ಉತ್ತಮ ಸಮಾಜಕ್ಕಾಗಿ

ಸಾರ್ವಜನಿಕರ ಗಮನಕ್ಕೆ

Public attention

0

ಬೆಳಗಾವಿ:  (news belgaum)ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳ ಮಾಲೀಕರುಗಳಿಗೆ 2018-19ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ 2018ರ ಏಪ್ರಿಲ 1 ರಿಂದ 30 ರೊಳಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆಯಲ್ಲಿ ಶೇ.5 ರಷ್ಟು ವಿನಾಯಿತಿ ನೀಡಲಾಗುವುದು ಮತ್ತು ಪ್ರಸ್ತುತ ಸಾಲಿನಿಂದ ಅನ್‍ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ತೆರಿಗೆ ಪಾವತಿಗಾಗಿ ಗಣಕೀಕೃತ ಚಲನಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಆಸ್ತಿ ತೆರಿಗೆ ಚಲನ ಪಡೆಯಲು ಪಾಲಿಕೆಯ ವಲಯ ಕಚೇರಿಗಳ ಕಂದಾಯ ಶಾಖೆಗೆ ಹೋದಾಗ ಹಿಂದಿನ ಸಾಲಿನ ಆಸ್ತಿ ತೆರಿಗೆ ಭರಣಾ ಮಾಡಿದ ಚಲನ ಪ್ರತಿ ಹಾಗೂ ಎಸ್.ಎ.ಎಸ್. ಫಾರ್ಮ ತೋರಿಸಿ ಆನ್‍ಲೈನ್ ಮೂಲಕ ಗಣಕೀಕೃತ ಫಾರ್ಮ, ಚಲನ ಪಡೆದು ನಿಗಧಿತ ಕೇಂದ್ರಗಳಲ್ಲಿ ತಮ್ಮ ಆಸ್ತಿ ತೆರಿಗೆಯನ್ನು ಭರಿಸಬಹುದಾಗಿದೆ.
ಎಪ್ರೀಲ್ 30 ರೊಳಗಾಗಿ ಆಸ್ತಿ ತೆರಿಗೆ ಸಂದಾಯ ಮಾಡುವವರಿಗೆ ಮಾತ್ರ ಶೇ. 5% ರಷ್ಟು ರಿಯಾಯಿತಿಯು ನೀಡಲಾಗುತ್ತಿದ್ದು ಚಲನ ಪಡೆದ ಆಸ್ತಿ ತೆರಿಗೆದಾರರು ಎಪ್ರೀಲ್ 30 ರೊಳಗಾಗಿ ಕಡ್ಡಾಯವಾಗಿ ಸಂದಾಯ ಮಾಡಲು ಕೋರಿದೆ. ಚಲನ ಪಡೆದು ಎಪ್ರೀಲ್-30 ರೊಳಗಾಗಿ ಕರ ಪಾವತಿ ಮಾಡದವರಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ. ಆದ್ದರಿಂದ ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Public attention
ಏಪ್ರಿಲ್ 22 ರಂದು ವಿದ್ಯುತ್ ವ್ಯತ್ಯಯ
ಬೆಳಗಾವಿ: ಏಪ್ರಿಲ್ 22 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗÀಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳುರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಬೆಳಗಾವಿ ವಿಭಾಗದ ಕಾ ಮತ್ತು ಪಾ ಗ್ರಾಮೀಣ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ: ವಾಹನ-ಮದ್ಯ ವಶ
ಬೆಳಗಾವಿ: : ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕಲಕಾಂಬ ಚೆಕ್ ಪೊಸ್ಟನಲ್ಲ್ಲಿ ಎಸ್.ಎಸ್.ಟಿ ತಂಡದವರಿಂದ ಏಪ್ರಿಲ್ 20 ರಂದು ರೂ.3858/- ಮೌಲ್ಯದ 13.590 ಲೀ ಮದ್ಯ ಹಾಗೂ ರೂ 300,000/- ಮೌಲ್ಯದ ಟಾಟಾ ಗೂಡ್ಸ್ ವ್ಯಾನ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಚಿಕ್ಕೋಡಿ ಪಟ್ಟಣದಲ್ಲ್ಲಿ. ಅಬಕಾರಿ ನಿರೀಕ್ಷಕರು, ಚಿಕ್ಕೋಡಿ ಉಪ ವಿಭಾಗ ತಂಡದವರಿಂದ ಏಪ್ರಿಲ್ 20 ರಂದು ರೂ 2292/- ಮೌಲ್ಯದ 8.640 ಲೀ ಮದ್ಯ ಹಾಗೂ 1,20,000/- ಮೌಲ್ಯದ ರಾಯಲ್ ಎನ್‍ಪಿಲ್ಡ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ ತಂಡದವರಿಂದ ಏಪ್ರಿಲ್ 20 ರಂದು ರೂ. 14,400/- ಮೌಲ್ಯದ 27 ಲೀ ಮದ್ಯ ಹಾಗೂ ರೂ 30,000/- ಮೌಲ್ಯದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಯಮಕನಮರ್ಡಿ ವಿಧಾನಸಭಾ ಕ್ಷೇತ್ರದ ಹೊಸ ವಂಟಮುರಿ ಗ್ರಾಮದಲ್ಲಿ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ ಬೆಳಗಾವಿ ತಂಡದವರಿಂದ ಏಪ್ರಿಲ್ 20 ರಂದು ರೂ. 30,000/- ಮೌಲ್ಯದ 300 ಲೀ ಮದ್ಯ ಹಾಗೂ ರೂ 3,00,000/- ಮೌಲ್ಯದ ಅಲ್ಟೋ ಕಾರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇಂದಿನವರೆಗಿನ ಒಟ್ಟು ಮಾಹಿತಿ:
ಇಂದಿನವರಗೆ ಜಪ್ತಿಯಾದ ಒಟ್ಟು ಮದ್ಯ: ಅಬಕಾರಿ ಇಲಾಖೆ-2079 ಲೀ ಅದರ ಮೌಲ್ಯ ರೂ, 4,60,969/-, ಪೊಲೀಸ್ ಇಲಾಖೆ-485 ಲೀ ಅದರ ಮೌಲ್ಯ ರೂ, 80,085/-, ಒಟ್ಟು: 2,565 ಲೀ ಅದರ ಮೌಲ್ಯ ರೂ, 5,41,054/-
ಇಂದಿನವರಗೆ ಜಪ್ತಿಯಾದ ಒಟ್ಟು ಹಣ: ರೂ, 43,68,570/-,
ಇಂದಿನವರಗೆ ಜಪ್ತಿಯಾದ ಸಲಕರಣೆಗಳ + ವಾಹನಗಳ ಒಟ್ಟು ಮೌಲ್ಯ: ರೂ, 3,72,34,660/-
ಇಂದಿನವರಗೆ ಜಪ್ತಿಯಾದ ಒಟ್ಟು ವಾಹನಗಳು: 63 + 2 ಸೈಕಲ್
ಬಂಧನಕ್ಕೊಳಪಡಿಸಿದ ಆರೋಪಿಗಳ ಸಂಖ್ಯೆ: ಬೆಳಗಾವಿ ನಗರ-18, ಬೆಳಗಾವಿ ಗ್ರಾಮೀಣ-43
ಇಂದಿನವರಗೆ ದಾಖಲಿಸಿದ ಒಟ್ಟು ಎಫ್.ಐ.ಆರ್ ಸಂಖ್ಯೆ: 261

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.