ಉತ್ತಮ ಸಮಾಜಕ್ಕಾಗಿ

news belgaum:(ಓದಿಗೆ ಬಡತನವೆಂಬುದು ಅಡತಡೆಯಿಲ್ಲ)

(Read poverty is no obstacle)

0

ಬೆಳಗಾವಿ, (news belgaum)“ಇದು ಹೇಳಿ ಕೇಳಿ ಹೈಟೆಕ್ ಯುಗ ಇಲ್ಲಿ ಸಾಧಕರಿಗೇನು ಕಡಿಮೆಯಿಲ್ಲ. ಸಾಧಕರ ಸೃಜನಶೀಲತೆಗೆ ನಮ್ಮ ಮುಂದಿರುವ,ನಾವು ಊಹಿಸಲು ಅಸಾಧ್ಯವೆನಿಸುವ ಅತ್ಯದ್ಭುತಗಳೇ ಕೈಗನ್ನಡಿಗಳು.ಈ ಹಿಂದೆ ಶಿಕ್ಷಣ ಅನ್ನೋದು ಕೇವಲ ದುಡ್ಡಿದ್ದ ದೊಡ್ಡವರಿಗೆ ಮಾತ್ರ ಎನ್ನುವಂತಿತ್ತು ಆದರೆ ಈಗ ಓದು ಎಲ್ಲರ ಹಕ್ಕು.ಅದು ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ.ಓದೋಕೆ ಜಾತಿ ಮತ ಕುಲದ ಶ್ರೇಷ್ಟತೆಯ ಅಗತ್ಯವಿಲ್ಲ ಎಂಬುದನ್ನು ಮನಗಂಡಿದ್ದೇವೆ.ಓದಬೇಕು ಎನ್ನುವ ಹುಚ್ಚು, ಹಂಬಲ,ಉತ್ಕಟ ಇಚ್ಛೆ ಮನದಲ್ಲಿ ಕಾಡುತ್ತಿದ್ದರೆ News Belgaum-ಆತ್ಮವಿಶ್ವಾಸದಿಂದ ಓದಿ ಗೆಲುವು ನಿಮ್ಮದಾಗಿಸಿಕೊಳ್ಳಿ  (ಓದಿಗೆ ಬಡತನವೆಂಬುದು ಅಡತಡೆಯಿಲ್ಲ)ಯಾವ ವಯಸ್ಸಿನಲ್ಲೂ ಓದಬಹುದು ಎನ್ನುವದನ್ನು ಅನೇಕರು ಸಾಬೀತು ಪಡಿಸಿದ್ದಾರೆ.’ದಡ್ಡ ಮುಂಡೇದಕ್ಕೆ ಓದು ತಲೆಗೆ ಹತ್ತೋದಿಲ್ಲ ’ ಎನ್ನುವ ನಾಣ್ಣುಡಿಗಳು ಇಲ್ಲಿ ಕೆಲಸಕ್ಕೆ ಬರೊಲ್ಲ.’No one is dull in this world’ ಎನ್ನುವ ಮಾತು ಸೂರ್ಯ ಪ್ರಕಾಶದಷ್ಟೆ ಸತ್ಯ.
ಓದೋಕೆ ಹಠ ಹಂಬಲದೊಂದಿಗೆ ಮುಖ್ಯವಾಗಿ ಬೇಕಾಗಿರುವದು ಆತ್ಮವಿಶ್ವಾಸ. “ಒಳ್ಳೆಯದರಲ್ಲಿ ವಿಶ್ವಾಸವಿರುವ ಆತ್ಮವೇ ಪ್ರಬಲವಾದ ಆತ್ಮ” ಎಂದು ಮಹಾತ್ಮ ಎನಿಸಿಕೊಂಡ ಗಾಂಧೀಜಿ ಹೇಳಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ,ಸ್ವಾಮಿ ವಿವೇಕಾನಂದರು “ನಮ್ಮ ಅನೇಕ ಅಪಜಯಗಳಿಗೆ ನಮ್ಮಲ್ಲಿ ಆತ್ಮವಿಶ್ವಾಸವಿಲ್ಲದಿರುವದೇ ಕಾರಣ” ಎಂದು ಸಾರಿದ್ದಾರೆ.ಈ ಮಹಾನ್ ಚೇತನಗಳ ಉಕ್ತಿಯಂತೆ, ನಮ್ಮಲ್ಲಿರುವ ಶಕ್ತಿಯ ಬಗೆಗೆ ನಾವು ವಿಶ್ವಾಸವಿರಿಸುವದು ಬಹು ಮುಖ್ಯ. ಚೆನ್ನೈನ ಬೆನೊ ಝೆಫಿನ್, ದೃಷ್ಟಿ ವಿಕಲಚೇತನೆಯಾದರೂ ಐ ಎಫ್ ಎಸ್ ನಂಥ ಕಠಿಣ ಕೋರ್ಸನಲ್ಲೂ ಯಶ ಸಾಧಿಸಬಹುದು ಎನ್ನುವದನ್ನು ಆತ್ಮವಿಶ್ವಾಸದಿಂದ ಓದಿ ರುಜುವಾತು ಪಡಿಸಿದ್ದಾಳೆ.ಅಸಾಧ್ಯವೆನಿಸೋದು ಸಾಧ್ಯವಾಗೋದೇ ಈ ಆತ್ಮವಿಶ್ವಾಸದಿಂದ. ಆತ್ಮವಿಶ್ವಾಸದಲ್ಲಿ ಅಷ್ಟೊಂದು ದಿವ್ಯ ಶಕ್ತಿಅಡಗಿದೆಯೆಂಬುದು ನೂರಕ್ಕೆ ನೂರರಷ್ಟು ದಿಟ..

ಓದುವ ಮುನ್ನ ಈ ತಂತ್ರಗಳನ್ನು ಬಳಿಸಿ

News Belgaum-ಆತ್ಮವಿಶ್ವಾಸದಿಂದ ಓದಿ ಗೆಲುವು ನಿಮ್ಮದಾಗಿಸಿಕೊಳ್ಳಿ  (ಓದಿಗೆ ಬಡತನವೆಂಬುದು ಅಡತಡೆಯಿಲ್ಲ) 1ಗುರಿಯನ್ನು ದೊಡ್ಡದಾಗಿ ಬರೆಯಿರಿ: “An uwritten goal is not a goal” ಎಂದಿದ್ದಾರೆ ಬಲ್ಲವರು.ನೀವು ಯಾವ ಪರೀಕ್ಷೆಗೆ ಸಿದ್ಧರಾಗುತ್ತಿದಿರೋ ಅದರಲ್ಲಿ ನೀವು ಪಡೆಯಲಿಚ್ಛಿಸುವ ಅಂಕಗಳ ನಿರ್ಧಿಷ್ಟ ಗುರಿಯನ್ನು ಕಾಗದದಲ್ಲಿ ದೊಡ್ಡದಾಗಿ ಬರೆದು ನೀವು ಓದುವ ಕೋಣೆಯಲ್ಲಿ ನಿಮ್ಮ ಕಣ್ಣಿಗೆ ಬೀಳುವಂತೆ ಹಾಕಿ.ಹೀಗೆ ನಿಮ್ಮ ಗುರಿಯನ್ನು ಬರೆದು ಹಾಕುವದರಿಂದ ಮೇಲಿಂದ ಮೇಲೆ ನಿಮ್ಮ ಗುರಿಯನ್ನು ಈ ಕಾಗದ ನೆನಪು ಮಾಡಿಕೊಡುತ್ತದೆ ಮತ್ತು ನಿಮ್ಮಲ್ಲಿ ಓದುವ ಉತ್ಸಾಹವನ್ನು ತುಂಬುತ್ತದೆ.

ಯೋಜನೆ ರೂಪಿಸಿಕೊಳ್ಳಿ: ಇತರರ ತಪ್ಪುಗಳನ್ನು ನೋಡಿ ಪಾಠ ಕಲಿ,ಅವುಗಳೆಲ್ಲವನ್ನು ನೀನೇ ಮಾಡಿ ಕಲಿಯುವಷ್ಟು ಆಯುಷ್ಯ ನಿನಗಿರಲಾರದು’ ಎಂಬ ಜಾಗತಿಕ ಸತ್ಯದ ಮಾತನ್ನು ನುಡಿದವರು ಲೋಥರ್.ಯೊಜನೆ ಹಾಕಿಕೊಳ್ಳದೇ ಪರೀಕ್ಷೆಯಲ್ಲಿ ಫೇಲ್ ಆದವರನ್ನು ಮತ್ತು ಕಡಿಮೆ ಅಂಕ ಗಳಿಸಿ ದುಃಖಿಸುತ್ತಿರುವವರನ್ನು ನೀವು ಕಾಣುತ್ತೀರಲ್ಲವೇ? ನಿಮ್ಮ ಬಾಳು ಹಾಗಾಗಬಾರದು ತಾನೆ? ಅದಕ್ಕಾಗಿಯೇ ನೀವು ಓದಬೇಕಾದ ಪಠ್ಯಕ್ರಮದ ಸಂಪೂರ್ಣ ಮಾಹಿತಿ ಕಲೆ ಹಾಕಿ, ಓದುವ ಸಮಯ ಮತ್ತು ಒಂದು ದಿನಕ್ಕೆ ಓದುವ ಪ್ರಮಾಣದ ಬಗೆಗೆ ಯೋಜನೆ ಹಾಕಿಕೊಳ್ಳಿ.
ಸಮಯ ನಿರ್ವಹಣೆ: ಓದಿನಲ್ಲಿ ಸಮಯ ನಿರ್ವಹಣೆ ತುಂಬಾ ಮುಖ್ಯ.ನೀವು ದಿನ ನಿತ್ಯ ಮಾಡುವ ಇತರೆ ಕೆಲಸಗಳ ಪಟ್ಟಿ ಮಾಡಿ ಉದಾಹರಣೆಗೆ ನಿಮ್ಮ ಸ್ನೇಹಿತರಿಗೆÉ ಭೇಟಿಯಾಗಿ ಹರಟುವ ಸಮಯ, ತಂದೆ ತಾಯಿಗೆ ಸಹಾಯ ಮಾಡುವ ಸಮಯ, ಸಿನಿಮಾ, ಪಿಕನಿಕ್, ಹೀಗೆ ನೀವು ಕೈಗೊಳ್ಳುವ ಎಲ್ಲ ಕೆಲಸಗಳು ಅದರಲ್ಲಿರಲಿ.ಈ ಕೆಲಸಗಳಿಗೆಲ್ಲ ಆಧ್ಯತೆ ಮೇರೆಗೆ ಸಮಯ ಹಂಚಿ. ನೆನಪಿಡಿ, ಓದು ನಿಮ್ಮ ಪ್ರಥಮ ಆಧ್ಯತೆಯಾಗಿರಲಿ.ಉಳಿದೆಲ್ಲ ಗೌಣವಾಗಿರಲಿ.ಇತರೆ ಚಟುವಟಿಕೆಗಳಿಂದ ನಿಮ್ಮ ಓದಿಗೆ ಅಡೆತಡೆಯಾಗದಂತೆ ನೋಡಿಕೊಳ್ಳಿ.

ಏಕಾಗ್ರತೆಯಿಂದ ಆಲಿಸಿ: ಏಕಾಗ್ರತೆಗೆ ಪ್ರಸಿದ್ಧವಾದ ಪಕ್ಷಿಯೆಂದರೆ ಹದ್ದು. ಹದ್ದು ಬಾನೆತ್ತರದಲ್ಲಿ ಹಾರಾಡುತ್ತ ನೆಲದ ಮೇಲಿರುವ ಪಕ್ಷಿ ಪ್ರಾಣಿಗಳನ್ನು ಗಬಕ್ಕನೆ ಹಿಡಿದು ತನ್ನ ಆಹಾರವಾಗಿಸಿಕೊಳ್ಳುತ್ತದೆ. ಹಾಗೆ ನೀವು ವರ್ಗಗದಲ್ಲಿ ಶಿಕ್ಷಕರು ಹೇಳುವ ಪಾಠವನ್ನು ತದೇಕ ಚಿತ್ತದಿಂದ ಆಲಿಸಿ.D°¹.’Listening is an art’ D°¸ ಆಲಿಸುವ ಕಲೆಯನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ.ಅಂದಂದಿನ ಪಾಠವನ್ನು ಅಂದಂದೇ ಓದಿ.ಓದುವದರ ಜೊತೆ ಜೊತೆಯಲ್ಲೆ ಸುಂದರವಾಗಿ ಬರೆಯುವದನ್ನು ರೂಡಿಸಿಕೊಳ್ಳಿ.ಪರೀಕ್ಷೆ ಸಮಯಕ್ಕೆ ಓದಲು ಅನುಕೂಲವಾಗುವಂತೆ ಸಂಕ್ಷಿಪ್ತ ಟಿಪ್ಪಣಿ ಬರೆದಿಟ್ಟುಕೊಳ್ಳಿ.

News Belgaum-ಆತ್ಮವಿಶ್ವಾಸದಿಂದ ಓದಿ ಗೆಲುವು ನಿಮ್ಮದಾಗಿಸಿಕೊಳ್ಳಿ  (ಓದಿಗೆ ಬಡತನವೆಂಬುದು ಅಡತಡೆಯಿಲ್ಲ) 2ಮನನ ಮಾಡಿಕೊಳ್ಳಿ: ಪ್ರಾಣಿಗಳು ಸಿಕ್ಕ ಆಹಾರವನ್ನು ಗಬಗಬನೆ ತಿಂದು ನಂತರ ಮೆಲಕು ಹಾಕುತ್ತವೆ ಹಾಗೆ ನೀವು ಕಲಿತ, ಓದಿದ ವಿಷಯವನ್ನು ಮೇಲಿಂದ ಮೇಲೆ ಮೆಲಕು ಹಾಕಿ ಇದರಿಂದ ಓದಿದ ವಿಷಯ ಮನದಟ್ಟಾಗುತ್ತದೆ ಮತ್ತು ಧೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ನಿಮ್ಮ ನೆನಪಿನ ಶಕ್ತಿಯ ಬಗ್ಗೆ ಆತಂಕ ಗಾಬರಿ ಬೇಡ.ನೆನಪಿಲ್ಲಿಟ್ಟುಕೊಳ್ಳಲು ಅಕ್ರೊನಿಮ್ಸ(ಅಕ್ಷರ ಮುದ್ರೆ)ನಂಥ ತಂತ್ರಗಳನ್ನು ಬಳಿಸಿಕೊಳ್ಳಿ
ಪಠ್ಯ ಪುಸ್ತಕದ ಜೊತೆ ಬೇರೆಯದನ್ನೂ ಓದಿ: ಬರೀ ಪಠ್ಯ ಪುಸ್ತಕದ ಅಥವಾ ನಿಗದಿತ ಪಠ್ಯಕ್ರಮದ ಹುಳುವಾಗಬೇಡಿ. ಅದರಾಚೆಗೂ ಜಗತ್ತಿದೆ. ಅದು ನಿಮಗೆ ಮುಂದೆ ಬೇಕಾಗುವಂತÀಹುದೆ.ಅದಕ್ಕೆ ನೀವು ದಿನ ನಿತ್ಯ ದಿನಪತ್ರಿಕೆಗಳನ್ನು ಮತ್ತಿತರೆ ಮ್ಯಾಗ್ಜಿನ್‍ಗಳನ್ನು, ಮಹಾನ್ ಸಾಧಕರ ಆತ್ಮಕಥೆಗಳನ್ನು ಓದಿ, ಇವು ನಿಮ್ಮಲ್ಲಿ ಹುಮ್ಮಸ್ಸು ಹೆಚ್ಚಿಸಿ, ಸ್ಪೂರ್ತಿ ಇಮ್ಮಡಿಗೊಳಿಸುತ್ತವೆ. ಇಂಥ ಓದಿನಿಂದ ಲೋಕಾನುಭವ ಹೆಚ್ಚುತ್ತದಲ್ಲದೆ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಲು ಸಹಕರಿಸುತ್ತವೆ ಮತ್ತು ಈ ಓದು ನಿಮಗೆ ಇಂಟರ್ ವ್ಯೂ, ಪಬ್ಲಿಕ್ ಸ್ಪೀಕಿಂಗ್‍ನಂಥ ಸಮಯದಲ್ಲಿ ತುಂಬಾ ನೆರವಾಗುತ್ತದೆ.

ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ: ನೀವು ಸನ್ನದ್ದುಗೊಳ್ಳುತ್ತಿರುವ ಪರೀಕ್ಷೆಯ ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಕಲೆಹಾಕಿ ಮತ್ತು ಅವುಗಳನ್ನು ನಿಗದಿತ ಅವಧಿಯಲ್ಲಿ ಬಿಡಿಸುವ ರೂಢಿ ಮಾಡಿಕೊಳ್ಳಿ ಇದರಿಂದ ನೀವು ಇನ್ನೂ ಯಾವ ವಿಷಯ ಚೆನ್ನಾಗಿ ಓದಬೇಕು, ಉತ್ತರ ಬರೆಯುವಲ್ಲಿ ಎಲ್ಲಿ ತಪ್ಪುತ್ತಿರುವಿರಿ,ಯಾವ ಪ್ರಶ್ನೆಗೆ ಎಷ್ಟು ಸಮಯ ನೀಡುವದು ಎನ್ನುವದನ್ನು ಮ£ಗಾಣಲು ಸಹಾಯಕವಾಗುವದು. ಮತ್ತು ಪರೀಕ್ಷಾ ಭಯವನ್ನು ಓಡಿಸಿ, ಮನೋಸ್ಥೈರ್ಯವನ್ನು ತುಂಬುವದು.

ಬಡತನವನ್ನು ಬೆನ್ನಿಗೆ ಅಂಟಿಸಿಕೊಂಡೇ ಹುಟ್ಟಿ, ಕಷ್ಟ ಸಾಗರದಲ್ಲಿ ಮುಳುಗಿದ್ದರೂ ಲೆಕ್ಕಿಸದೆ, ಸರ್ ಎಮ್ ವಿಶ್ವೇಶ್ವರಯ್ಯನವರು, ಎ ಪಿ ಜೆ ಅಬ್ದುಲ್ಲ ಕಲಾಂ ನಂಥ ಅನೇಕ ಮಹನೀಯರು ಆತ್ಮವಿಶ್ವಾಸದಿಂದ ಓದಿ ಗೆಲುವು ಸಾಧಿಸಿ, ಇತರರಿಗೆ ಮಾದರಿಯಾದ ಬಾಳನ್ನು ಬದುಕಿದ್ದಾರೆ.,
ಇದಕ್ಕೆ ವ್ಯತಿರಿಕ್ತವೆನ್ನುವಂತೆ, ಹುಟ್ಟುವಾಗಲೇ ಬಾಯಿಯಲ್ಲಿ ಬಂಗಾರದ ಚಮಚವನ್ನಿಟ್ಟುಕೊಂಡು ಹುಟ್ಟಿದ ಕೆಲವರು ಸರಿಯಾಗಿ ಓದದೇ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡು ಜೀವನವನ್ನು ಸರ್ವನಾಶ ಮಾಡಿಕೊಂಡ ದೃಷ್ಟಾಂತಗಳು ನಮಗೆ ಸಮಾಜದಲ್ಲಿ ಸಿಗುತ್ತವೆ.
ಆದ್ದರಿಂದ ಪರೀಕ್ಷಾರ್ಥಿಗಳೇ ಓದಿಗೆ ಬಡತನವೆಂಬುದು ಅಡೆತಡೆ ಅಲ್ಲವೇ ಅಲ್ಲ. ಓದು ಕೇಳುವದು ನಿಮ್ಮ ಸಿರಿತನವನ್ನಲ್ಲ, ನಿಮ್ಮ, ಶ್ರದ್ಧೆ, ಛಲ ಮತ್ತು ನಿಮ್ಮ ಆತ್ಮವಿಶಾಸವನ್ನು ಮಾತ್ರ. ಹಾಗಾದರೆ ತಡವೇಕೆ ಇಂದಿನಿಂದಲೇ ಆತ್ಮವಿಶ್ವಾಸದಿಂದ ಓದು ಪ್ರಾರಂಭಿಸಿ. ಗೆಲುವು ಸಾಧಿಸಿ.   (ಜಯಶ್ರೀ.ಜೆ.ಅಬ್ಬಿಗೇರಿ )Read with confidence and get your victory (read poverty is no problem)

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.