ಉತ್ತಮ ಸಮಾಜಕ್ಕಾಗಿ

ಖಾಸಗಿ ಸಾಲ: ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ: ಡಿಸಿ ಮತ್ತು ಎಸ್.ಪಿ ಅವರಿಗೆ ಸೂಚನೆ

news belagavi

0

ಬೆಳಗಾವಿ, : (news belgaum)ರಾಜ್ಯ ಸಮಿಶ್ರ ಸರಕಾರ ರೈತರ ಹಿತಕಾಡಲು ಬದ್ಧವಾಗಿದ್ದು, ಈಗಾಗಲೇ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸುಮಾರು ೪೫ ಸಾವಿರ ಕೋಟಿ ಮನ್ನಾ ಮಾಡಲು ಕ್ರಮಕೈಗೊಂಡಿದೆ. ಮತ್ತು ಖಾಸಗಿಯವರ ಬಳಿ ಮಾಡಿರುವ ಸಾಲಕ್ಕೆ ಸಾಲ ನೀಡಿದವರು ಕಿರುಕುಳ ನೀಡಿದರೆ ಅವರ ವಿರುದ್ಧ ಕೇಸ್ ದಾಖಲಿಸಿಬೇಕು.
ಮತ್ತು ಯಾವುದೇ ಬ್ಯಾಂಕಿನ ಮ್ಯಾನೇಜರ್ ಸಾಲದ ಹೇಸರಿನಲ್ಲಿ ರೈತರಿಗೆ ನೋಟಿಸ್ ನೀಡಿ, ಹಿಂಸಿಸಿದರೆ ಅವರ ಮೇಲೆ ಕೇಸ್ ದಾಖಲಿಸಿ, ಬಂಧಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಡಿಸಿ ಮತ್ತು ಎಸ್.ಪಿ ಅವರಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿ, ಅಹವಾಲುಗಳನ್ನು ಇಲಾಖಾವಾರು ಪ್ರತ್ಯೇಕವಾಗಿ ಮಾಡಿ, ಇಲಾಖಾ ಮುಖ್ಯಸ್ಥರ, ಹಿರಿಯ ಅಧಿಕಾರಿಗಳ ಸಭೆ ಕರೆದು ಪರಿಹರಿಸಲಾಗುವುದು.

News Belgaum-ಬೆಳಗಾವಿ ಕೆ-ಶಿಪ್ ಕಚೇರಿ ಹಾಸನ…ಕೊಡಗಿನತ್ತ: ಮತ್ತೇ ಉತ್ತರ ಕರ್ನಾಟಕಕ್ಕೆ ಅನ್ಯಾಯ?ಜನರು ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಅಧಿಕಾರಿಗಳ ಹತ್ತಿರ ಬಂದಾಗ ಸರಿಯಾಗಿ ಸ್ಪಂದಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಮತ್ತು ಆರ್ಥಿಕ ಸಹಾಯ ಕೇಳಿ ಬರುವ ಅರ್ಜಿಗಳನ್ನು ನನ್ನ ಕಚೇರಿಗೆ ಕಳಿಸಿ, ನಾನು ಕ್ರಮಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮುಂದಿನ ಎಂಟಹತ್ತು ದಿನಗಳಲ್ಲಿ ಬೆಳಗಾವಿಯಲ್ಲಿ ಈ ಭಾಗದ ರೈತ ಮುಡರ, ಜನಪ್ರತಿನಿಧಿಗಳ ಸಭೆ ಕರೆದು ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೆನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಶಾಸಕರಾದ ಸತೀಶ ಜಾರಕಿಹೊಳಿ, ಗಣೇಶ ಹುಕ್ಕೇರಿ, ಲಕ್ಷ್ಮಿ ಹೇಬ್ಬಾಳಕರ, ಅಂಜಲಿ ನಿಂಬಾಳಕರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಐಜಿಪಿ ಅಲೋಕಕುಮಾರ, ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್., ಪೊಲೀಸ್ ಕಮಿಷನರ್ ಡಾ. ಡಿ.ಸಿ.ರಾಜಪ್ಪ, ಎಸ್.ಪಿ.ಸುಧೀರ್ ಕುಮಾರ ರೆಡ್ಡಿ, ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.