ಉತ್ತಮ ಸಮಾಜಕ್ಕಾಗಿ

(news belgaum):ಪುಸ್ತಕ ವಿದ್ಯೆ ಜೊತೆಗೆ ಪ್ರಾಯೋಗಿಕ ಅನುಭವ ಅಗತ್ಯ – ನಿಲೇಶ ಚೌಗುಲೆ

Required Experimental Experience with Bookstore - Elizabeth Chougule

0

ಬೆಳಗಾವಿ:(news belgaum) “ವಿದ್ಯಾರ್ಥಿ ಜೀವನದಲ್ಲಿ ಪುಸ್ತಕೀಯ ಅಭ್ಯಾಸದೊಂದಿಗೆ ಪ್ರಾಯೋಗಿಕ ಅನುಭವ ಪಡೆಯುವುದು ಅತ್ಯಂತ ಅವಶ್ಯಕ” ಎಂದು ಖ್ಯಾತ ಉದ್ಯಮಿ ಶ್ರೀ.ನಿಲೇಶ ಚೌಗುಲೆ, ಎಂ.ಡಿ, ಕ್ರೆಂಟರ್ಸ ಟೆಕ್ನೊಸೊಲ್ ಪ್ರೈ.ಲಿ., ಇಂದಿಲ್ಲಿ ಕರೆ ನೀಡಿದರು.
ಅವರು ಪ್ರತಿಷ್ಠಿತ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‍ನಲ್ಲಿ ಆಯೋಜಿಸಲಾಗಿದ್ದ “ಆವಿಷ್ಕಾರ-2018” ವಿದ್ಯಾರ್ಥಿಗಳು ತಯಾರಿಸಿದ ರಾಷ್ಟ್ರಮಟ್ಟದ ಪ್ರೊಜೆಕ್ಟ ಪ್ರದರ್ಶನ ಹಾಗೂ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದು ಈ ಸರಣಿಯ ಒಂಬತ್ತನೇಯ ಆವೃತ್ತಿಯಾಗಿದೆ.
News Belgaum-ಮಾ.29 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಆಚರಣೆವಿದ್ಯಾರ್ಥಿ ಜೀವನದಲ್ಲಿ ಇಂಥ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಅಧ್ಯಯನದ ಮನನವಾಗುತ್ತದೆ ಎಂದರು. ವಿದ್ಯಾರ್ಥಿಗಳು ಯಾವುದೇ ಇಂಜಿನಿಯರಿಂಗ್ ಮಾಡಿದ್ದರೂ ತಮ್ಮನ್ನು ತಾವು ಇಂಜಿನಿಯರ್ ಎಂದು ಮಾತ್ರ ಗುರುತಿಸಿಕೊಳ್ಳಬೇಕು. ತಾಂತ್ರಿಕತೆಯ ಎಲ್ಲ ಅಂಗಗಳೂ ಅಷ್ಟೇ ಮುಖ್ಯ ಎಂದರು. ಎಲ್ಲರೂ ವಿವಿಧ ಕ್ಷೇತ್ರಗಳಿಗೆ ಮುಕ್ತರಾಗಿರಬೇಕೆಂದರಲ್ಲದೆ ಬಿ.ಇ. ಅಭ್ಯಾಸ ಮುಂದುವರೆಸಿ ಕಾಲ ಹರಣ ಮಾಡುವುದಕ್ಕಿಂತ ಕೆಲಸಕ್ಕೆ ಆರಂಭಿಸುವುದು ಸೂಕ್ತ ಎಂದರು. ಎಲ್ಲ ಜ್ಞಾನಗಳಲ್ಲಿ ಪ್ರಾಯೋಗಿಕ ಪರಿಜ್ಞಾನವೇ ಶ್ರೇಷ್ಠ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿನೋದ ಎಸ್ ದೊಡ್ಡಣ್ಣವರ, ಚೇರಮನ್, ಗ್ಲೊಬಲ್ ಬಿಸಿನೆಸ್ ಸ್ಕೂಲ್, ಭರತೇಶ ಶಿಕ್ಷಣ ಸಂಸ್ಥೆ, ಅವರು ನಿಲೇಶ ಚೌಗುಲೆ ಅವರು ಒರ್ವ ಮಾದರಿ ಉದ್ಯಮಿಯಾಗಿದ್ದಾರೆಂದು ಕೊಂಡಾಡಿದರು ಮತ್ತು ಇಂಜಿನಿಯರ ಆದವರಿಗೆ ಪ್ರವೃತ್ತಿ ಅವಶ್ಯಕ ಎಂದು ಕರೆನೀಡಿದರು.
ಆರಂಭದಲ್ಲಿ ಪ್ರಾಂಶುಪಾಲರಾದ ಶ್ರೀ.ಎಸ್.ಎನ್.ತುಳಸಿಗೇರಿ ಅವರು ಸ್ವಾಗತ ಕೋರಿದರು. ಸುತ್ತಮುತ್ತಲಿನ ಪಾಲಿಟೆಕ್ನಿಕಗಳಿಂದ 140ಕ್ಕೂ ಮೀರಿ ಪ್ರೊಜೆಕ್ಟಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಏಳು ವಿವಿಧ ವರ್ಗಗಳಲ್ಲಿ ಸ್ಪರ್ಧೆ ನಡೆಯಿತು. ಅನೇಕ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ನಿರ್ಣಾಯಕರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಶೋಕ ಧನವಡೆ, ಸದಸ್ಯರು, ತಾಂತ್ರಿಕ ಸಲಹಾ ಮಂಡಳಿ, ಭರತ ಪಾಟೀಲ, ಚೇರಮನ್, ತಾಂತ್ರಿಕ ಸಲಹಾ ಮಂಡಳಿ, ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕು.ರಾಹುಲ್ ದೊಡಕಲ್ಲಣ್ಣವರ ವಂದಿಸಿದರು.Required Experimental Experience with Bookstore – Elizabeth Chougule

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.