ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : ಅರ್ಜಿಗಳನ್ನು ಆಹ್ವಾನಿಸಲಾಗಿದೆ.

news belagavi

0

ಶ್ರೀಕೃಷ್ಣ ಜನ್ಮಾಷ್ಟಮಿ: ಸೆ.2 ರಂದು ಮಾಂಸ ಮಾರಾಟ ನಿಷೇಧ
ಬೆಳಗಾವಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ರವಿವಾರ ಸೆಪ್ಟೆಂಬರ್ 02 ರಂದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ಮಾಂಸ ಮಾರಾಟದ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕು. ಸದರಿ ದಿನದಂದು ಕಸಾಯಿಖಾನೆ/ ಮಾಂಸ ಮಾರಾಟದ ಅಂಗಡಿಗಳ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ ಎಣಿಕೆ: ಮದ್ಯ ಮಾರಾಟ ನಿಷೇಧ
ಬೆಳಗಾವಿ:  ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018ರ ಮತ ಎಣಿಕೆ ಕಾರ್ಯ ಸೆಪ್ಟೆಂಬರ್ 3 ರಂದು ಜರುಗಲಿದ್ದು, ಮತ ಎಣಿಕೆ ಕಾರ್ಯವನ್ನು ಶಾಂತಿ ಮತ್ತು ಸುಗಮ ರೀತಿಯಿಂದ ನಡೆಸುವ ನಿಟ್ಟಿನಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು 1965ರ ಕಲಂ 21 (1) ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಮತ ಎಣಿಕೆ ಜರುಗುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿ ಪ್ರದೇಶದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಗಡಿಯಿಂದ 3 ಕಿ.ಮೀ ಪರಿಧಿಯಲ್ಲಿ ಬರುವ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಭೋಗಿದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‍ರಿಗೆ ಒಪ್ಪಿಸತಕ್ಕದ್ದು ಎಂದು ತಿಳುವಳಿಕೆ ನೋಟಿಸ್ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತವರನ್ನು ಕಸ್ಟಡಿಯಲ್ಲಿ ಇಡಲು ಸೂಚಿಸಿದೆ.
ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ, ಅಬಕಾರಿ ಉಪ ಆಯುಕ್ತರು ಬೆಳಗಾವಿ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಮತ್ತು ಚಿಕ್ಕೋಡಿ ಅವರು ಸದರಿ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು.
ಈ ನೋಟಿಸದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂತವರು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 33 ರನ್ವಯ ಶಿಕ್ಷೆಗೆ ಒಳಪಡುವರು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿ
ಬೆಳಗಾವಿ: ಯಾವುದೇ ಕ್ಷೇತ್ರದಲ್ಲಿ ನಾವಿನ್ಯತೆ, ತಾರ್ಕಿಕ (Scholastic) ಸಾಧನೆಗಳು (ಶಿಕ್ಷಣ), ಕಲೆ, ಕ್ರೀಡೆ, ಸಾಂಸ್ಕøತಿಕ, ಸಮಾಜ ಸೇವೆ, ಹಾಗೂ ಸಂಗೀತ, ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂಥಹ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡುವ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 5 ರಿಂದ 18 ವರ್ಷದೊಳಗಿನ ಅಂದರೆ 1-7-2000 ರಿಂದ 31-7-2018 ರೊಳಗೆ ಹುಟ್ಟಿದ ಮಕ್ಕಳನ್ನು 2018 ನೇ ಸಾಲಿಗೆ ಆಯ್ಕೆ ಮಾಡಲಾಗುವುದು. ಅಂದರೆ

ವಯೋಮಿತಿಯು 5 ವರ್ಷಗಳ ಮೇಲ್ಪಟ್ಟಿರಬೇಕು. ಹಾಗೂ 18 ವರ್ಷದೊಳಗಿರಬೇಕು. ಈ ಜಿಲ್ಲಾ ಮಟ್ಟದ ಪ್ರಶಸ್ತಿಯು ರೂ, 10,000/- ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸುವುದು. ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕೀತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ಹಿಂದೆ ಯಾವುದಾದರೂ ವರ್ಷದಲ್ಲಿ ಅರ್ಜಿ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ ಪುನಃ ಅದನ್ನು ಪರಿಗಣಿಸಲಾಗುವುದಿಲ್ಲ.
2018 ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದವರು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿ ನಗರ ಬೆಳಗಾವಿ ಇವರಿಂದ ಪಡೆದು ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸಪ್ಟೆಂಬರ್ 15 ರೊಳಗೆ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿನಗರ ಬೆಳಗಾವಿ-2407235 ಇವರನ್ನು ಸಂಪರ್ಕಿಸಬಹುದು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಬೆಳಗಾವಿ:  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: www.ssp.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಸಪ್ಟೆಂಬರ್ 30 ಕೊನೆಯ ದಿನವಾಗಿದೆ.
ಒಂದನೇ ತರಗತಿಯಿಂದ 10ನೇ ತರಗತಿವರೆಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹವಿರುತ್ತಾರೆ. ಕೇಂದ್ರ ಪುರಸ್ಕøತ ವಿದ್ಯಾರ್ಥಿ ವೇತನ ದರಗಳು ತರಗತಿ 1 ರಿಂದ 10 ರೂ. 1500 ಗಳು ಹಾಗೂ ರಾಜ್ಯ ತರಗತಿ 1 ರಿಂದ 5 ರೂ. 750/, ತರಗತಿ 6 ರಿಂದ 10 ರೂ.900, ತರಗತಿ 9 ರಿಂದ 10 ರೂ.1000ಗಳು.
ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಸ್ಯಾಟ್ಸ್-ಐಡಿ (SATS-ID) ಸ್ಯಾಟ್-ಐಟಿ ತಿಳಿಯಲು ವೆಬ್ ವಿಳಾಸ:  http://sts.karnataka.gov.in ವಿದ್ಯಾರ್ಥಿಯ ಆಧಾರ ಸಂಖ್ಯೆ, ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಪೋಷಕರ ಆಧಾರ ಸಂಖ್ಯೆ,ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ (ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದು), ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆದಿದ್ದಲ್ಲಿ ಹಿಂದಿನ ಸಾಲಿನ ಅರ್ಜಿ ಸಂಖ್ಯೆ (ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದು), ಆಧಾರ ಸಂಖ್ಯೆ ಇಲ್ಲದಿದ್ದಲ್ಲಿ, ಆಧಾರ್ ನೊಂದಣಿ ಮಾಡಿಸಿದ ಇ.ಐ.ಡಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕಿನ ವಿಳಾಸ, ಪೋಷಕರ ಆಧಾರ್ ನಂಬರಗೆ ಲಿಂಕ್ ಮಾಡಿರುವ ಮೊಬೈಲ್ ನಂ ಹಾಗೂ ಭೌತಿಕ ಅನುಮತಿ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು: ಕುಟುಂಬದ ವಾರ್ಷಿಕ ಆದಾಯ ಮಿತಿ ಕೇಂದ್ರ ಪುರಸ್ಕøತ ವಿದ್ಯಾರ್ಥಿ ವೇತನ: ರೂ. 2.50 ಲಕ್ಷ/ವಾರ್ಷಿಕ ಎಲ್ಲಾ ಪ್ರವರ್ಗಗಳಿಗೆ, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ: ರೂ. 1.00 ಲಕ್ಷ/ವಾರ್ಷಿಕ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಮಾತ್ರ, ರೂ. 44.500/- ವಾರ್ಷಿಕ ಪ್ರವರ್ಗ-2ಎ, 3ಎ, 3ಬಿ ಇತರೆ,
ಹಿಂದುಳಿದ ವರ್ಗಗಳಿಗೆ ಫಲಾನುಭವಿಯ ಜಾತಿ ರಾಜ್ಯ ಸರ್ಕಾರವು ಅಧಿಸೂಚಿಸಿರುವ ಪ್ರವರ್ಗ-1, 2ಎ, 3ಎ ಮತ್ತು 3ಬಿ ಹಾಗೂ ಕೇಂದ್ರ ಸಕಾರವು ಅಧಿಸೂಚಿಸಿರುವ ಇತರೆ ಹಿಂದುಳಿದ ವರ್ಗಗಳು (ಪ್ರವರ್ಗ-1, 2ಎ, 3ಬಿ, ಗಳಿಗೆ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದÀ ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ).
ಆದಾಯ ಮತ್ತು ಮೆರಿಟ್ ಆಧಾರದಲ್ಲಿ ಮಂಜೂರಾತಿ ಕೇಂದ್ರ ಪುರಸ್ಕøತ ಅನುದಾನದಲ್ಲಿ ಅತ್ಯಂತ ಕಡಿಮೆ ಆದಾಯ ಮತ್ತು ಮೆರಿಟ್ ಇರುವ ವಿದ್ಯಾರ್ಥಿಗಳಿಗೆ ಲಭ್ಯತೆಗೊಳಪಟ್ಟು ಮಂಜೂರು ಮಾಡಲಾಗುವುದು.
ಇನ್ನುಳಿದ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಮೆರಿಟ್ ಆಧಾರದ ಮೇಲೆ ರಾಜ್ಯ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಸಂಪರ್ಕಿಬಹುದಾಗಿದೆ.

ಹೆಸರುಕಾಳು ಖರೀದಿ ಕೇಂದ್ರ: ರೈತರ ನೋಂದಣಿ ಕಾರ್ಯ ಪ್ರಾರಂಭ
ಬೆಳಗಾವಿ:  2018-19ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಖರೀದಿಸಲು ರಾಜ್ಯ ಸರ್ಕಾರವು ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಅಗಸ್ಟ 31 ರಿಂದ ಸಪ್ಟೆಂಬರ್ 9 ರವರೆಗೆ ರೈತರ ನೋಂದಣಿ ಕಾರ್ಯವು ನಡೆಯಲಿದೆ.
ಜಿಲ್ಲೆಯ ಖರೀದಿ ಕೇಂದ್ರಗಳಾದ ಸವದತ್ತಿ ತಾಲೂಕಿನ ಸವದತ್ತಿ, ಯರಗಟ್ಟಿ, ಮುರಗೋಡ, ಬೈಲಹೊಂಗಲ ತಾಲೂಕಿನ ಬೈಲಹೊಂಗಲ, ದೊಡವಾಡ, ರಾಮದುರ್ಗ ತಾಲೂಕಿನ ರಾಮದುರ್ಗ, ಕಡಕೋಳ, ಹುಲಕುಂದ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಮತ್ತು ರಾಯಭಾಗ ತಾಲೂಕಿನ ಕುಡಚಿಗಳಲ್ಲಿ ರೈತರ ನೋಂದಣಿ ಕಾರ್ಯ ಕೈಗೊಳ್ಳಲಾಗುವುದು.
ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಪ್ರತಿ ರೈತರಿಂದ 10 ಕ್ವಿಂಟಲ್ ಹೆಸರುಕಾಳನ್ನು ಮಾತ್ರ ಖರೀದಿಸಲಾಗುವುದು. ನೋಂದಣಿ ಕೈಗೊಳ್ಳಲು ರೈತರು ಹೆಸರುಕಾಳು ಬೆಳೆದಿರುವ ರುಜುವಾತಾಗಿ ಪಹಣಿ ಪತ್ರವನ್ನು ಕಚೇರಿಗೆ ಸಂಬಂಧಪಟ್ಟವರಿಂದ ಪಡೆದು ಖರೀದಿ ಕೇಂದ್ರದಲ್ಲಿ ಸಲ್ಲಿಸತಕ್ಕದ್ದು.
ಅಲ್ಲದೆ ರೈತರು ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಯ ವಿವರಗಳನ್ನು ನೋಂದಣಿ ಸಮಯದಲ್ಲಿ ನೀಡುವುದು. ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ಯಾವುದೇ ವರ್ತಕರು ಹೆಸರುಕಾಳು ಮಾರಾಟ ಮಾಡುವುದು ಕಂಡುಬಂದರೆ ಕಾನೂನಿನನ್ವಯ ಕಠಿಣ ಕ್ರಮ ಜರುಗಿಸಲಾಗುವುದು.
ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಯಸುವ ರೈತರು ಖರೀದಿ ಸಂಸ್ಥೆಯವರಾದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಶಾಖೆ: ಬೆಳಗಾವಿ/ಗೋಕಾಕ ದೂರವಾಣಿ ಸಂಖ್ಯೆ 9449864445, 08332-225143 ಮತ್ತು ಅಥಣಿ ದೂರವಾಣಿ ಸಂಖ್ಯೆ 9449864471, 0828-9251430 ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಖರೀದಿ ಕೇಂದ್ರಗಳ ಉಪಯೋಗವನ್ನು ಅರ್ಹ ರೈತರುಗಳು ಪಡೆದುಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಅಧ್ಯಕ್ಷರಾದ ಎಸ್. ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಖಲೆಗಳ ಪರಿಶೀಲನೆ ಮುಂದೂಡಿಕೆ
ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ನೇಮಕಾತಿಗಾಗಿ ದಿನಾಂಕ: 27.08.2018 ರಂದು 1:3 ರಂತೆ ಆಯ್ಕೆ ಪಟ್ಟಿ ಪ್ರಕಟಿಸಿದ್ದು. ತಾತ್ಕಾಲಿಕ ವೇಳ ಪಟ್ಟಿಯನ್ನು ಮಾನ್ಯ ವಿಶೇಷಾಧಿಕಾರಿಗಳು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ರವರು ಹೊರಡಿಸಿದ್ದು ಇರುತ್ತದೆ. ಆದರೆ ಅಭ್ಯರ್ಥಿಗಳ ಅಂಕಗಳ ಚೆಕ್‍ಲಿಸ್ಟ್ ಬಾರದೇ ಇರುವ ಕಾರಣ ಜಿಲ್ಲಾ ಮಟ್ಟದ ದಾಖಲೆಗಳ ಪರಿಶೀಲನೆಯ ದಿನಾಂಕವನ್ನು ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ(ದ) ಉಪನಿರ್ದೇಶಕರಾದ ಎ.ಬಿ. ಪುಂಡಲೀಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.