ಉತ್ತಮ ಸಮಾಜಕ್ಕಾಗಿ

ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ

news belagavi

0

ಬೆಳಗಾವಿ ಕರ್ನಾಟಕ ಲಾ ಸೊಸೈಟಿ ಅಮೃತ ಮಹೋತ್ಸವ
ಬೆಳಗಾವಿ: (news belgaum)ತೀವ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಹಾಗೂ ವೃತ್ತಿ ಕೂಡ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಶಿಕ್ಷಣ ಸಂಸ್ಥೆಗಳು ಹಾಗೂ ಯುವ ಸಮುದಾಯ ಗಮನಹರಿಸಬೇಕು ಎಂದು ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು.
ನಗರದ ಗೋಗಟೆ ಕಾಲೇಜು ಆವರಣದಲ್ಲಿ ಶನಿವಾರ (ಸೆ.15) ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಅಮೃತ ಮಹೋತ್ಸವವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 1ಕಾನೂನು ಶಿಕ್ಷಣ ಅಥವಾ ವಕೀಲಿ ವೃತ್ತಿ ಕೇವಲ ಒಂದು ವೃತ್ತಿ ಅಲ್ಲ; ಅದು ಪ್ಯಾಷನ್(ಉತ್ಸಾಹ) ಆಗಿದೆ.
ಕಾನೂನು ಪದವೀಧರರಾಗಿದ್ದ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಸತ್ಯದ ಅನ್ವೇಷಕರಾಗಿ ಕಾರ್ಯನಿರ್ವಹಿಸುತ್ತಾರೆ. 21 ನೇ ಶತಮಾನದ ಅಗತ್ಯಕ್ಕೆ ಅನುಗುಣವಾಗಿ ಕಾನೂನು ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಗಳು ಪರಸ್ಪರ ಸಮನ್ವಯದೊಂದಿಗೆ ಕಾನೂನು ಶಿಕ್ಷಣ ಮತ್ತು ವೃತ್ತಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ಕೆಎಲ್‍ಎಸ್ ಕೊಡುಗೆ ಶ್ಲಾಘನೀಯ:
News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 2ಯುವ ಸಮುದಾಯಕ್ಕೆ ಅತ್ಯುತ್ತಮ ಕಾನೂನು ಶಿಕ್ಷಣ ನೀಡುವ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಸೇವೆ ಶ್ಲಾಘನೀಯ ಎಂದು ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಸಂಸ್ಥೆಗೆ ಆಗಿನ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ರಾಜಾ ಲಖಮಗೌಡ ಅವರ ಕೊಡುಗೆ ಕೂಡ ಸ್ಮರಣಾರ್ಹ ಎಂದರು.
ಇದಕ್ಕೂ ಮುಂಚೆ ಮಾತನಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರತಿ ಕಾನೂನು ವಿದ್ಯಾರ್ಥಿಯು ಸಾಮಾಜಿಕ ಎಂಜಿನಿಯರ್ ಇದ್ದಂತೆ ಎಂದು ಬಣ್ಣಿಸಿದರು.
ಯುವಜನತೆ ಜ್ಞಾನಾರ್ಜನೆಗೆ ಅಧ್ಯಯನಶೀಲರಾಗಬೇಕು. ಅದೇ ರೀತಿ ಹಿರಿಯರು ಯುವಸಮುದಾಯವನ್ನು ನಿರ್ಲಕ್ಷಿಸಬಾರದು. ಏಕೆಂದರೆ ಪ್ರಸ್ತುತತೆಯನ್ನು ಅವರಿಂದ ಕಲಿಯಬೇಕಿರುತ್ತದೆ ಎಂದರು.
ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, 1951 ರಲ್ಲಿ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ದಿನಗಳನ್ನು ಹಾಗೂ ಅಂದಿನ ಶಿಕ್ಷಣ ವ್ಯವಸ್ಥೆಯನ್ನು ಮೆಲುಕು ಹಾಕಿದರು.
ಆಗ ಪುಸ್ತಕವೊಂದೇ ಜ್ಞಾನಾರ್ಜನೆಯ ಮಾರ್ಗವಾಗಿತ್ತು. ಇಂದಿನ ಆಧುನಿಕ ಪಠ್ಯಕ್ರಮ ಮತ್ತು ತಂತ್ರಜ್ಞಾನವು ಕಾನೂನು ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತಿಯ ಸಮ್ಮಿಶ್ರಣ:
News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 3ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, “ಬೆಳಗಾವಿಯು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಸಂಸ್ಕೃತಿಯ ಸಮ್ಮಿಶ್ರಣವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬೆಳಗಾವಿಯು ರಾಜಕೀಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತದೆ” ಎಂದು ಹೇಳಿದರು
ತಾವು ಇಲ್ಲಿ ಮೊದಲ ಅಧಿವೇಶನ ನಡೆಸಿರುವುದು ಹಾಗೂ ಸುವರ್ಣ ವಿಧಾನಸೌಧ ಸ್ಥಾಪನೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ಇಡೀ ದೇಶದ ಗಮನ ಸೆಳೆದ ಗ್ರಾಮವಾಸ್ತವ್ಯವನ್ನು ಕೂಡ ಬೆಳಗಾವಿಯಿಂದಲೇ ಆರಂಭಿಸಿರುವುದನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು.
ಸರ್ಕಾರವು ಇದೀಗ ಅನೇಕ ಇಲಾಖೆಯ ಕೇಂದ್ರ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ದೇಶದಲ್ಲಿ ಕಾನೂನು ಶಿಕ್ಷಣದ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿರುವ ಕರ್ನಾಟಕ ಲಾ ಸೊಸೈಟಿಯ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಅನೇಕ ಶಿಕ್ಷಣ-ಕಾನೂನು ತಜ್ಞರು ಮತ್ತು ಕ್ರೀಡಾಪಟುಗಳನ್ನು ಈ ಸಂಸ್ಥೆಯು ನೀಡಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.

ರಾಷ್ಟ್ರಪತಿಗಳಿಗೆ ವಿಶೇಷ ಧನ್ಯವಾದ:
News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 4ರಾಜ್ಯದ ಕೊಡುಗು ಜಿಲ್ಲೆಯಲ್ಲಿ ಇತ್ತೀಚೆಗೆ ಅತೀವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದಾಗ ಘನತೆವೆತ್ತ ರಾಷ್ಟ್ರಪತಿಗಳು ಸ್ವತಃ ಕರೆ ಮಾಡಿ ಪರಿಸ್ಥಿತಿಯ ನಿರ್ವಣೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ಧನ್ಯವಾದ ಸಲ್ಲಿಸಿದರು.
ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಘನತೆವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾ, ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ, ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ನ್ಯಾಯಮೂರ್ತಿ ವಿನೀತ್ ಸರಣ್, ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಸಂಸದ ಸುರೇಶ್ ಅಂಗಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 6ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯು ಬೆಳೆದುಬಂದ ಹಾದಿಯನ್ನು ವಿವರಿಸಿದರು.
ಇದೇ ವೇಳೆ ಅಮೃತ ಮಹೋತ್ಸವ ಕಟ್ಟಡವನ್ನು ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ರಿಮೋಟ್ ಕಂಟ್ರೋಲ್ ಮೂಲಕ ವೇದಿಕೆಯಿಂದಲೇ ಉದ್ಘಾಟಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನ್ಯಾಯಮೂರ್ತಿ ವಿ.ಎಸ್. ಮಳೀಮಠ ಹಾಗೂ ಎಸ್. ವಿ.ವೆಂಕಟರಾಮಯ್ಯ ಅವರ ಭಾವಚಿತ್ರಗಳನ್ನು ರಾಜ್ಯಪಾಲ ವಜೂಭಾಯಿ ವಾಲಾ ಅನಾವರಣಗೊಳಿಸಿದರು.
ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೆ.ಕೆ.ವೇಣುಗೋಪಾಲ್ ಆಡಿಟೋರಿಯಂ ಉದ್ಘಾಟಿಸಿದರು.

ಘನತೆವೆತ್ತ ರಾಷ್ಟ್ರಪತಿಗಳಿಗೆ ಸ್ವಾಗತ:
News Belgaum-ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ನೀಡಲು ರಾಷ್ಟ್ರಪತಿ ಕೋವಿಂದ್ ಕರೆ 5ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.
ಘನತೆವೆತ್ತ ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ರಾಷ್ಟ್ರಪತಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಸಂಸದ ಸುರೇಶ ಅಂಗಡಿ, ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ, ಐಜಿಪಿ ಅಲೋಕ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 President Kovind calls for law education in accordance with technology

Leave A Reply

 Click this button or press Ctrl+G to toggle between Kannada and English

Your email address will not be published.