ಉತ್ತಮ ಸಮಾಜಕ್ಕಾಗಿ

ಪ್ರಕಟಣೆ

Publication

0

              ಅಂಚೆ ಕಚೇರಿಗಳಲ್ಲೂ ಆಧಾರ್ ಸೇವೆ
ಬೆಳಗಾವಿ: (news belgaum)ಆಧಾರ್ ನೋಂದಣಿ ಮತ್ತು ಆಧಾರ್ ಪರಿಷ್ಕರಣ ಸೌಲಭ್ಯವನ್ನು ಜಿಲ್ಲೆಯ ವಿವಿಧ 34 ಅಂಚೆ ಕಚೇರಿಗಳಲ್ಲಿ ಕೂಡ ಕಲ್ಪಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರಾದ ಎಸ್.ಡಿ. ಕುಲಕರ್ಣಿ ಅವರು ತಿಳಿಸಿದ್ದಾರೆ.
ಹೊಸದಾಗಿ ಆಧಾರ್ ಕಾರ್ಡ್‍ಗೆ ಅರ್ಜಿ, ವಿಳಾಸ ಬದಲಾವಣೆ, ಭಾವಚಿತ್ರ ಸೇರಿಸುವುದು, ಹೆಸರು ತಿದ್ದುಪಡಿ ಸೇರಿದಂತೆ ವಿವಿಧ ಪರಿಷ್ಕರಣೆಯನ್ನು ಅಂಚೆ ಇಲಾಖೆಗಳಲ್ಲಿ ರೂ.25 ಶುಲ್ಕ ನೀಡಿ ಪಡೆಯಬಹುದಾಗಿದೆ.
ಆಧಾರ್ ಸೇವೆ ಪಡೆಯಬಹುದಾದ ಅಂಚೆ ಕಚೇರಿಗಳು ಇಂತಿವೆ:
ಬೆಳಗಾವಿ ಮುಖ್ಯ ಅಂಚೆ ಕಚೇರಿ, ಬೈಲಹೊಂಗಲ ಮುಖ್ಯ ಅಂಚೆ ಕಚೇರಿ, ರಾಮದುರ್ಗ ಮುಖ್ಯ ಅಂಚೆ ಕಚೇರಿ, ಸವದತ್ತಿ ಉಪ ಅಂಚೆ ಕಚೇರಿ, ತಿಲಕವಾಡಿ ಉಪ ಅಂಚೆ ಕಚೇರಿ, ಖಾನಾಪುರ ಉಪ ಅಂಚೆ ಕಚೇರಿ, ಬೆಳಗಾವಿ ಶಿವಾಜಿನಗರ ಉಪ ಅಂಚೆ ಕಚೇರಿ, ಬೆಳಗಾವಿ ಶಹಾಪುರ ಉಪ ಅಂಚೆ ಕಚೇರಿ, ಬೆಳಗಾವಿ ಸಾಂಬ್ರಾ ಉಪ ಅಂಚೆ ಕಚೇರಿ, ಬೆಳಗಾವಿ ರೆಕಾಡ್ರ್ಸ ಎಂ.ಎಲ್.ಐ ಉಪ ಅಂಚೆ ಕಚೇರಿ, ಬೆಳಗಾವಿ ಸಿಟಿ ಉಪ ಅಂಚೆ ಕಚೇರಿ (ಮಾರುತಿ ಗಲ್ಲಿ), ಬೆಳಗಾವಿ ಕಚೇರಿ ಉಪ ಅಂಚೆ ಕಚೇರಿ (ಭಡಕಲ್ ಗಲ್ಲಿ), ಬೆಳಗಾವಿ ನೆಹರು ನಗರ ಉಪ ಅಂಚೆ ಕಚೇರಿ, ಕಿತ್ತೂರ ಉಪ ಅಂಚೆ ಕಚೇರಿ, ಬೆಳಗಾವಿ ಎಂ ವಡಗಾಂವ ಉಪ ಅಂಚೆ ಕಚೇರಿ, ಹಿಂದವಾಡ ಉಪ ಅಂಚೆ ಕಚೇರಿ, ಬೆಳವಡಿ ಉಪ ಅಂಚೆ ಕಚೇರಿ, ಹಿರೇಬಾಗೆವಾಡಿ ಉಪ ಅಂಚೆ ಕಚೇರಿ, ಮುರಗೋಡ ಉಪ ಅಂಚೆ ಕಚೇರಿ, ನೇಸರಗಿ ಉಪ ಅಂಚೆ ಕಚೇರಿ, ಬಾಳೆಕುಂದ್ರಿ ಉಪ ಅಂಚೆ ಕಚೇರಿ, ಬೆಳಗಾವಿ ಬಸ್‍ಸ್ಟ್ಯಾಂಡ್ ಉಪ ಅಂಚೆ ಕಚೇರಿ, ಬೆಳಗಾವಿ ಕಾಲೇಜ್ ರೋಡ್ ಉಪ ಅಂಚೆ ಕಚೇರಿ, ಬೆಳಗಾವಿ ದೂರದರ್ಶನ ನಗರ ಉಪ ಅಂಚೆ ಕಚೇರಿ, ಬೆಳಗಾವಿ ಉದ್ಯಮಬಾಗ ಉಪ ಅಂಚೆ ಕಚೇರಿ, ಹಿಂಡಲಗಾ ಉಪ ಅಂಚೆ ಕಚೇರಿ, ಲೊಂಡಾ ಉಪ ಅಂಚೆ ಕಚೇರಿ, ಮಾಳ ಮಾರುತಿ ಉಪ ಅಂಚೆ ಕಚೇರಿ (ಮಹಾಂತೇಶ ನಗರ), ನಂದಗಡ ಉಪ ಅಂಚೆ ಕಚೇರಿ, ಪೀರನವಾಡಿ ಉಪ ಅಂಚೆ ಕಚೇರಿ, ಕಟಕೋಳ ಉಪ ಅಂಚೆ ಕಚೇರಿ, ಸಾಲಹಳ್ಳಿ ಉಪ ಅಂಚೆ ಕಚೇರಿ, ಸುರೆಬಾನ ಉಪ ಅಂಚೆ ಕಚೇರಿ, ಯರಗಟ್ಟಿ ಉಪ ಅಂಚೆ ಕಚೇರಿ.
ಈ ಕಚೇರಿಗಳಲ್ಲಿ ಸಾರ್ವಜನಿಕರು ಆಧಾರ್ ಸೇವೆಯನ್ನು ಪಡೆಯಬಹುದಾಗಿದೆ ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರಾದ ಎಸ್.ಡಿ. ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                   ಸಹಕಾರ ಸಂಘಗಳ ಗಮನಕ್ಕೆ
ಬೆಳಗಾವಿ:  ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ನಿಯಮ 1960 ರನ್ವಯ ಬೆಳಗಾವಿ ಉಪವಿಭಾಗದಲ್ಲಿರುವ ಸಹಕಾರ ಸಂಘಗಳ/ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಹಾಗೂ ವಾರ್ಷಿಕ ಮಹಾಸಭೆಯ ಕೊರಂ ಕುರಿತು ಸಹಕಾರ ಇಲಾಖೆಯ ಅಧಿಸೂಚನೆ 2017 ರನ್ವಯ ಸಂಘ/ ಸಹಕಾರಿಗಳ ಉಪವಿಧಿ ತಿದ್ದುಪಡೆ ಮಾಡಿಕೊಳ್ಳುವುದು ಅವಶ್ಯವಿರುತ್ತದೆ.
ಸಂಘದ/ಸಹಕಾರಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ಆಡಳಿತ ಮಂಡಳಿ ಇವರಿಗೆ ತಮ್ಮ ಸಂಘದ/ಸಹಕಾರಿಯ ಚುನಾವಣೆ ಪ್ರಕ್ರಿಯೆ ಮುಂಚಿತವಾಗಿ ಉಪವಿಧಿ ತಿದ್ದುಪಡೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.
ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೆಳಗಾವಿ ಉಪವಿಭಾಗ, ಜಕ್ಕೇರಿಹೊಂಡ, ಗೋವಾವೇಶ ಹತ್ತಿರ ಬೆಳಗಾವಿ ಇವರಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

          ಜೂ.8 ರಂದು ಕ್ರೀಡಾ ಶಾಲೆಗೆ ಆಯ್ಕೆ ಪ್ರಕ್ರಿಯೆ
ಬೆಳಗಾವಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲಾಗುತ್ತಿರುವ ಕ್ರೀಡಾ ಶಾಲೆಗೆ 2018-19ನೇ ಸಾಲಿನ ಪ್ರವೇಶಕ್ಕಾಗಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ ಜೂನ್ 08 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕುಸ್ತಿ, ಜುಡೋ, ಅಥ್ಲೆಟಿಕ್ಸ್, ವಾಲಿಬಾಲ್ ಕ್ರೀಡೆಗಳಲ್ಲಿ ಆಯ್ಕೆಗಳನ್ನು ನಡೆಸಲಾಗುವುದು. ದಿನಾಂಕ 01/06/2007ರ ನಂತರ ಜನಿಸಿದ ಹಾಗೂ 4ನೇ ತರಗತಿ ಮುಗಿಸಿ 5ನೇ ತರಗತಿಗೆ ಅರ್ಹರಾಗುವ 11 ವರ್ಷದೊಳಗಿನ ಬಾಲಕ, ಬಾಲಕಿಯರು ಈ ಆಯ್ಕೆಗಳಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ವಾಲಿಬಾಲ್ ಕ್ರೀಡೆಗೆ ಆಯ್ಕೆ ಬಯಸುವ ಬಾಲಕರು 150 ಸೆಂ.ಮೀ. ಹಾಗೂ ಬಾಲಕಿಯರು 145 ಸೆಂ.ಮೀ ಎತ್ತರವನ್ನು ಹೊಂದಿರಬೇಕು.
ಅರ್ಹ ಬಾಲಕ, ಬಾಲಕಿಯರು ಅಗತ್ಯ ದಾಖಲೆಗಳೊಂದಿಗೆ ಜೂನ್ 08 ರಂದು ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂ: 8050485113 (ಕುಸ್ತಿ), 9448035909 (ಜುಡೋ), 7892156167 (ಅಥ್ಲೆಟಿಕ್ಸ್), 9844160235 (ವಾಲಿಬಾಲ್) ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಅಂಗಡಿ ಕಾಲೇಜಿನಲ್ಲಿ ದಾಖಲಾತಿ ಪರಿಶೀಲನಾ ಕೇಂದ್ರ
ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ಮೂಲ ದಾಖಲಾತಿ ಪರಿಶೀಲನಾ ಕೇಂದ್ರವನ್ನು ತೆರೆಯಲಾಗಿದ್ದು, ಜೂನ್ 7 ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭವಾಗಲಿದೆ.
ಅರ್ಹತೆಯನ್ನು ಪಡೆದುಕೊಂಡ ಅಭ್ಯರ್ಥಿಗಳು ಹಾಗೂ ಪಾಲಕರಿಗಾಗಿ ಸಿಬಿಟಿ ಹಾಗೂ ರೈಲ್ವೆ ಸ್ಟೇಶನ್‍ನಿಂದ ಅಂಗಡಿ ಕಾಲೇಜಿನವರೆಗೆ ಪ್ರತಿ ಅರ್ಧ ಗಂಟೆಗೊಂದರಂತೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂ: 0831-2438144, 0831-2438113 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ.ಜಿ. ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                         ವಿದ್ಯುತ್ ವ್ಯತ್ಯಯ
ಬೆಳಗಾವಿ:  33/11 ಕೆ.ವಿ.ಆರ್.ಎಂ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-6 ಟಿಳಕವಾಡಿ ಪೂರಕದ ಮೇಲೆ ಬರುವ ಮಾರುತಿ ಕಾಲೋನಿ, ಎಸ್.ವಿ. ಕಾಲೋನಿ, ಎಂ.ಜಿ. ಕಾಲೋನಿ, ಸವರ್ಕರ್ ರೋಡ್, ಲೆಲೆ ಗ್ರೌಂಡ್ ಸರೌಂಡಿಂಗ್ ನೆಹರು ರೋಡ್, ವ್ಯಾಕ್ಷಿನ್ ಡಿಪೋಟ್ 2ನೇ ಗೇಟ್, ಹಿಂದು ನಗರ, ನಾನಾ ಪ್ರತಾಪ ರೋಡ, ಪಾರ್ಥ ಕ್ರಾಸ್ ಮತ್ತು ಸರೌಂಡಿಂಗ್ ಏರಿಯಾಗಳಲ್ಲಿ ಜೂನ್ 8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Publication

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

Leave A Reply

 Click this button or press Ctrl+G to toggle between Kannada and English

Your email address will not be published.