ಉತ್ತಮ ಸಮಾಜಕ್ಕಾಗಿ

ಪ್ರಧಾನಮಂತ್ರಿಗಳ ಫಸಲು ವಿಮೆ ಯೋಜನೆ: ಫ್ಯೂಚರ್ ಜನರಲಿ ವಿಮಾ ಕಂಪೆನಿಗೆ ಜಾರಿ ಹೊಣೆ

Prime Minister's Farm Insurance Scheme: Future People Insurance Company is liable for enforcement

0

ಬೆಳಗಾವಿ:(news belagavi) ಪ್ರಧಾನಮಂತ್ರಿಗಳ ಫಸಲು ವಿಮಾ ಯೋಜನೆಯನ್ನು ಬೆಳಗಾವಿ, ಯಾದಗಿರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜಾರಿ ಮಾಡುವ ಜವಾಬ್ದಾರಿಯನ್ನು ಫ್ಯೂಚರ್ ಜನರಲಿ ಇಂಡಿಯಾ ಇನ್ಷುರೆನ್ಸ್ ಕಂಪೆನಿಗೆ ವಹಿಸಲಾಗಿದೆ.
ಕರ್ನಾಟಕ ಸರಕಾರ ಮೂರು ಜಿಲ್ಲೆಗಳಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿಯಾಗಿ ಜಾರಿ ಮಾಡುವ ಹೊಣೆಯನ್ನು ಈ ವಿಮಾ ಕಂಪೆನಿಗೆ ವಹಿಸಿದೆ. ಇದರಂತೆ 2018ರ ಸಾಲಿನ ಹಿಂಗಾರು ಮತ್ತು 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಯ ಕುರಿತು ಸಾಲ ಮತ್ತು ಸಾಲರಹಿತ ಬೆಳೆಗಾರರಿಗೆ ವಿಮೆಯನ್ನು ಕಂಪೆನಿ ಒದಗಿಸಲಿದೆ. ಪ್ರಧಾನಮಂತ್ರಿಗಳ ಫಸಲು ವಿಮಾ ಯೋಜನೆಯನ್ನು ರಾಜ್ಯ ಸರಕಾರದ ಕೃಷಿ ಇಲಾಖೆ ಅನುಮೋದಿಸಿದೆ.
ಬೀಜ ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನ ವರೆಗೆ ಯಾವುದೇ ರೀತಿಯಲ್ಲಿ ಬೆಳೆ ಹಾನಿಯಾದರೂ ಈ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ದೊರೆಯಲಿದೆ.ರೈತರು ತಮ್ಮ ಖಾತೆಯಿರುವ ಬ್ಯಾಂಕ್ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಯನ್ನು ವಿವರಗಳಿಗಾಗಿ ಸಂಪರ್ಕಿಸಬಹುದು. ಬೆಳೆ ಕಟಾವು ಅಧ್ಯಯನದ ಪ್ರಕಾರ ಸರಾಸರಿ ಬೆಳೆ ಮಾಹಿತಿಯನ್ನು ಆಧರಿಸಿ ರೈತರಿಗೆ ಪರಿಹಾರ ದೊರೆಯಲಿದೆ.
ಫ್ಯೂಚರ್ ಜನರಲಿ ಇಂಡಿಯಾ ವಿಮಾ ಕಂಪೆನಿ ಫ್ಯೂಚರ್ ಗ್ರೂಪ್ ಮತ್ತು ಇಟಲಿಯ ಜನರಲಿ ಇನ್ಷುರೆನ್ಸ್ ಕಂಪೆನಿಗಳ ಪಾಲುದಾರಿಕೆ ಸಂಸ್ಥೆಯಾಗಿದೆ. ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ ಅವರು ಮಾತನಾಡಿ “ಭಾರತದ ಕೃಷಿ ಕ್ಷೇತ್ರ ನಿರಂತರವಾಗಿ ಪ್ರವಾಹ, ಬರ, ಮುಂತಾದ ನೈಸರ್ಗಿಕ ವಿಕೋಪಗಳಿಗೆ ಒಳಗಾಗುತ್ತಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ದಕ್ಷಿಣ ಭಾರತದಲ್ಲಿ ಈ ಸಮಸ್ಯೆ ಹೆಚ್ಚು. ಬೆಳೆ ನಷ್ಟದ ಸಮಯದಲ್ಲಿ ರೈತರ ನೆರವಿಗೆಂದೇ ವಿಮಾ ಯೋಜನೆಯನ್ನು ರೂಪಿಸಲಾಗಿದೆ” ಎಂದು ತಿಳಿಸಿದರು.

“ಮುಸುಕಿನಜೋಳ ಹಾಗು ಜೋಳದಲ್ಲಿ ಲದ್ದಿಹುಳುವಿನ ನಿರ್ವಹಣೆ”
ಬೆಳಗಾವಿ: ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನಜೋಳ ಹಾಗು ಜೋಳಕ್ಕೆ ಲದ್ದಿಹುಳುವಿನ ಭಾದೆ ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಈ ಕೀಟದಭಾದೆ ಕಂಡುಬಂದಿತ್ತು. ಈಗ ಮುಂಗಾರು ಹಂಗಾಮಿನಲ್ಲಿ ಸದರಿ ಕೀಟದಭಾದೆ ಕಂಡುಬರುವ ಎಲ್ಲ ಸಾಧ್ಯತೆಗಳಿವೆ.
ಈ ಕೀಡೆಯು ಪತಂಗ ಜಾತಿಗೆ ಸೇರಿದ್ದು, ಈ ಕೀಡೆಗಳು ಸ್ವಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಎಲೆ ಮತ್ತು ಸುಳಿಗಳಲ್ಲಿ ಹಾಕುವುದರಿಂದ ಇದನ್ನು ‘ಲದ್ದಿಹುಳು’ ಎಂದು ಕರೆಯಲಾಗುತ್ತದೆ.
ತತ್ತಿಯಿಂದ ಹೊರಬಂದ ಮರಿಹುಳುಗಳು ಗುಂಪು ಗುಂಪಾಗಿ, ಎಲೆಯ ಅಂಚುಗಳನ್ನು ತಿನ್ನುವುದರಿಂದ ಎಲೆಯ ಮಧ್ಯನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ಪೂರ್ತಿಯಾಗಿ ತಿಂದು ನಾಶಪಡಿಸುತ್ತವೆ. ಸಾಮಾನ್ಯವಾಗಿ ಈ ಕೀಟಗಳು ಹಗಲು ವೇಳೆಯಲ್ಲಿ ಸುಳಿ, ಎಲೆ ಮತ್ತು ಕಾಂಡದ ಸಂದುಗಳು, ತೆನೆಗಳಲ್ಲಿ ಅಥವಾ ಮಣ್ಣಿನಲ್ಲಿ ಅವಿತುಕೊಂಡು ರಾತ್ರಿ ಸಮಯದಲ್ಲಿ ಹೊರಬಂದು ತೀವ್ರತರವಾದ ಹಾನಿಯನ್ನುಂಟು ಮಾಡುತ್ತವೆ. ಈ ಕೀಟಗಳು ಸ್ವಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಹಾಕುವುದರಿಂದ ಇವುಗಳ ಇರುವಿಕೆಯನ್ನು ಗುರುತಿಸಬಹುದಾಗಿದೆ.
ಲದ್ದಿ ಹುಳುವಿನ ನಿರ್ವಹಣೆಗಾಗಿ ರೈತ ಬಾಂಧವರು ಈ ಕೆಳಕಂಡ ಕ್ರಮಕೈಗೊಳ್ಳುವುದು.
ಬೆಳೆಯ ಎತ್ತರ ಕಡಿಮೆಯಿದ್ದಲ್ಲಿ, ಮೆಲಾಥಿಯಾನ್ 5%, ಎಕರೆಗೆ 10 ಕೆ.ಜಿಯಂತೆ ಧೂಳೀಕರಿಸಿ ಅಥವಾ ಲ್ಯಾಮಡಾ ಸೈಲೋಹೆಥ್ರಿನ್ 2.5 ಇಸಿ 1 ಮಿ.ಲಿ. ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಯನ್ನು 0.2 ಗ್ರಾಂ. ಅಥವಾ ಸ್ಪೈನೋಸ್ಯಾಡ್ 45 ಎಸ್.ಸಿ. ಯನ್ನು 0.2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಮೇಲೆ ಸಿಂಪರಣೆ ಮಾಡಬಹುದಾಗಿದೆ.
ಬೆಳೆಯು ಎತ್ತರವಾಗಿದ್ದಲ್ಲಿ ವಿಷ ಪಾಷಾಣ ತಯಾರಿಸಿ ಒಂದು ಎಕರಗೆ 20 ಕೆಜಿಯಂತೆ ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಸಾಯಂಕಾಲದ ಸಮಯದಲ್ಲಿ ಎರೆಚಬೇಕು (ವಿಷ ಪಾಷಾಣ ತಯಾರಿಸÀುವ ವಿಧಾನ ಪ್ರತಿ ಎಕರೆಗೆ 2 ಕೆ. ಜಿ ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಬೆರಸಿ ಅದಕ್ಕೆ 250 ಮಿ.ಲಿ ಮೊನೊಕ್ರೋಟೊಪಾಸ್ 36 ಎಸ್ ಎಲ್ ಕೀಟನಾಶಕ ಬೆರಸಿ ಈ ದ್ರಾವಣವನ್ನು 20 ಕೆ. ಜಿ ಭತ್ತ ಅಥವಾ ಗೋಧಿ ತೌÀಡಿನೊಂದಿಗೆ ಮಿಶ್ರಣ ಮಾಡಿ ರಾತ್ರಿಯಿಡೀ ಮಿಶ್ರಣವನ್ನು ಕಳಿಯಲು ಬಿಟ್ಟು ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು) ಕೀಡೆಗಳು ಈ ವಿಷ ಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆಗಳ ಸಂಖ್ಯೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಹುಳುಗಳನ್ನು ಆಕರ್ಷಿಸಿ ನಾಶ ಮಾಡಬಹುದು.
ಕೀಟಬಾಧೆ ಕಂಡ ತಕ್ಷಣ ತುರ್ತಾಗಿ ಹಾಗೂ ಸಾಮೂಹಿಕವಾಗಿ ರೈತ ಭಾಂದವರು ಹತೋಟಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಳಿ ಇಲಾಖೆ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ:  2018-19ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಲ್ಲಿ ಸೀವಿಂಗ್ ಮಷಿನ್ ಆಪರೇಟರ್ ತರಬೇತಿ, ವಿದ್ಯುತ್ ಮಗ್ಗ, ಕೈಮಗ್ಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಪಡೆದು ಕಡ್ಡಾಯವಾಗಿ ಸ್ವಯಂ ಉದ್ಯೋಗ ಕೈಗೊಳ್ಳಬೇಕು ಅಥವಾ ಬೇರೆ ಕಡೆಗೆ ತರಬೇತಿಗೆ ಸಂಬಂಧಪಟ್ಟಂತೆ ಉದ್ಯೋಗ ಮಾಡಬೇಕಾಗುತ್ತದೆ. ಈಗಾಗಲೇ ಯೋಜನೆಯಡಿ ಯಾವುದೇ ತರಬೇತಿ ಪಡೆದುಕೊಂಡಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 05 ವರ್ಷ ವಿನಾಯಿತಿ ಇರುತ್ತದೆ.
ಅರ್ಹ ಅಭ್ಯರ್ಥಿಗಳು, ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು, ವಯಸ್ಸಿನ ದಾಖಲಾತಿ, ಪ.ಜಾ ಹಾಗೂ ಪ.ಪಂ.ದವರ ಜಾತಿ ಪ್ರಮಾಣ ಪತ್ರದ ಪ್ರತಿ, ವಾಸಸ್ಥಳದ ದಾಖಲಾತಿ, ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡಗಳನ್ನು ದೃಢೀಕರಿಸಿ ಸಲ್ಲಿಸುವುದು. ಮತ್ತು ಕರ್ನಾಟಕ ಕೌಶಲ್ಯ ಮಿಷನನಲ್ಲಿ ಸದರಿ ಕೇಂದ್ರಗಳ ಮೂಲಕ ನೊಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ತರಬೇತಿ ಅವಧಿ 45 ದಿನಗಳು, ವಯೋಮಿತಿ: 18 ರಿಂದ 35 ವರ್ಷ, ಶಿಷ್ಯವೇತನ:3,500/-,

ಬೆಳಗಾವಿ ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಕೇಂದ್ರಗಳ ಮೊ.ಸಂಖ್ಯೆ:: 0831-2401162, 9972062455, 0831-2440728, ಹುಕ್ಕೇರಿ 9448634776, 9448512843, 9945031593 ರಾಮದುರ್ಗ: 7829367286, 9743259888, 9743800499, ಸವದತ್ತಿ: 9986902821, ಗೋಕಾಕ : 9008649415, ಬೈಲಹೊಂಗಲ 9538373700, ಚಿಕ್ಕೋಡಿ :9096195353, ಖಾನಾಪೂರ :9900269768, ಅಥಣಿ: 9611725589 ಸಂಪರ್ಕಿಸಬಹುದು.
ವಿದ್ಯುತ್ ಮಗ್ಗ ತರಬೇತಿ ಕೇಂದ್ರ ಬೆಳಗಾವಿ : 0831-2440728, ಕೈಮಗ್ಗ ತರಬೇತಿ ಕೇಂದ್ರ, ಶಿಂದೊಳ್ಳಿ – 9534562906 ಸಂಪರ್ಕಿಸಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.25 ರಂದು ಕರಡಿಗುದ್ದಿ ಗ್ರಾಪಂ ಗ್ರಾಮಸಭೆ
ಬೆಳಗಾವಿ:  ತಾಲೂಕಿನ ಕರಡಿಗುದ್ದಿ ಗ್ರಾಮ ಪಂಚಾಯತಿಯ 2018-19ನೇ ಸಾಲಿನ 1ನೇ ಹಂತದ ವಾರ್ಡ್ ಸಭೆ ಮತ್ತು ಗ್ರಾಮಸಭೆಯನ್ನು ಜೂನ್ 25 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸಭೆಯನ್ನು ನೋಡಲ್ ಅಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳ ಯುವಕ ಸಂಘ, ಮಹಿಳಾ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಬೇಕೆಂದು ಕರಡಿಗುದ್ದಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗೆ ಸ್ವಚ್ಛತಾ ಸಾಮಗ್ರಿಗಳ ಕಿಟ್ ವಿತರಣೆ
ಬೆಳಗಾವಿ: : ತಾಲೂಕಿನ ಹೊಸವಂಟಮುರಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ನವ್ಯ ದಿಶಾ ಸಂಸ್ಥೆ, ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆ, ಹೊಸವಂಟಮುರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಇತ್ತೀಚೆಗೆ ಶಾಲಾ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತಾ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್. ಆರ್. ಶಾಲಾ ಮೈದಾನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತಾ ಸಾಮಗ್ರಿಗಳ ಕಿಟ್ ವಿತರಿಸಿ, ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪುಂಡಲೀಕ ಅನವಾಲ, ಅಧಿಕಾರಿಗಳಾದ ಸಿದ್ಧರಾಮೇಶ್ವರ, ಶ್ರೀನಿವಾಸಗೌಡಾ, ಅನ್ನಪೂರ್ಣ, ಮಲ್ಲಿಕಾರ್ಜುನ ಕಲಾದಗಿ, ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಅರ್ಜುನ ಕಡÀಟ್ಟಿ, ನವ್ಯ ದಿಶಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ ಮಠ ಡಾ|| ಅಶೋಕ ಡಿಸೋಜಾ, ತಾಪಂ ಸದಸ್ಯರಾದ ಶ್ರೀಮತಿ ನಸ್ರೀನ್‍ಬಾನು ಸಿರಾಜಅಹಮ್ಮದ ಅನ್ಸಾರಿ, ಗ್ರಾ.ಪಂ. ಅಧ್ಯಕ್ಷರಾದ ಶಿವಪ್ಪಾ ವಣ್ಣೂರಿ, ಉಪಾಧ್ಯಕ್ಷರಾದ ಶ್ರೀಮತಿ ಮಹಾದೇವಿ ಚೌಗಲಾ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುನವಳ್ಳಿ, ಗ್ರಾಪಂ ಸದಸ್ಯರು , ನವ್ಯ ದಿಶಾ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದ ಮಹಾದೇವ. ಎಸ್. ಪಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಯೋಗದಿಂದ ರೋಗ ಮುಕ್ತ ಸಮಾಜ
ಬೆಳಗಾವಿ: ಪರಿಸರ ಪ್ರಜ್ಞೆಯೊಂದಿಗೆ ಯೋಗವನ್ನು ರೂಡಿಸಿಕೊಂಡರೆ ರೋಗ ಮುಕ್ತ ಸಮಾಜ ಕಟ್ಟಲು ಸಾಧ್ಯವೆಂದು ಚನ್ನಮ್ಮನ ಕಿತ್ತೂರ ತಹಸಿಲ್ದಾರ ಪ್ರವೀಣ ಹುಚ್ಚನವರ ಹೇಳಿದರು.
ಎಂ.ಕೆ. ಹುಬ್ಬಳ್ಳಿಯ ಶ್ರೀ ಕಲ್ಮೇಶ್ವರ ಕಲಾ ಮತ್ತು ವಾಣಿಜ್ಯ ಪ.ಪೂ ಕಾಲೇಜಿನಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ಇನ್ನಿತರ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜೂನ್ 20 ರಂದು ಹಮ್ಮಿಕೊಂಡಿದ್ದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಹಾಗೂ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿದಿನ ಯೋಗ ಮಾಡುವುದರಿಂದ ಸದೃಢ ದೇಹ, ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿಗಳಾದ ಆರ್.ಆರ್. ಮುತಾಲಿಕ ದೇಸಾಯಿ ಅವರು ಮಾತನಾಡಿ, ನೆಹರು ಯುವ ಕೇಂದ್ರದ ಕುರಿತು ಹಾಗೂ ಯೋಗದ ಮಹತ್ವ ತಿಳಿಸಿಕೊಟ್ಟರು.
ಎಸ್.ಕೆ.ಇ.ಎಸ್ ಸಮಿತಿಯ ಉಪಾಧ್ಯಕ್ಷರಾದ ವಿ.ಎಸ್. ತೋರಗಲ್ಲ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಎಸ್.ಎಂ. ಹಲಸಗಿ ಮಾತನಾಡಿದರು.

ನಿರ್ದೇಶಕರಾದ ಲಕ್ಷ್ಮಣ ಗೋಕಾಕ, ಗುರಪ್ಪ ದಡ್ಡಿ, ಬಸಪ್ಪ ಶರವನಕೊಪ್ಪ, ಅರುಣ ರಾಹುತ, ರುದ್ರಪ್ಪ ಸಂಗೋಳ್ಳಿ, ಶಿವಾನಂದ ಮೂಲಿಮನಿ, ಯೋಗ ಗುರು ಶ್ರೀಮತಿ ಕವಿತಾ ಗುರುವೈನವರ, ಲಕ್ಷ್ಮೀಗೊಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೋಗ ವಿದ್ಯಾರ್ಥಿ ರಾಹುತ ಬ ಕುಲಕರ್ಣಿ ಇವರಿಂದ ಯೋಗದ ಪ್ರದರ್ಶನ ಮಾಡಿದನು. ರಾಜಶೇಖರ ಪಾಗದ, ಕೇದರಾಲಿಂಗ ಶಂಬೋಜಿ ಕಾರ್ಯಕ್ರಮ ಉಪಸ್ಥಿತರಿದ್ದರು.
ಶ್ರೀ ಜಗದೀಶ್ವರ ಪೂಜಾರಿ ಕಾರ್ಯಕ್ರಮ ನಿರೂಪಿಸದರು. ಶ್ರೀ ಸಿ ಕೆ ಗುರುವನ್ನವರ ಸ್ವಾಗತಿಸಿದರು. ಶ್ರೀ ಬಿ ಎನ್ ಯರಗಟ್ಟಿ ವಂಧಿಸಿದರು.

ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಬೆಳಗಾವಿ:: 2018-19ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ 4 ವರ್ಷದ ತರಬೇತಿಯನ್ನು ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುವುದು.
ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿ ದಿನಾಂಕ: 30-06-2018 ರೊಳಗಾಗಿ ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್‍ನ್ನು ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಗೆ ಸಂಪರ್ಕಿಸಿಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಮಿಷನ್ ಯೋಜನೆಯಡಿ ಅರ್ಜಿ ಆಹ್ವಾನ
ಬೆಳಗಾವಿ:  ಹೊಸ ತೋಟಗಳ ಪ್ರದೇಶ ವಿಸ್ತರಣೆ (ಮಾವು, ದಾಳಿಂಬೆ, ಅಂಗಾಂಶ ಕೃಷಿ ಬಾಳೆ, ಬೀಡಿ ಹೂವು, ಸಂಕೀರ್ಣ ತಳಿ ತರಕಾರಿ, ನೀರಿನ ಮೂಲಗಳ ನಿರ್ಮಾಣ (ವೈಯಕ್ತಿಕ ಕೃಷಿ ಹೊಂಡ ಮತ್ತು ಸಮುದಾಯ ಕೃಷಿಹೊಂಡ), ಸಂರಕ್ಷಿತ ಬೇಸಾಯ (ಹಸಿರು ಮನೆ ನಿರ್ಮಾಣ, ಪಕ್ಷಿ ನಿರೋಧಕ ಬಲೆ ಮತ್ತು ಪ್ಲಾಸ್ಟಿಕ್ ಮಲ್ಚಿಂಗ್), ಕೊಯ್ಲೋತ್ತರ ನಿರ್ವಹಣೆ (ಪ್ಯಾಕ್‍ಹೌಸ್ ನಿರ್ಮಾಣ, ಸಮಗ್ರ ಪ್ಯಾಕ್‍ಹೌಸ್, ಬಾಳೆ ಮಾಗಿಸುವ ಘಟಕ), ಪ್ರಾಥಮಿಕ ಸಂಸ್ಕರಣಾ ಘಟಕ (ದ್ರಾಕ್ಷಿ ನಿರ್ಜಲೀಕರಣ ಘಟಕ, ಗೇರು ಸಂಸ್ಕರಣಾ ಘಟಕ, ಅರಿಷಿಣ ಸಂಸ್ಕರಣಾ ಘಟಕ), ಶೀತಲ ವಾಹನ, ಶೀತಲ ಘಟಕ, ತೋಟಗಾರಿಕೆಯಲ್ಲಿ ಯಾಂತ್ರಿಕರಣ (20ಹೆಚ್‍ಪಿ ಗಿಂತ ಕಡಿಮೆ) ಸಣ್ಣ ಟ್ರ್ಯಾಕ್ಟರ್, ಪಾವರ್ ಟಿಲ್ಲರ್ಸ್ ಘಟಕಗಳಿಗೆ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಣ್ಣ, ಅತೀಸಣ್ಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ರೈತರು ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕು ಕಚೇರಿಗಳಿಗೆ (ಅಥಣಿ : 08289-285099, ಬೈಲಹೊಂಗಲ:08288-233758, ಬೆಳಗಾವಿ : 0831-2431559, ಚಿಕ್ಕೋಡಿ: 08338-274943, ಗೋಕಾಕ : 08332-229382, ಹುಕ್ಕೇರಿ: 08333-265915, ಖಾನಾಪೂರ: 08336-223387, ರಾಯಬಾಗ: 08331-225049, ರಾಮದುರ್ಗ: 08335-241512 ಹಾಗೂ ಸವದತ್ತಿ : 08330-222082) ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿ ಹಾಗೂ ತಾಲ್ಲೂಕಾ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.