ಉತ್ತಮ ಸಮಾಜಕ್ಕಾಗಿ

ಅನಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳುವ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ! 

Protest in Belgaum, condemns statement on unauthorized homes 

0
ಬೆಳಗಾವಿ : (newsbelgaum)ಬೆಳಗಾವಿ ನಗರದಲ್ಲಿ ನೂರು ರೂಪಾಯಿ ಬಾಂಡ್ ಪೇಪರ್ ಖರೀಧಿ ಪತ್ರದ ಮೇಲೆ ನಿರ್ಮಿಸಲಾಗಿರುವ ಅಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಪ್ರದೇಶಿಕ ಆಯುಕ್ತರು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಡವರ ಮನೆಗಳ ರಕ್ಷಣೆಗೆ ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಪ್ರತಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 10-30 ಘಂಟೆಗೆ ನಗರದ ಛತ್ರಪತಿ ಶಿವಾಜಿ ಉದ್ಯಾನ ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ನಂತರ ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಧರಣಿಗೆ ಕುಳಿತ ಪ್ರತಿಭಟನಾಕಾರರು.
News Belgaum-ಅನಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳುವ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ! ಬೆಳಗಾವಿಯಲ್ಲಿ ಬಡವರು ನಿರ್ಮಿಸಿದ ಅನಧಿಕೃತ ಮನೆಗಳನ್ನು ಅಧಿಕೃತಗೊಳಿಸಬೇಕು ಬಡವರ ಮನೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದು ಪ್ರದೇಶಿಕ ಆಯುಕ್ತರು ನೀಡಿದ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ನಂತರ ಸ್ಥಳಕ್ಕಾಗಮಿಸಿದ ಪ್ರಾದೇಶಿಕ ಆಯುಕ್ತ ಮೇಘಣ್ಣವರ ಮನವಿ ಸ್ವೀಕರಿಸಿ ಸಕಾರಾತ್ಮಕ ವಾಗಿ ಸ್ಪಂದಿಸುವ ಭರವಸೆ ನೀಡಿದರು. ಬೆಳಗಾವಿ ದಕ್ಷಿಣ ಬಿಜೆಪಿ ಘಟಕದ ಮುಂದಾಳತ್ವದಲ್ಲಿ ನಡೆದ  ಪ್ರತಿಭಟನೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ನಗರದಲ್ಲಿ ಉದ್ಭವಿಸಿದ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗುವುದು ಎಂಬ ಹೇಳಿಕೆ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ನೀಡಿದ್ದಾರೆ ಎಂಬುವುದನ್ನು ಉಲ್ಲೇಖಿಸಿ ವಡಗಾವಿ ಭಾಗದ ಜನತೆ ಜ‌ತೆ ಇಂದು ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
News Belgaum-ಅನಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳುವ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ!  1 News Belgaum-ಅನಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳುವ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ!  2ಹಳೆ ಬೆಳಗಾವಿಯಿಂದ ಹೊರಟ ಜನತೆ ಶಿವಾಜಿ ಉದ್ಯಾನದಲ್ಲಿ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ₹100 ಬಾಂಡ್ ಮನೆಗಳನ್ನು ಮತ್ತು ಜಮೀನಿನಲ್ಲಿ ಕಟ್ಟಲಾದ ಮನೆಗಳನ್ನು ತೆರವುಗೊಳಿಸುವ ಬಗ್ಗೆ ಮಾತನಾಡಿದ್ದರು ಎಂಬುವುದನ್ನು ಪ್ರತಿಭಟನಾಕಾರರು ಉಲ್ಲೇಖಿಸಿ ಪ್ರತಿಭಟನೆ ನಡೆಸಿದರು. ನಮ್ಮ ಮನೆಗಳನ್ನು ಕಸಿದುಕೊಳ್ಳಲು ನೀವ್ಯಾರು ಎಂಬ ಘೋಣವಾಕ್ಯದೊಂದಿಗೆ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಆಡಳಿತದ ಎದುರು ಎತ್ತಿ ಕಟ್ಟಿದರು!?:ಪ್ರಾದೇಶಿಕ ಆಯುಕ್ತರು ಬಡವರ ಪರವಾಗಿ ಹೇಳಿದ್ದ ಹೇಳಿಕೆಯನ್ನು ರಾಜಕೀಯ ನೇತಾರರು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ಆಡಳಿತದ ಎದುರು ಎತ್ತಿಕಟ್ಟಿದ್ದಾರೆ ಎಂಬುವುದು ಗಮನಕ್ಕೆ ಬಂತು.
ಮೊದಲು ನಿಮ್ಮ ಮನೆಗೆ ಜೆಸಿಬಿ!:ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಬಾರದವರ ಮನೆಗೆ ಮೊದಲು ಜೆಸಿಬಿ ಬರುತ್ತದೆ ಎಂದು ಮುಗ್ದ ಜನರನ್ನು ಹೆದರಿಸಿ ಇಂದಿನ ಪ್ರತಿಭಟನೆಗೆ ಕರೆತರಲಾಗಿತ್ತು ಎಂದು ಪ್ರತಿಭಟನಾಕಾರರಲ್ಲಿ ಕೆಲವರು ತಿಳಿಸಿದರು. ವಯೋವೃ‌ದ್ಧರು, ಅಂಗವಿಕಲರು ಮತ್ತು ಮಹಿಳೆಯರನ್ನು ಹೆಚ್ಚಿಗೆ ಪ್ರತಿಭಟನೆಗೆ ತರಲಾಗಿತ್ತು. ಮೊದಲು ಡಿಸಿ ಕಚೇರಿ ನಂತರ ಆರ್ ಸಿ ಕಚೇರಿಗೆ ಪ್ರತಿಭಟನೆ ನಡೆಯಿತು. ಮಂಗೇಶ ಪವಾರ, ಜಿತೇಂದ್ರ ದೇಸಾಯಿ, ಗಜಾನನ ಗುಂಜೇರಿ, ಸಂದೀಪ ನರಸಗೌಡ, ಡಿ. ಜಿತೇಂದ್ರ, ಅನಿಲ ಕೋರೆ ಇತರರು ಉಪಸ್ಥಿತರಿದ್ದರು.Protest in Belgaum, condemns statement on unauthorized homes

 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.