ಉತ್ತಮ ಸಮಾಜಕ್ಕಾಗಿ

ಉತ್ಸವಕ್ಕೆ ಮೆರಗು ತಂದ ಕಲಾತಂಡಗಳ ಮೆರವಣಿಗೆ

0

ಬೆಳಗಾವಿ: Belgaum News  ಉತ್ಸವಕ್ಕೆ ಮೆರಗು ತಂದ ಕಲಾತಂಡಗಳ ಮೆರವಣಿಗೆ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಶುಕ್ರವಾರ (ಜ.12) ಬೆಳಿಗ್ಗೆ ವಿವಿಧ ಕಲಾತಂಡಗಳ ಅದ್ಧೂರಿ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ರಾಯಣ್ಣನ ಪ್ರತಿಮೆಗೆ ಪೂಜೆ:
ಬೆಳಿಗ್ಗೆ 6 ಗಂಟೆಗೆ ಸಂಗೊಳ್ಳಿ ರಾಯಣ್ಣ ದೇವಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತ:ಕಾಲದ ಪೂಜೆ ನೆರವೇರಿತು. ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಂಗೊಳ್ಳಿ ಅರ್ಚಕರಾದ ಶ್ರೀ ಬಸವರಾಜ ಡೊಳ್ಳಿನ ಅರ್ಚನೆ ನೆರವೇರಿಸಿದರು.

ವೀರ ಜ್ಯೋತಿ ಯಾತ್ರೆಗೆ ಪೂಜೆ:
ಚನ್ನಮ್ಮನ ಕಿತ್ತೂರಿನಿಂದ ಶುಕ್ರವಾರ ಬೆಳಿಗ್ಗೆ ಆಗಮಿಸಿದ ಶೂರ ಸಂಗೊಳ್ಳಿ ರಾಯಣ್ಣ ಜ್ಯೋತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ರಥಯಾತ್ರೆಯನ್ನು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಹಾಗೂ ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಡಾ|| ವಿಶ್ವನಾಥ ಪಾಟೀಲ ಅವರು ಬರಮಾಡಿಕೊಂಡು, ಪೂಜೆ ನೆರವೇರಿಸಿದರು. ನಂತರ ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು.

ಕಲಾತಂಡಗಳ ಮೆರವಣಿಗೆಗೆ ಚಾಲನೆ:
ಉತ್ಸವಕ್ಕೆ ಮೆರಗು ತಂದ ಕಲಾತಂಡಗಳ ಮೆರವಣಿಗೆ- Tarun krantiಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ನಂತರ ಡೊಳ್ಳು ಭಾರಿಸುವ ಮೂಲಕ ಜಾನಪದ ಕಲಾವಾಹಿನಿ ಉದ್ಘಾಟನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರಾದ ಡಾ|| ವಿಶ್ವನಾಥ ಪಾಟೀಲ ಅವರು ನೇತೃತ್ವ ವಹಿಸಿದ್ದರು.
ಡೊಳ್ಳು ಕುಣಿತ, ಹೆಜ್ಜೆ ಕುಣಿತ, ಜಗ್ಗಲಗಿ, ಬ್ಯಾಂಜೋ ಮೇಳ, ಹಲಗೆ ಮೇಳ, ಗೊಂಬೆ ಕುಣಿತ, ಯಕ್ಷಗಾನ, ವೀರಗಾಸೆ ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ನೂರಾರು ಯುವತಿಯರು ಹಾಗೂ ಮಹಿಳೆಯರು ಕುಂಭ ಹಾಗೂ ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಡಾ|| ವಿಶ್ವನಾಥ ಪಾಟೀಲ, ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವಸ್ತು ಪ್ರದರ್ಶನ-ವಿವಿಧ ಮಳಿಗೆಗಳ ಉದ್ಘಾಟನೆ
ಉತ್ಸವಕ್ಕೆ ಮೆರಗು ತಂದ ಕಲಾತಂಡಗಳ ಮೆರವಣಿಗೆ- Tarun kranti 1 Belgaum News  ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಪಕ್ಕದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಹಾಗೂ ಮಳಿಗೆಗಳನ್ನು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಉದ್ಘಾಟಿಸಿ, ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.
ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಡಾ|| ವಿಶ್ವನಾಥ ಪಾಟೀಲ, ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ, ಬೈಲಹೊಂಗಲ ಕೈಗಾರಿಕಾ ವಿಸ್ತೀರ್ಣಾಧಿಕಾರಿ ಎ.ಐ. ಪಠಾಣ, ತಾಲೂಕು ಪಂಚಾಯತ ಸದಸ್ಯ ಗೌಸಸಾಬ ಬುಡ್ಡೇಮುಲ್ಲಾ, ಗ್ರಾಮ ಪಂಚಾಯತ ಅಧ್ಯಕ್ಷರಾದ ಯಲ್ಲವ್ವ ಹಳಮನಿ, ಉಪಾಧ್ಯಕ್ಷರಾದ ಬಸವರಾಜ ಕೊಡ್ಲಿ ಹಾಗೂ ಸದಸ್ಯರು ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

30 ವಿವಿಧ ಮಳಿಗೆಗಳು:
ವಸ್ತು ಪ್ರದರ್ಶನದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು, ಸ್ವಸಹಾಯ ಸಂಘಗಳು, ಕುಶಲ ಕರ್ಮಿ ವಸ್ತುಗಳ ಮಳಿಗೆಗಳು ಸೇರಿದಂತೆ 30 ವಿವಿಧ ಮಳಿಗೆಗಳನ್ನು ಹಾಕಲಾಗಿದೆ ಎಂದು ಬೈಲಹೊಂಗಲ ಕೈಗಾರಿಕಾ ವಿಸ್ತೀರ್ಣಾಧಿಕಾರಿ ಎ.ಐ. ಪಠಾಣ ಅವರು ತಿಳಿಸಿದರು.
ಉತ್ಸವದಲ್ಲಿ ಪಾಲ್ಗೊಂಡ ನೂರಾರು ಜನರು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ಅನೇಕ ಜನರು ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜನರು ವಸ್ತು ಪ್ರದರ್ಶನದಲ್ಲಿ ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದರು.
ಆರೋಗ್ಯ ಇಲಾಖೆಯ ಪಲ್ಸ್ ಪೋಲಿಯೋ ಅಭಿಯಾನ ಜಾಗೃತಿ ಮಳಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳ ಮಳಿಗೆ, ಭಾರತೀಯ ಸೇನೆಗೆ ಸೇರಲು ಯುವಕರಿಗೆ ಮಾರ್ಗದರ್ಶನ ನೀಡುವ ಮಳಿಗೆ ಹಾಗೂ ಕರಕುಶಲ ವಸ್ತುಗಳ ಮಳಿಗೆಗಳು ಜನರ ಗಮನ ಸೆಳೆದವು.

ಗಮನಸೆಳೆದ ಸರ್ಕಾರದ ವಿವಿಧ ಯೋಜನೆಗಳ ವಸ್ತು ಪ್ರದರ್ಶನ
Belgaum News  ಸಂಗೊಳ್ಳಿ ಉತ್ಸವದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಶುಕ್ರವಾರ ಉದ್ಘಾಟಿಸಿದರು.
ವಿದ್ಯಾಸಿರಿ, ಕ್ಷೀರ ಭಾಗ್ಯ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಆರೋಗ್ಯ ಭಾಗ್ಯ, ನಮ್ಮ ಮೆಟ್ರೋ, ವಸತಿ ಭಾಗ್ಯ ಸೇರಿದಂತೆ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಆಕರ್ಷಕ ಛಾಯಾಚಿತ್ರಗಳ ಸಮೇತ ಸಾರ್ವಜನಿಕರಿಗೆ ಚುಟುಕು ಮಾಹಿತಿ ಒದಗಿಸುವ ಮಳಿಗೆಯ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಡಾ|| ವಿಶ್ವನಾಥ ಪಾಟೀಲ, ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ, ತಾಲೂಕು ಪಂಚಾಯತ ಸದಸ್ಯ ಗೌಸಸಾಬ ಬಡ್ಡೇಮುಲ್ಲಾ, ಗ್ರಾಮ ಪಂಚಾಯತ ಅಧ್ಯಕ್ಷರಾದ ಯಲ್ಲವ್ವ ಹಳಮನಿ, ಉಪಾಧ್ಯಕ್ಷರಾದ ಬಸವರಾಜ ಕೊಡ್ಲಿ ಹಾಗೂ ಸದಸ್ಯರು ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಛಾಯಾಚಿತ್ರಗಳ ಮೂಲಕ ಮಾಹಿತಿಯನ್ನು ಒದಗಿಸುವ ಈ ವಸ್ತು ಪ್ರದರ್ಶನವನ್ನು ಉತ್ಸವದಲ್ಲಿ ಪಾಲ್ಗೊಂಡ ನೂರಾರು ಜನರು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.

belagavisuddi ಉತ್ಸವಕ್ಕೆ ಮೆರಗು ತಂದ ಕಲಾತಂಡಗಳ ಮೆರವಣಿಗೆ

Leave A Reply

 Click this button or press Ctrl+G to toggle between Kannada and English

Your email address will not be published.