ಉತ್ತಮ ಸಮಾಜಕ್ಕಾಗಿ

ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

Protest by Brahmin society

0

ಬೆಳಗಾವಿ: (tarun kranti) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗುತ್ತಿದ್ದೆ ಎಂದು ಆರೋಪಿಸ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಸಮಾಜದ ಬಗ್ಗೆ ಅಗೌರವವಾಗಿ ಮಾತನಾಡಿದವರನ್ನು ಶೀಘ್ರ ಬಂಧಿಸಬೇಕೆಂದು ಮನವಿಯಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಬ್ರಾಹ್ಮಣ ಸಮಾಜದ ಪ್ರಮುಖರಾದ ಎಸ್.ಎಮ್.ಕುಲಕರ್ಣಿ, ಡಿ.ಬಿ.ಜೋಶಿ, ಅನಿಲ ಪೋತದಾರ, ನಗರ ಸೇವಕಿ ಅನುಶ್ರೀ ದೇಶಪಾಂಡೆ ಮುಂತಾದವರು ಭಾಗವಹಿಸಿದ್ದರು.Protest by Brahmin society

 

Leave A Reply

 Click this button or press Ctrl+G to toggle between Kannada and English

Your email address will not be published.