬಹು ಪರಿಣಾಮಕಾರಿಯಾಗಿದ್ದು ಯೋಗ ಮತ್ತು ಪ್ರಾಣಿಕ್ ಹಿಲೀಂಗ್ ನಂಥ ಔಷಧಿರಹಿತ ಚಿಕಿತ್ಸೆಗಳು ಸಂಪೂರ್ಣ ಆರೋಗ್ಯಕ್ಕೆ ಪೂರಕವಾಗಿವೆ ಎಂದು ವಲ್ರ್ಡ್ ಪ್ರಾಣಿಕ್ ಹೀಲಿಂಗ್ ಫೌಂಡೇಶನ್‍ನ ತರಬೇತಿದಾರ ಟಿ. ವಿಶ್ವನಾಥ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಆಶ್ರಯದಲ್ಲಿ ಶನಿವಾರ ವಾರ್ತಾ ಇಲಾಖೆ ಸಭಾಭವನದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ 5 ದಿನಗಳ ಉಚಿತ ಪ್ರಾಣಿಕ್ ಹೀಲಿಂಗ್ ತರಬೇತಿ ಕಾರ್ಯಕ್ರಮ ಉz್ದÉೀಶಿಸಿ ಅವರು ಮಾತನಾಡಿದರು.
“ವೈದ್ಯರು ಭೌತಿಕ ಶರೀರಕ್ಕೆ ಔಷಧಿಗಳ ಮೂಲಕ ಚಿಕಿತ್ಸೆ ಕೊಡುತ್ತಾರೆ. ಆದರೆ ಯೋಗ, ಧ್ಯಾನ ಮತ್ತು ಪ್ರಾಣಿಕ್ ಹೀಲಿಂಗ್‍ನಂತಹ ಪೂರಕ ಚಿಕಿತ್ಸೆಗಳು ಮನುಷ್ಯ ಚೈತನ್ಯವಾದ ಪ್ರಾಣವನ್ನು ಚೈತನ್ಯಗೊಳಿಸುವ ಮೂಲಕ ಆರೋಗ್ಯ ನೀಡುತ್ತದೆ. ಪ್ರಾಣಮಯ ಶರೀರದ ತೊಡಕುಗಳನ್ನು ನಿವಾರಿಸಿ ರೋಗವನ್ನು ಗುಣಪಡಿಸುವ ಬಹುಪ್ರಾಚೀನ ಪದ್ಧತಿಯೇ ಪ್ರಾಣಿಕ್ ಹೀಲಿಂಗ್ ಆಗಿದೆ. ಪ್ರಾಣಿಕ್ ಹೀಲಿಂಗ್ ಅಭ್ಯಾಸದಿಂದ ರೋಗ ನಿವಾರಣೆ ಜತೆಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ. ಪರಸ್ಪರ ಸಂಬಂಧಗಳು ಸುಧಾರಿಸುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಮನಶ್ಯಾಂತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ” ಎಂದು ಹೇಳಿದರು.
ಪತ್ರಕರ್ತರಿಗಾಗಿ ಎಂದೇ ವಿಶೇಷವಾಗಿ ಪ್ರಾಣಿಕ್ ಹೀಲಿಂಗ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ದೇಶದಲ್ಲಿಯೇ ಪ್ರಥಮ ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯP್ಷÀ ಮುರಗೇಶ ಶಿವಪೂಜಿ ಮಾತನಾಡಿ, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಹೊರತುಪಡಿಸಿ ಬಹಳಷ್ಟು ಚಿಕಿತ್ಸಾ ಪದ್ಧತಿಗಳು ನಮ್ಮಲ್ಲಿ ಲಭ್ಯವಿದೆ. ಆದರೆ ಕೆಲವೇ ಕೆಲವು ನುರಿತ ತರಬೇತಿದಾರರು ನಮ್ಮ ನಡುವೆ ಇದ್ದಾರೆ. ಇಂತಹ ಪದ್ದತಿಗಳ ಬಗ್ಗೆ ಜನತೆಗೆ ಅರಿವು ಮೂಡಿಸಬೇಕಾಗಿದೆ ಎಂದರು.
ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಎಂ.ಎಸ್.ಚೌಗಲಾ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜೇಶ ವೈದ್ಯ ಸ್ವಾಗತಿಸಿದರು.
ಬೆಳಿಗ್ಗೆ 7 ಕ್ಕೆ ಪ್ರಾರಂಭವಾದ ಪ್ರಾಣಿಕ್ ಹೀಲಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಹಲವಾರು ಪತ್ರಕರ್ತರು ಭಾಗವಹಿಸಿದ್ದರು. ಉಚಿತ ತರಬೇತಿ ಕಾರ್ಯಕ್ರಮವು ಫೆ. 15 ರವರೆಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ವಾರ್ತಾಭವನದಲ್ಲಿ ನಡೆಯಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.