ಉತ್ತಮ ಸಮಾಜಕ್ಕಾಗಿ

ಮೂಲಭೂತ ಸೌಲಭ್ಯ ಕೊಡಿ; ನಾಗರಿಕರ ಆಗ್ರಹ

Provide basic infrastructure; Citizens demand

0

ಬೆಳಗಾವಿ: ನಗರದ ವಡಗಾವಿ ಲಕ್ಷ್ಮೀ ನಗರ ರೋಗರುಜಿನಗಳ ಕೊಳೆಗೆರೆಯಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ವಾರ್ಡ್ ನಂ. 14ರ ನಾಗರಿಕರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೇವಾಂಗ ಮುಖ್ಯ ರಸ್ತೆ ಡಾಂಬರೀಕರಣ ಆಗಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ನಳದ ನೀರು ನಿಯಮಿತವಾಗಿ ಪೂರೈಕೆ ಇಲ್ಲ, ಗಟಾರು, ಚರಂಡಿ ವ್ಯವಸ್ಥೆ ಹಾಳಾಗಿದೆ. ಬೀದಿದಿಪಗಳು ಉರಿಯುವುದಿಲ್ಲ, ಕೆಲವು ಬೀದಿದೀಪಗಳು ನಡುರಸ್ತೆಯಲ್ಲಿವೆ. ಈ ಭಾಗದ ನಗರಸೇವಕ ದುನೇಶ ರಾವಳ ನಾಗರಿಕರ ಸನಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಪಾಂಡುರಂಗ ಧೋತ್ರೆ, ಆರ್ಯ ಏಕಬೋಟೆ, ಯಲ್ಲಪ್ಪ ತಿಗಡಿ, ಭೋಜಪ್ಪ ಹಜೇರಿ, ದೇವೆಂದ್ರ ಏಕಭೋಟಿ, ಭಾರತಿ ಚಿಲ್ಲಾಳ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.