ಉತ್ತಮ ಸಮಾಜಕ್ಕಾಗಿ

ಸಂತ್ರಸ್ಥರ ಮಕ್ಕಳಿಗಾಗಿ ಪ್ರತೀಕ್ಷಾ ಎಂಟರ್‍ಪ್ರೈಜಸ್ ವತಿಯಿಂದ ಜಿಲ್ಲಾಡಳಿತದ ಮೂಲಕ 230 ಹೊಸ ಸ್ವೇಟರ್‍ಗಳನ್ನು ಕೊಡಗಿಗೆ ರವಾನಿಸಲಾಯಿತು.

news belagavi

0

ಬೆಳಗಾವಿ:(news belgaum) ಕೊಡಗಿನ ನೆರೆ ಸಂತ್ರಸ್ಥರ ಮಕ್ಕಳಿಗಾಗಿ ಪ್ರತೀಕ್ಷಾ ಎಂಟರ್‍ಪ್ರೈಜಸ್ ವತಿಯಿಂದ ಜಿಲ್ಲಾಡಳಿತದ ಮೂಲಕ 230 ಹೊಸ ಸ್ವೇಟರ್‍ಗಳನ್ನು ಕೊಡಗಿಗೆ ರವಾನಿಸಲಾಯಿತು.
ಎಂಟರ್‍ಪ್ರೈಜಸ್ ಮಾಲಿಕ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ನಗರಾಧ್ಯಕ್ಷ ಪ್ರಭು ಬೆಣ್ಣಿ ಅವರು ಈ ಸ್ವೇಟರ್‍ಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಧರ್ಮದರ್ಶಿ ಬಸವರಾಜ ರೊಟ್ಟಿ ಅವರು, ನೆರೆ ಹಾವಳಿಯಿಂದಾಗಿ ಕೊಡಗಿನ ಜನರು ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆ ನಿರಾಶ್ರಿತರ ಮಕ್ಕಳಿಗಾಗಿ ಪ್ರಭು ಬೆಣ್ಣಿ ಅವರು ಬೆಚ್ಚನೆ ಸ್ವೇಟರ್‍ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಅವರಿಗೆ ಸಮಾಜದಿಂದ ಅಭಿನಂದನೆ ಸಲ್ಲಿಸುವದಾಗಿ ಹೇಳಿದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಅವರು ಮಾತನಾಡಿ, ನೆರೆ ಹಾವಳಿಯು ಸುಂದರವಾದ ಕೊಡಗಿನ ಸೌಂದರ್ಯವನ್ನೆ ಕಸಿದುಕೊಂಡಿದೆ. ನಿರಂತರ ಮಳೆಯಿಂದಾಗಿ ಪರಿಸರ ಸಂಪೂರ್ಣವಾಗಿ ಸೀತಮವಾಗಿರುವದರಿಂದ ಅಲ್ಲಿಯ ಗಂಜಿ ಕೇಂದ್ರಗಳ ಮಕ್ಕಳು ಕಷ್ಟ ಅನುಭವಿಸುತಿದ್ದಾರೆ. ಆ ಮಕ್ಕಳ ಸುರಕ್ಷತೆಗಾಗಿ ಬೆಣ್ಣಿ ಅವರು ಹೊಸ ಸ್ವೇಟರ್‍ಗಳನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ವೀರಣ್ಣ ಬೆಣ್ಣಿ, ಶೇಖರ ಪಾಟೀಲ, ವಿಠಲ ಬೊಗಾಣಿ, ಶರಣಪ್ಪ ಜಾಲಿಹಾಳ, ಕಿರಣ ಪಾಟೀಲ, ಸುರೇಂದ್ರ ಸಂಕಣ್ಣವರ, ರಾಜು ಕುಂದಗೋಳ ಮುಂತಾದವರು ಉಪಸ್ಥಿತರಿದ್ದರು.(Pratiksha Enterprises for the children of the victims will be able to provide 230 new sweaters through district administration)

Leave A Reply

 Click this button or press Ctrl+G to toggle between Kannada and English

Your email address will not be published.