ಉತ್ತಮ ಸಮಾಜಕ್ಕಾಗಿ

RCU ಗಲಾಟೆ:ಸಿದ್ದು ಸುಣಗಾರ ಸಮಜಾಯಿಷಿ

0

RCU ಗಲಾಟೆ:ಸಿದ್ದು ಸುಣಗಾರ ಸಮಜಾಯಿಷಿ

ಬೆಳಗಾವಿ: ಜನತೆ, ಎಬಿವಿಪಿ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳ ಅಸಮಧಾನದ ತೀವೃತೆ ವ್ಯಕ್ತವಾಗುತ್ತಿದ್ದಂತೆ, RCU-VCಯೊಂದಿಗೆ ಸಂಘರ್ಷಕ್ಕಿಳಿದಿದ್ದ ಜಿಪಂ. ಸದಸ್ಯ ಸಿದ್ದು ಸುಣಗಾರ ತೇಪೆ ಹಚ್ಚುವ ಯತ್ನ ನಡೆಸಿದರು.

ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿ ನಾವು ನಮ್ಮ ಕಾರ್ಯಕರ್ತರು ವಿವಿ ಹೊರಗೆ ಅರ್ಧ ಗಂಟೆ ಕಾಯ್ದರೂ ಕುಲಪತಿ ಚರ್ಚೆಗೆ ಬರಲಿಲ್ಲ. ನಮಗೆ ಬಂದು ಭೇಟಿಯಾಗಲು ತಿಳಿಸಿದಾಗ ಸ್ಪಂದಿಸಿ ಹೊರ ಬರಲಿಲ್ಲ. ನಾವು ಒಳ ಹೋದಾಗ ಅವರ ಭದ್ರತಾ ಸಿಬ್ಬಂಧಿ ಮತ್ತು ನಮ್ಮ ಕಾರ್ಯಕರ್ತರ ನಡುವೆ ನೂಕು ನುಗ್ಗಲು ಉಂಟಾಯಿತು. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಗೆ ಬಂದರು ಎಂದಿದ್ದಾರೆ. ಕುಲಪತಿ ಜತೆಗೆ ನಾವು ಚರ್ಚಿಸಿದೇವು.
ನಮ್ಮ ಶಾಸಕರು, ಸಂಸದರನ್ನು ವಿವಿ ಕಾರ್ಯಕ್ರಮಗಳಿಗೆ ಕರೆಯಲು ಏನು ತೊಂದರೆ ಎಂಬುವುದಾಗಿ ನಾವು ಪ್ರಶ್ನಿಸಿದೇವು. ಸ್ಥಳಿಯ ಜನಪ್ರತಿನಿಧಿಯನ್ನು ಯಾಕೆ ಕರೆದಿಲ್ಲ. ಹಾಗಾದರೆ ಸಂಬಂಧವಿಲ್ಲದವರನ್ನು ಏಕೆ ಇಲ್ಲಿ ಕರೆಯುತ್ತೀರಿ ಎಂದೆಲ್ಲ ನಾವು ಪ್ರಶ್ನಿಸಿದಾಗ, ಕೆಲಹೊತ್ತಿನ ಮುಂದುವರೆದ ಚರ್ಚೆಯ ನಂತರ ಇನ್ಮುಂದೆ ತಮ್ಮನ್ನೂ ಆಹ್ವಾನಿಸುವುದಾಗಿ ಕುಲಪತಿ ಒಪ್ಪಿಕೊಂಡರು ಎಂದು ಸಿದ್ದು ಸುಣಗಾರ ಸಮಜಾಯಿಷಿ ನೀಡಿದ್ದಾರೆ.

The post RCU ಗಲಾಟೆ:ಸಿದ್ದು ಸುಣಗಾರ ಸಮಜಾಯಿಷಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.