ಉತ್ತಮ ಸಮಾಜಕ್ಕಾಗಿ

ರಕ್ಷಿತ್ ಶೆಟ್ಟಿ – ಶ್ರೀಮನ್ನಾರಾಯಣ

Rakshith Shetty-Shrimannarayana

0
( TarunKranti ) : ರಕ್ಷಿತ್ ಶೆಟ್ಟಿ – ಶ್ರೀಮನ್ನಾರಾಯಣ : ಕಿರಿಕ್ ಪಾರ್ಟಿಯ ಗುಂಗಿನಿಂದ ಇನ್ನೂ ಹೊರ ಬರದ ಪ್ರೇಕ್ಷಕರು  ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.ಎಲ್ಲಾ ಚಿತ್ರಗಳಿಗಿಂತ ಈ  ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು, ಮಾತುಗಳು ಕೇಳಿಬರುತ್ತಿವೆ.  ತಂಡವು ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಿದ್ದರಾಗಿದ್ದಾರೆ.  ಮೊದಲು ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ  ಫೆಬ್ರವರಿ 10ರಂದು ಆರಂಭಿಸುವ ಸಾಧ್ಯತೆ ಇದೆ.
ಈ ವರ್ಷ ರಕ್ಷಿತ್ ಶೆಟ್ಟಿ ಒಟ್ಟಾರೆ ಮೂರೂ ಚಿತ್ರಗಳನ್ನು ನಿಡುವ ಯೋಜನೆಯಲ್ಲಿದ್ದಾರೆ.
ಕಳೆದ ವರ್ಷ ಸ್ವಲ್ಪ ಸಮಯದ ಅಭಾವವಿತ್ತು , ಕಿರಿಕ್ ಪಾರ್ಟಿ ಸಿನಿಮಾ, ಮತ್ತು ಅವರ ನಿಶ್ಚಿತಾರ್ಥ ಈಗೆ ಬೇರೆ ಸಿನಿಮಾ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ, ಆದರೆ ಇದೆ ವರ್ಷ ಮೂರೂ ಸಿನಿಮಾ ನಿಡಲಿದ್ದೇವೆ ಎಂದಿದ್ದಾರೆ.  ಈ ವರ್ಷ ಅವರು ಬರವಣಿಗೆಗಿಂತ ಸಿನಿಮಾಗಳ ಅಭಿನಯದಲ್ಲಿ ಹೆಚ್ಚು ತೊಡಗಲಿದ್ದಾರೆ.
ಚಿತ್ರ ತಂಡವು ಜೂನ್ ವೇಳೆಗೆ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಮುಗಿಸುವ ವಿಶ್ವಾಸ ಹೊಂದಿದ್ದಾರೆ . ಒಳ್ಳೆಯ ಕಥೆ ಸಿದ್ದಪಡಿಸಿರುವ ತಂಡ ಜನರಿಗೆ ಇಷ್ಟವಾಗುವ ಕಥೆ ಎಂಬ ವಿಶ್ವಾಸ ಹೊಂದಿದ್ದಾರೆ. ಒಟ್ಟಾರೆ 5 ತಿಂಗಳು ಚಿತ್ರೀಕರಣ ನಡೆಯಲಿದ್ದು
ಅವನೇ ಶ್ರೀಮನ್ನಾರಾಯಣದ ನಂತರ ಮುಂದಿನ ಚಿತ್ರ ಪ್ರೀತಿ, ಪ್ರಣಯದ ಕುರಿತ ಸಿನಿಮಾವಾಗಿದ್ದು ಮತ್ತೊಂದು ಸಿನಿಮಾ ಅತ್ಯಂತ ವಿಭಿನ್ನವಾಗಿರುತ್ತದೆ. ಅನೇಕ ವಿಷಯಗಳು ನನ್ನ ಮನಸ್ಸಿನಲ್ಲಿವೆ. ಅವೆಲ್ಲವೂ ಒಟ್ಟಾಗಿ ಸಿನಿಮಾ ರೂಪ ಪಡೆದುಕೊಳ್ಳಲಿದೆ ಎನ್ನುತ್ತಾರೆ.
ಈ ಮೂರು ಚಿತ್ರಗಳಲ್ಲಿ ಯಾವುದಾದರೊಂದಕ್ಕೆ ನಿರ್ದೇಶಕರಾಗುತ್ತೀರಾ ಎಂದು ಕೇಳಿದಾಗ, ಖಂಡಿತಾ ಮತ್ತೆ ನಿರ್ದೇಶನ ಮಾಡುವುದು ನನಗಿಷ್ಟ. ಆದರೆ ಈ ವರ್ಷ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.