ಉತ್ತಮ ಸಮಾಜಕ್ಕಾಗಿ

ರಾಮದುರ್ಗ ಮತಕ್ಷೇತ್ರ: ಚುನಾವಣಾ ವೆಚ್ಚ ವಿವರ ಸಲ್ಲಿಸಲು ಸೂಚನೆ

Ramdurg constituency: Notice to submit election cost details

0

ಬೆಳಗಾವಿ:(news belagavi) 18-ರಾಮದುರ್ಗ ವಿಧಾನಸಭಾ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಫಲಿತಾಂಶ ದಿನಾಂಕದವರೆಗೆ ತಮ್ಮ ಚುನಾವಣಾ ವೆಚ್ಚದ ವಿವರಗಳನ್ನು ಮೇ 18 ರಂದು ಬೆಳಿಗ್ಗೆ 11 ಗಂಟೆಗೆ ಚುನಾವಣಾಧಿಕಾರಿಗಳು 18-ರಾಮದುರ್ಗ ಅವರ ಕಚೇರಿಯಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕೆಂದು 18-ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಸಲ್ಲಿಸುವ ಲೆಕ್ಕದಲ್ಲಿ ಈ ಕೆಳಕಂಡ ದೋಷಗಳು ಇರಬಾರದು.
• ವೋಚರಗಳಿಗೆ ಸಹಿ ಮಾಡದಿರುವುದು.
• ಸಲ್ಲಿಸಿದ ಅಫಿಡಿವಿಟ್‍ನಲ್ಲಿ ವಿಧ್ಯುಕ್ತ ಪ್ರಮಾಣ ಮಾಡದಿರುವುದು.
• ಬ್ಯಾಂಕ್ ರಿಜಿಸ್ಟರ್ ಮತ್ತು ನಗದು ರಿಜಿಸ್ಟರ್‍ಗಳೊಂದಿಗೆ ದೈನಂದಿನ ಲೆಕ್ಕಗಳಿಗೆ ಸಹಿ ಹಾಕದಿರುವುದು.
• ಸಂಕ್ಷಿಪ್ತ ವಿವರ ಪಟ್ಟಿ ಭಾಗ-1 ರಿಂದ ಭಾಗ-4 ಮತ್ತು ಅನುಸೂಚಿ 1 ರಿಂದ 9 ಭರ್ತಿ ಮಾಡದಿರುವುದು, ಸಹಿ ಹಾಕದಿರುವುದು.
• ರೂ.20 ಸಾವಿರ ಕ್ಕಿಂತ ಹೆಚ್ಚಿನ ನಗದು ವೆಚ್ಚವನ್ನು ಚಿಕ್ ಮೂಲಕ ಭರಿಸದಿರುವುದು.
• ಬ್ಯಾಂಕ್ ಖಾತೆ ಹೊರಗಿನ ವೆಚ್ಚ
• ದೇಣಿಗೆ ಪಡೆದಿರುವವರ ದೃಢೀಕರಣ ಪತ್ರ ಇಲ್ಲದಿರುವುದು.
• ಬ್ಯಾಂಕ್ ಖಾತೆ ವಿವರ ಪಟ್ಟಿಗಳ ಸ್ವಯಂ-ಪ್ರಮಾಣೀಕೃತ ಪ್ರತಿಗಳನ್ನು ಸಲ್ಲಿಸದಿರುವುದು ಇಂತ ದೋಷಗಳು ಒಳಗೊಂಡಿದ್ದರೆ, ಲೆಕ್ಕಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ದಾಖಲಾತಿಗಳ ಮೂಲ ಪ್ರತಿ (ಒಂದು ಸೆಟ್) ಹಾಗೂ ನಕಲು ಪ್ರತಿ ( ಎರಡು ಸೆಟ್) ಒಳಗೊಂಡಿರುವಂತೆ ಸಮನ್ವಯಗೊಳಿಸಿ ಹಾಜರುಪಡಿಸಬೇಕು ಎಂದು 18-ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Ramdurg constituency: Notice to submit election cost details

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂ ಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.