ಉತ್ತಮ ಸಮಾಜಕ್ಕಾಗಿ

tarun kranti:ಲಕ್ಷ್ಮೀ ಫೌಂಡೆಶನ್ ದಿಂದ ಧರ್ಮ ಯಾತ್ರೆ

Religious pilgrimage from Lakshmi Foundation to Shravanabelagola

0

ಬೆಳಗಾವಿ:(news belgaum)(tarun kranti) ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅಪ್ರತಿಮ ಸಮಾಜ ಸೇವೆಯ ಜೊತೆಗೆ ಈಗ ಧರ್ಮ ಕಾರ್ಯದಲ್ಲೂ ಕೈಜೋಡಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

News Belgaum-ಶ್ರವಣಬೆಳಗೊಳಕ್ಕೆ ಲಕ್ಷ್ಮೀ ಫೌಂಡೆಶನ್ ದಿಂದ ಧರ್ಮ ಯಾತ್ರೆಶ್ರವಣಬೆಳಗೊಳದಲ್ಲಿ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ನಡೆಯುತ್ತಿದೆ ಜಗತ್ತಿನ ಭಕ್ತರು ಈ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಈ ಧರ್ಮದ ಕಾರ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರೂ ಪಾಲ್ಗೊಳ್ಳಬೇಕು ಎಂಬ ಮಹದಾಸೆಯಿಂದ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರಿಗೆ ಉಚಿತವಾಗಿ ಬಸ್ಸಿನ ಅನಕೂಲತೆ ಮಾಡಿಕೊಟ್ಟು ಲಕ್ಷ್ಮೀ ಹೆಬ್ಬಾಳಕರ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳ ಭಕ್ತರಿಗಾಗಿ ಉಚಿತವಾಗಿ ಹದಿನಾಲ್ಕು ಬಸ್ ಗಳ ವ್ಯೆವಸ್ಥೆ ಮಾಡಿದ ಹೆಬ್ಬಾಳಕರ ಇಂದು ಸಂಜೆ ಸುವರ್ಣ ವಿಧಾನ ಸೌಧದ ಬಳಿ ಭಕ್ತರಿಂದ ತುಂಬಿದ ಬಸ್ ಗಳನ್ನು ಶ್ರವಣಬೆಳಗೊಳಕ್ಕೆ ಬೀಳ್ಕೊಟ್ಟರು

ಈ ಸಂಧರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಹೋಗಬೇಕು ಎಂಬ ಅಭಿಲಾಷೆ ಇರುತ್ತದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರೂ ಇದರಲ್ಲಿ ಭಾಗವಹಿಸಿ ಪುನೀತರಾಗಬೇಕೆಂಬ ಉದ್ದೇಶದಿಂದ ಮೊದಲ ಕಂತಿನಲ್ಲಿ ಹದಿನಾಲ್ಕು ಬಸ್‍ಗಳ ವ್ಯೆವಸ್ಥೆ ಮಾಡಿಸಿದ್ದೇನೆ. ಎರಡು ಮೂರು ಕಂತುಗಳಲ್ಲಿ 30 ಕ್ಕೂ ಹೆಚ್ಚು ಬಸ್ ಗಳು ಲಕ್ಷ್ಮೀ ತಾಯಿ ಫೌಂಡೇಶನ್ ವತಿಂತ ಶ್ರವಣಬೆಳಗೊಳಕ್ಕೆ ಧರ್ಮ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೆಬ್ಬಾಳಕರ ತಿಳಿಸಿದರು.Religious pilgrimage from Lakshmi Foundation to Shravanabelagola

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.