ಉತ್ತಮ ಸಮಾಜಕ್ಕಾಗಿ

ಅಥಣಿ ಕ್ಷೇತ್ರದಿಂದ ತಾವು ಸ್ಪರ್ಧೆಗೆ ಇಳಿಯಲ್ಲಿದ್ದಾರೆ ಎಂಬ ಊಹಾಪೋಹಗಳಿಗೆ ರಮೇಶ    ಈ ಮೂಲಕ ತೆರೆ ಎಳೆದರು. ಪರಿಣಾಮ ಬೀರದು…:

Ramesh opened the door to speculation that he was in competition from Athani. Does not affect ...:

0

ಬೆಳಗಾವಿ: ಅಥಣಿ: (news belgaum)ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಜಾರಕಿಹೊಳಿ ಕುಟುಂಬದ ಯಾವುದೇ ಸದಸ್ಯರೂ ಕಣಕ್ಕಿಳಿಯುವುದಿಲ್ಲ  ಎಂದು ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚಿಗೆ ಬೆಳಗಾವಿ ಪ್ರವಾಸ ಕೈಕೊಂಡ ಸಂದರ್ಭದಲ್ಲಿ ಯಶಸ್ವಿ ಸಂಘಟನೆ ಮಾಡಿದ್ದಕ್ಕಾಗಿ   ಪಕ್ಷದ ಕಾರ್ಯಕರ್ತರು ಸೋಮವಾರ  ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು , ಚುನಾವಣೆಯಲ್ಲಿ , ಸ್ಥಳೀಯ ನಿಷ್ಠಾವಂತ  ಕಾರ್ಯಕರ್ತರಿಗೇ ಟಿಕೆಟ್  ನೀಡಲಾಗುವುದು ಎಂದು ಹೇಳಿದರು.

ಗೋಕಾಕದಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಸ್ಥಾನ ನೀಡಿ, ಅಥಣಿ ಕ್ಷೇತ್ರದಿಂದ ತಾವು ಸ್ಪರ್ಧೆಗೆ ಇಳಿಯಲ್ಲಿದ್ದಾರೆ ಎಂಬ ಊಹಾಪೋಹಗಳಿಗೆ ರಮೇಶ    ಈ ಮೂಲಕ ತೆರೆ ಎಳೆದರು.

ಪರಿಣಾಮ ಬೀರದು…:

ಇತ್ತೀಚೆಗೆ ನಡೆದ  ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ರಾಜ್ಯ ಸರಕಾರ ಕೈಕೊಂಡಿರುವ ಜನಪರ ಯೋಜನೆಗಳು ಈ ಚುನಾವಣೆಯಲ್ಲಿ ಪಕ್ಷದ ಕೈ ಹಿಡಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರದ ಜನಪ್ರಿಯ ಯೋಜನೆಗಳಾದ ಕೆರೆ ತುಂಬಿಸುವುದು, ಕರಿಮಸೂತಿ ಏತನೀರಾವರಿ ಯೋಜನೆ, ಕ್ರಷ್ಣಾ ಸಕ್ಕರೆ ಕಾರ್ಖಾನೆ ಮೊದಲಾದವು ಪಕ್ಷದ  ಬೆಂಬಲಕ್ಕೆ ನಿಲ್ಲಲಿವೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ  ಅಸೋದೆ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರ್ಷದ ಗದ್ಯಾಳ, ಮಹಾವೀರ ಕೋರೆ, ರೇಖಾ ಪಾಟೀಲ, ಮಹೇಶ ಕುಮಟಳ್ಳಿ, ಎಸ್. ಎಂ ನಾಯಕ, ಗಜಾನನ ಮಂಗಸೂಳಿ, ವೀರಗೌಡ ಪಾಟೀಲ, ಶ್ಯಾಂ ಪೂಜೇರಿ, ಎಸ್. ಬುಟಾಳೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.Ramesh opened the door to speculation that he was in competition from Athani. Does not affect …:

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.