ಉತ್ತಮ ಸಮಾಜಕ್ಕಾಗಿ

news belgaum:ಸಾರ್ವಜನಿಕರ ಗಮನಕ್ಕೆPublic attention

Public attention

0

ಸೇನಾ ಭರ್ತಿ ರ್ಯಾಲಿ
ಬೆಳಗಾವಿ: (news belgaum)ಮಹಾರಾಷ್ಟ್ರ ರಾಜ್ಯದ ನಾಗ್ಪುರದ ಗ್ರೇನಾಡೈರ್ಸ್, ಪೋರ್ಟ್ ಸೀತಾಬುಲ್ದಿಯಲ್ಲಿ 118 ಇನ್ಪೆಂಟ್ರಿ ಬಟಾಲಿಯನ್‍ದಲ್ಲಿ 115 ಬಟಾಲಿಯನ್ ಮಹಾರ್ ಸೇನಾ ಭರ್ತಿ ರ್ಯಾಲಿಯು ಮಾರ್ಚ್ 26 ರಿಂದ 30 ರವರೆಗೆ ನಡೆಯಲಿದೆ.
ರಾಜಸ್ತಾನ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಗೋವಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದರ್ ಮತ್ತು ನಗರ ಹವೇಲಿ, ದೀಯು ಮತ್ತು ದಾಮನ, ಲಕ್ಷದ್ವೀಪ ಹಾಗೂ ಪಾಂಡಿಚೇರಿಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದು.
ಸೋಲ್ಜರ್ ಜಿ.ಡಿ 28 ಹುದ್ದೆಗಳು, ಚೀಪ್ ಕಮ್ಯುನಿಟಿ, ಟ್ರೇಡ್ಸ್‍ಮನ್ (ಇಕ್ಯುಪ್‍ಮೆಂಟ್ ರಿಪೇರರ್), ಟ್ರೇಡ್ಸ್‍ಮನ್‍ನ ತಲಾ ಒಂದು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
160 ಸೆ.ಮೀ. ಎತ್ತರ, 50 ಕೆ.ಜಿ. ತೂಕ ಹಾಗೂ 77-82 ಸೆ.ಮೀ ಎದೆ ಸುತ್ತಳತೆ ಹೊಂದಿರುವ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು.
ಹಾಜರಾಗುವ ಅಭ್ಯರ್ಥಿಗಳು 18 ರಿಂದ 42 ವರ್ಷದೊಳಗಿನವರಾಗಿರಬೇಕು. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಸೋಲ್ಜರ್ ಜಿ.ಡಿ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ರಹವಾಸಿ, ವಿಳಾಸ, ನಡತೆ ಪ್ರಮಾಣಪತ್ರ, ಮದುವೆಯಾದ/ ಆಗದಿರುವ ಬಗ್ಗೆ ಪ್ರಮಾಣಪತ್ರ, ಎನ್‍ಸಿಸಿ ಪ್ರಮಾಣಪತ್ರ, 8 ಭಾವಚಿತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ರ್ಯಾಲಿಗೆ ತರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಮುಂದೂಡಿಕೆ
ಬೆಳಗಾವಿ: 2018-19ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್(ಸಹ ಶಿಕ್ಷಣ), ಡಾ.ಬಿ.ಆರ್.ಅಂಬೇಡ್ಕರ್(ಬಾಲಕಿಯರ), ಶ್ರೀಮತಿ ಇಂದಿರಾ ಗಾಂಧಿ, ಸಂಗೊಳ್ಳಿ ರಾಯಣ್ಣ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ರಾಜ್ಯಾದ್ಯಂತ ಏಕಕಾಲದಲ್ಲಿ ಫೆಬ್ರುವರಿ 18 ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ನಡೆಯಬೇಕಾಗಿದ್ದ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗೆ ಮಾನ್ಯ ಉಚ್ಚನ್ಯಾಯಾಲಯವು 2018ರ ಫೆಬ್ರುವರಿ 15 ರಂದು ತಡೆಯಾಜ್ಞೆ ನೀಡಿರುವುದರಿಂದ ಫೆಬ್ರುವರಿ 18 ರಂದು ನಡೆಯಬೇಕಾಗಿದ್ದ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪ್ರವೇಶ ಪರೀಕ್ಷಾ ದಿನಾಂಕವನ್ನು ಪ್ರಕಟಣೆಯಲ್ಲಿ ತಿಳಿಸಲಾಗುವುದು.

ಆನ್‍ಲೈನ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಬೆಳಗಾವಿ: 2017-18ನೇ ಸಾಲಿಗೆ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ,” “ಶುಲ್ಕ ವಿನಾಯಿತಿ”, “ವಿದ್ಯಾಸಿರಿ ಮತ್ತು ಊಟ ಮತ್ತು ವಸತಿ ಸಹಾಯ ಯೋಜನೆ” ಯೋಜನೆಯಡಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗಾಗಿ ಹಿಂದಿನ ವರ್ಷದ ಎರಡು ಸೆಮಿಸ್ಟರ್‍ಗಳ ಅಂಕಪಟ್ಟಿಗಳನ್ನು ಅಪ್‍ಲೋಡ್ ಮಾಡಲು ಸಾಧ್ಯವಾಗದೇ ಇರುವ ಹಾಗೂ ಪ್ರಸ್ತುತ ತಿರಸ್ಕøತಗೊಂಡಿರುವ ಅರ್ಜಿಗಳನ್ನು ಮರುಪರಿಶೀಲಿಸುವಂತೆ ಹಲವಾರು ಕಾಲೇಜುಗಳು ಮತ್ತು ವಿದ್ಯಾರ್ಥಿಗಳಿಂದ ಬೇಡಿಕೆ ಬಂದಿರುತ್ತದೆ.
ಈ ರೀತಿಯಲ್ಲಿ 2017-18ನೇ ಸಾಲಿನಲ್ಲಿ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ,” ಮತ್ತು “ವಿದ್ಯಾಸಿರಿ ಮತ್ತು ಊಟ ಮತ್ತು ವಸತಿ ಸಹಾಯ ಯೋಜನೆ” ಗಳಡಿಯಲ್ಲಿ ಪ್ರಸ್ತುತ ತಿರಸ್ಕøತಗೊಂಡಿರುವ ಅರ್ಜಿಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇವಲ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ” ಯೋಜನೆಯಡಿ ಪರಿಗಣಿಸಲು ತೀರ್ಮಾನಿಸಲಾಗಿದೆ.
ಆದ್ದರಿಂದ ಹಿಂದಿನ ಸಾಲಿನ ಎರಡು ಸೆಮಿಸ್ಟರ್‍ಗಳ ಅಂಕಗಳು ಮತ್ತು ಅಂಕಪಟ್ಟಿಗಳನ್ನು ಅಪ್‍ಲೋಡ್ ಮಾಡಲು ಸಾಧ್ಯವಾಗದೇ ಇರುವ ಹಾಗೂ ಪ್ರಸ್ತುತ ತಿರಸ್ಕøತಗೊಂಡಿರುವ ಅರ್ಜಿಗಳ ವಿದ್ಯಾರ್ಥಿಗಳು ಕೂಡಲೇ ಆಯಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಕಚೇರಿಯನ್ನು ಸಂಪರ್ಕಿಸಿ, ಅಂಕಗಳು ಮತ್ತು ಅಂಕಪಟ್ಟಿಗಳನ್ನು ಅಪ್‍ಲೋಡ್ ಮಾಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ತಿರಸ್ಕøತ ಅರ್ಜಿಗಳನ್ನು ಮರುಪರಿಶೀಲಿಸಿ, ಅರ್ಹ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗೆ ಪರಿಗಣಿಸಲಾಗುವುದು.
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ, “ವಿದ್ಯಾಸಿರಿ ಮತ್ತು ಊಟ ಮತ್ತು ವಸತಿ ಸಹಾಯ ಯೋಜನೆ” ಯಡಿ ಸೌಲಭ್ಯ ಪಡೆಯಲು ಅರ್ಹತೆಯನ್ನು ಹೊಂದುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಿದೆ.
ಅಂಕಗಳು ಮತ್ತು ಅಂಕಪಟ್ಟಿಗಳು ಅಪ್‍ಲೋಡ್ ಮಾಡಲು ಹಾಗೂ ಪುನರ್ ಪರಿಶೀಲಿಸಲು ಫೆಬ್ರುವರಿ 24 ಕೊನೆಯ ದಿನವಾಗಿರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಗಮನಕ್ಕೆ
ಬೆಳಗಾವಿ: ಆಯುಧ ಪರವಾನಿಗೆ ಹಾಗೂ ಆಯುಧ ಅನುಜ್ಞಾಪತ್ರಗಳ ನವೀಕರಣ ಕಾರ್ಯವು ಜಿಲ್ಲಾಧಿಕಾರಿಗಳು ಬೆಳಗಾವಿರವರ ಕಾರ್ಯಾಲಯದಲ್ಲಿ ನಡೆಯುತ್ತಿದ್ದು, ಆದರೆ ಇನ್ನು ಮುಂದೆ 2018ರ ಏಪ್ರಿಲ್ 1 ರಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಿನ ಕಮೀಷನರೇಟ್ ವ್ಯಾಪ್ತಿಗೆ ಒಳಪಡುವ ಸ್ಥಳಗಳ ಆಯುಧಗಳ ಪರವಾನಗಿ ಹಾಗೂ ಆಯುಧ ಅನುಜ್ಞಾಪತ್ರಗಳ ನವೀಕರಣ ಮತ್ತು ಈ ಸಂಬಂಧ ಇತರೆ ವಿಷಯಗಳ ನಿರ್ವಹಣೆಯು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.
2014ರ ಸೆಪ್ಟೆಂಬರ್ 12 ರಂದು ಬೆಳಗಾವಿ ನಗರದಲ್ಲಿ ಪೊಲೀಸ್ ಆಯುಕ್ತರ ಕಚೇರಿಯು ಪ್ರಾರಂಭವಾಗಿರುತ್ತದೆ. ಬೆಳಗಾವಿರವರನ್ನು ಬೆಳಗಾವಿ ನಗರ ಹಾಗೂ ತಾಲೂಕಿನ ವ್ಯಾಪ್ತಿಗೆ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ Additional District Magistrate) ಗಳನ್ನಾಗಿ ಹಾಗೂ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ರವರನ್ನು ಪೊಲೀಸ್ ಬೆಳಗಾವಿ ನಗರದ ವಿಶೇಷ ಕಾರ್ಯನಿರ್ವಾಹಕ ದಂಡನಾಧಿಕಾರಿ (Special Executive Magistrate) ಗಳನ್ನಾಗಿ ನೇಮಿಸಿ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿರುತ್ತದೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ 2018ರಿಂದ ಆಯುಧಗಳ ಪರವಾನಿಗೆ ಆಯುಕ್ತರ ಕಾರ್ಯಾಲಯದಲ್ಲಿ ನಡೆಯಲಿದ್ದು, ಈ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಆಯುಕ್ತರ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ

.ಸವದತ್ತಿ, ಅಥಣಿ, ರಾಮದುರ್ಗ; ಕೊಳವೆಬಾವಿ ನೋಂದಣಿ ಕಾಡ್ಡಾಯ
ಬೆಳಗಾವಿ: : ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಲಂ 12ರಡಿ ಅಧಿಸೂಚಿತ ಪ್ರದೇಶ “ಅಥಣಿ, ಸವದತ್ತಿ, ರಾಮದುರ್ಗ” ಗಳಲ್ಲಿ ತೋಡು, ಕೊಳವೆ ಬಾವಿ ಕೊರೆಯಲು ತಾಲ್ಲೂಕು ಮಟ್ಟದ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಹಾಗೂ 120 ದಿನಗಳೊಳಗಾಗಿ ಪ್ರಸ್ತುತ ಬಳಕೆದಾರರ ನೋಂದಣೆಯನ್ನು ನಿಯೋಜಿತ ಜಿಲ್ಲಾ ಸಮಿತಿಗಳಲ್ಲಿ ಕಡ್ಡಾಯವಾಗಿ ಮಾಡಿಕೊಳ್ಳುವುದು.
ಪ್ರಸ್ತುತ ಬಳಕೆದಾರರ ನೋಂದಣಿಗಾಗಿ ನಿಗದಿತ ಅರ್ಜಿಯೊಂದಿಗೆ ನೋಂದಣಿ ಶುಲ್ಕ ರೂ. 50/- ನ್ನು (ಪ್ರತಿ ಒಂದು ನೋಂದಣಿಗಾಗಿ) Chairman, Karnataka Groundwater Authority, Bangalore” ಇವರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0788201052332 ಗೆ ನೇರವಾಗಿ ಹಣ ಸಂದಾಯ ಮಾಡಿ, ಅದರ ಮೂಲ ಪ್ರತಿಯನ್ನು ಅಥವಾ ಡಿಡಿ ಯನ್ನು “Chairman, Karnataka Groundwater Authority, Bangalore”ಇವರ ಹೆಸರಿನಲ್ಲಿ ತೆಗೆದು ಹಿರಿಯ ಭೂವಿಜ್ಞಾನಿಯವರ ಕಚೇರಿ, ಅಂತರ್ಜಲ ನಿರ್ದೇಶನಾಲಯ, ಜಿಲ್ಲಾ ಅಂತರ್ಜಲ ಕಛೇರಿ, ಆರ್.ಪಿ.ಡಿ ಕ್ರಾಸ್, ಟಿಳಕವಾಡಿ, ಬೆಳಗಾವಿ ಇವರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಖುದ್ದಾಗಿ ಅಥವಾ ಕಚೇರಿ ದೂರವಾಣಿ ಸಂಖ್ಯೆ: 0831-2407251 ಕ್ಕೆ ಸಂರ್ಪಕಿಸಲು ಕೋರಿದೆ.
ಫೆಬ್ರವರಿ ಮಾಹೆ ಪಡಿತರ ಆಹಾರಧಾನ್ಯ ಬಿಡುಗಡೆ
ಬೆಳಗಾವಿ: ಫೆಬ್ರವರಿ-2018ರ ಮಾಹೆಗಾಗಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳಾದ ಅಕ್ಕಿ ಮತ್ತು ಗೋಧಿ ಉಚಿತವಾಗಿ ಹಾಗೂ ತೊಗರಿಬೆಳೆ ಪತ್ರಿ ಕೆಜಿಗೆ 38 ರೂ.ದರದಂತೆ ವಿತರಿಸಲು ಬಿಡುಗಡೆ ಮಾಡಲಾಗಿದೆ.
ಅದರಂತೆ ಆದ್ಯತೇತರ ಎಪಿಎಲ್ ಕುಟುಂಬಗಳಿಗೆ ನೋಂದಾವಣಿ ಮಾಡಿಕೊಂಡಿರುವ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿಗೆ 15 ರೂಗಳಂತೆ ಅಕ್ಕಿ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಕಾರ್ಯವನ್ನು ಮಾಡುತ್ತಾರೆ.
ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ವಿತರಿಸುವಂತೆ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಲಾಗಿದೆ.
ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆಯಾದಲ್ಲಿ ಟೋಲ್‍ಫ್ರಿ ಸಂಖ್ಯೆ 1967 ಗೆ ಕರೆ ಮಾಡಿ ದೂರನ್ನು ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬ್ಬು ಕಟಾವು ಯಂತ್ರಗಳ ಫಲಾನುಭವಿಗಳ ಆಯ್ಕೆ; ಫೆ 17 ರಂದು ಸಭೆ
ಬೆಳಗಾವಿ: 2017-18 ನೇ ಸಾಲಿನ ಕಬ್ಬು ಕಟಾವು ಯಂತ್ರಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಫೆಬ್ರುವರಿ 17 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಸಭೆ ಆಯೋಜಿಸಿರುತ್ತಾರೆ. ಸಭೆಗೆ ಕಬ್ಬು ಕಟಾವು ಯಂತ್ರಕ್ಕೆ ಸಹಾಯಧನ ಕುರಿತು ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿದಾರರು ಸಭೆಗೆ ಹಾಜರಿರುವಂತೆ ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಜೀವಿನಿ ನಿರ್ವಹಣಾ ಘಟಕದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ: ಬೆಂಗಳೂರು ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್. ಅಭಿಯಾನ ನಿರ್ದೇಶಕರÀ ನಿರ್ದೇಶನ ಪ್ರಕಾರ ಯೋಜನೆ ಅನುಷ್ಠಾನ ಕುರಿತು ತಾಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಬಯೋಡೆಟಾವನ್ನು ಇ–ಮೆಲ್ belawadi.jobs@gmail.com ಫೆಬ್ರವರಿ 20ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಬೆಳಗಾವಿ ವೆಬ್ ಸೈಟ್‍ನ್ನು ಪರಿಶೀಲಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Public attention

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

 Click this button or press Ctrl+G to toggle between Kannada and English

Your email address will not be published.