ಉತ್ತಮ ಸಮಾಜಕ್ಕಾಗಿ

ಪಾರ್ಲಿಮೆಂಟ್ದಲ್ಲಿ ರಾಹುಲ್ ಅನನುಭವಿ ನಡೆ: ಸಂಸದ ಸುರೇಶ ಅಂಗಡಿ ವ್ಯಂಗ್ಯ

Rahul behaved like inexperienced in parliament : MP Suresh Angadi irony

0

ಬೆಳಗಾವಿ: (news belagavi)  ಜು. 20ರಂದು ನಡೆದ ಪಾರ್ಲಿಮೆಂಟ್ ಜೋಕ್ ಅನ್ನು ದೇಶ ಗಮನಿಸಿದೆ. ಸೂಕ್ತ ದಾಖಲೆಗಳಿಲ್ಲದೇ ಕಾಂಗ್ರೆಸ್ ಹೈಕಮಾಂಡ ಕೇಂದ್ರ ಸರಕಾರ & ಸೈನ್ಯಾಡಳಿತದ ಮೇಲೆ ಇಲ್ಲಸಲ್ಲದ ಆರೋಪ ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಖೇದ ವ್ಯಕ್ತಪಡಿಸಿದರು. ಆಂದ್ರ ಮತ್ತು ತೇಲಂಗಾಣ ರಾಜ್ಯ ಒಡೆದಾಗ ಸಾಕಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸೃಷ್ಟಿಸಿತು. ಮಮ್ಮಿ ಮಗ ಬಂದು ರಾಜಕಾರಣ ಮಾಡುತ್ತಿದ್ದು, ರಾಹುಲ್ ಅವರಿಗೆ ಸಾಕಷ್ಟು ಅನುಭವ ಬೇಕಾಗಿದೆ ಎಂದು ಸುರೇಶ ಅಂಗಡಿ ನುಡಿದರು.

ದೇಶದ ಅನುಭವ ಮಂಟಪ ಎಂದೇ ಕರೆಸಿಕೊಳ್ಳುವ. ಮನೆಯೊಂದು ಮೂರು ಭಾಗ. ಕುಮಾರಸ್ವಾಮಿ- ಡಾ. ಪರಮೇಶ್ವರ- ಸಿದ್ದರಾಮಯ್ಯ ನಡುವಿನ ತಿಕ್ಕಾಟದಿಂದ ಸರಕಾರಿ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಆಡಳಿತ ಟೇಕ್ ಆಫ್ ಆಗಿಲ್ಲ. ಜನರ ಸಣ್ಣಪುಟ್ಟ ಕೆಲಸಗಳೂ ಆಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಬಡವರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಸರಕಾರ ಪ್ರಯತ್ನ ಪಡುತ್ತಿದೆ. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಪ್ರಶಂಸೆ ಮಾಡಿದಂತೆ ಕೇಂದ್ರದ ಇನ್ಸೂರೆನ್ಸ ಯೋಜನೆ ರೈತರಿಗೆ ಸಹಾಯಕವಾಗಿದೆ. ಇನ್ಸೂರೆನ್ಸ್ ಕಂಪನಿಗಳ ಮೇಲೆ ರಾಜ್ಯ ಸರಕಾರ ಕ್ರಮ ಕೈಗೊಂಡರೆ ಮಾತ್ರ ರೈತರಿಗೆ ಸಾಕಷ್ಟು ಸಹಾಯವಾಗುತ್ತದೆ. ರೈತರ ಇನ್ಸೂರೆನ್ಸ್ ಹಣದಲ್ಲಿ ವ್ಯವಹಾರ ಮತ್ತು ಭ್ರಷ್ಟಾಚಾರ ಆಗಬಾರದು ಎಂದು ಕೋರಿದರು.

ಬೆಳಗಾವಿ ನಗರದ ರೈಲ್ವೇ ಓವರ್ ಬ್ರಿಡ್ಜ್ ಕೆಲಸ ತೀಕ್ಷಣವಾಗಿ ಆಗುತ್ತಿಲ್ಲ. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಕೂಡಲೇ ಕೆಲಸ ಬೇಗ ಆಗಲು ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವರ ಗಮನಕ್ಕೆ ತರಯವೆ:ಲಿಂಗಾಯತ ಧರ್ಮ ಹೋರಾಟದ ಬಗ್ಗೆ ನನಗೆ ಸಾಕಷ್ಟು ತಿಳಿವಳಿಕೆ ಇಲ್ಲ. ಲಿಂಗಾಯತ ಧರ್ಮ ರಚನೆಗೆ ನಡೆದ ಹೋರಾಟ ಗಮನದಲ್ಲಿದೆ. ಲಿಂಗಾಯತ ಧರ್ಮ ಮಾಡುವ ಬಗ್ಗೆ ಶನಿವಾರ ಪ್ರತಿಭಟನೆ ನಡೆಸಿ ನನಗೆ ಮನವಿ ಸಲ್ಲಿಸಲಾಗಿದ್ದು ಅದನ್ನು ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದರು.

ಮನಸ್ಸಿಲ್ಲ:ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಯಶಸ್ವಿ ಜಾರಿಗೆ ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.

iPhone ವಾಪಸ್: ನನಗೆ ಕೊಡಲಾದ iPhone ತತಕ್ಷಣ ವಾಪಸ್ ಮಾಡಲು ನಮ್ಮ ಆಪ್ತ ಸಹಾಯಕರಿಗೆ ತಿಳಿಸಿದ್ದೇನೆ. ಮೊನ್ನೆ ಒಮ್ಮೆಕೆ ಬ್ಯಾಗ್ ಮತ್ತು iPhone ನನಗೆ ತಲುಪಿಸಿದ್ದಾರೆ. ಆತ್ಮಸಾಕ್ಷಿ ಒಪ್ಪದ್ದರಿಂದ ಫೋನ್ ವಾಪಸ್ಸು ಮಾಡುತ್ತಿದ್ದೇನೆ ಎಂದರು.

ಅಖಂಡ ಕರ್ನಾಟಕ ಬೇಕು: ಅಖಂಡ ಕರ್ನಾಟಕವಾಗಿ ರಾಜ್ಯ ಅಭಿವೃದ್ಧಿ ಆಗಬೇಕು. ಬೆಂಗಳೂರು ನಗರ Hell ಆದಂತಾಗಿದೆ. ಬೆಂಗಳೂರು ನಗರವನ್ನು ಉತ್ತಮವಾಗಿ ಬೆಳೆಸಬೇಕಿತ್ತು. ಉತ್ತರ ಕರ್ನಾಟಕದ ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ರಾಜ್ಯ ಒಡೆಯುವ ಮಾತು ಬಿಟ್ಟು ಅಖಂಡ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

ಆಡಳಿತ ಚುರುಕಾಗಲಿ: ದೇವರಾಜು ಅರಸ್ ಕಾಲದಲ್ಲಿ ಪ್ರಾದೇಶಿಕ ಆಯುಕ್ತರ ಹುದ್ದೆ ಸೃಷ್ಟಿಸಿದರು. ಯಾವುದೇ ಸಮಸ್ಯೆಗಳು ಪ್ರಾದೇಶಿಕ ವ್ಯಾಪ್ತಿಯಲ್ಲಿ ಬಗೆಹರಿಯಬೇಕು ಎಂಬ ಉದ್ದೇಶ ಇತ್ತು. ಆದರೆ ಎಲ್ಲಿದೆ ಅಧಿಕಾರಿಗಳಿಗೆ ಅಂತಹ ಮನಸ್ಸು. ಎಲ್ಲವನ್ನೂ ರಾಜ್ಯ ಕೇಂದ್ರ ಸರಕಾರಗಳತ್ತ ಕಳಿಸುವುದಾದರೆ ಜಿಲ್ಲಾಡಳಿತ ಪ್ರಾದೇಶಿಕ ಆಡಳಿತ ಯಾಕಿರಬೇಕು ಎಂದು ಪ್ರಶ್ನಿಸಿದರು. ಜಿಲ್ಲಾಡಳಿತ ಬಹಳ ಚುಟುಕಾಗಿ ಕೆಲಸ ಮಾಡಬೇಕು ಎಂದರು. ಬೆಳಗಾವಿ ಜಿಲ್ಲೆ ಮತ್ತು ರಾಜ್ಯ ಅಖಂಡವಾಗಿರಬೇಕು. ಆದರೆ ಅಭಿವೃದ್ಧಿ ‘ಬೆಂಗಳೂರು ಕೇಂದ್ರಿಕೃತ’ ಮಾಡದೇ ರಾಜ್ಯವ್ಯಾಪಿ ಅಭಿವೃದ್ಧಿ ಆಡಳಿತ ಮಾಡಿ ಎಂದರು. ಬೆಳಗಾವಿ ಸಾಂಸ್ಕ್ರತಿಕ ಜಿಲ್ಲೆ, ಸ್ವ- ಗೌರವ ಹೊಂದಿದೆ. ಬೆಳಗಾವಿ ಜಿಲ್ಲೆ ಒಡೆಯಬಾರದು ಎಂದರು.

ಕಿತ್ತೂರು ಶಾಸಕ ಮಹಾಂತೇಷ ದೊಡ್ಡಗೌಡರ, ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ, ನ್ಯಾಯವಾದಿ ಬಸವರಾಜ ರೊಟ್ಟಿ, ರಮೇಶ ದೇಶಪಾಂಡೆ, ಗೂಳಪ್ಪ ಹೊಸಮನಿ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

Leave A Reply

 Click this button or press Ctrl+G to toggle between Kannada and English

Your email address will not be published.