ಉತ್ತಮ ಸಮಾಜಕ್ಕಾಗಿ

ಅಪಘಾತ ಸಂದರ್ಭದಲ್ಲಿ ಅನುಕಂಪಕ್ಕಿಂತ ಸ್ಪಂದನೆ ಮುಖ್ಯ : ಅಶೋಕ ಬದಾಮಿ

Response to compassion is important in case of accident: Ashok Badami

0

ಬೆಳಗಾವಿ:(news belgaum)ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಜೀವ ಅಪಾಯದ ಸಂಕಟದಲ್ಲಿ ನರಳುತ್ತಿರುವಾಗ ಅಲ್ಲಿದ್ದವರು ಅನುಕಂಪದ ಮಾತುಗಳನ್ನಾಡಿ ಸಮಯ ಕಳೆಯುವುದಕ್ಕಿಂತ ಅಪಾಯದಿಂದ ಪಾರುಮಡುವ ಕೆಲಸಕ್ಕೆ ಸ್ಪಂದಿಸಿ ಮಾನವೀಯ ಮೆರೆಯುವುದ ಮುಖ್ಯವಾಗುತ್ತದೆ ಎಂದು ಭಾರತೀಯ ರೆಡಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬದಾಮಿ ತಿಳಿಸಿದ್ದಾರೆ.

ಅಪಘಾತ ಸಂದರ್ಭದಲ್ಲಿ ಅನುಕಂಪಕ್ಕಿಂತ ಸ್ಪಂದನೆ ಮುಖ್ಯ : ಅಶೋಕ ಬದಾಮಿ- Tarun krantiನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ಯುಥ್ ರೆಡಕ್ರಾಸ್ ವಿಂಗ್ ಹಾಗೂ ಭಾತೀಯ ರೆಡಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಇಂದು ಬುಧವಾರ ದಿನಾಂಕ 28ರಂದು ಹಮ್ಮಿಕೊಂಡ ‘ಪ್ರಥಮ ಚಿಕಿತ್ಸೆ’ ಕುರಿತು ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರು, ಇಂದು ದೇಶದಲ್ಲಿ ಜನಸಂಖ್ಯೆಯ ವಿಪರಿತ ಬೆಳವಣಿಗೆ, ವಾಹನಗಳ ಅಧಿಕ ಸಂಖ್ಯೆಯ ಸಂಚಾರ ಹಾಗೂ ವೇಗದ ಸಂಚಾರದ ಕಾರಣ ಅಪಘಾತಗಳು ಜಾಸ್ತಿಯಾಗಿವೆ. ಅದರಲ್ಲೂ ವಿಶೇಷವಾಗಿ ವಾಹನಗಳ ಚಾಲನೆಯ ನಿಯಮಗಳನ್ನು ಅನುಸರಿಸದ ಯುವಕರು ಅಪಘಾತಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ರಸ್ತೆಯ ಮೇಲೆ ಸಂಚರಿಸುವಾಗ ನಿಯಗಳನ್ನು ಪಾಲಿಸಿ ಸುರಕ್ಷಿತವಾಗಿ ಸಾಗುವುದನ್ನು ರೂಢಿಸಿಕೊಳ್ಳುವುದರ ಜೊತೆಗೆ, ತಾವಿರುವ ಸ್ಥಳದಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿ ವ್ಯಕ್ತಿ ಸಂಕಟದಲ್ಲಿ ನರಳುತ್ತಿರುವಾಗಿ ಸೂಕ್ತ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಬೇಕು. ಪ್ರಥಮ ಚಿಕಿತ್ಸೆಯ ಯಾವುದೇ ತಿಳುವಳಿಕೆ ಇಲ್ಲದೆ ಹೋದರೂ ಸಹಾಯ ಮಾಡಲಾದರೂ ಮುಂದಾಗಬೇಕು. ಇಂಥ ಸಂದರ್ಭದಲ್ಲಿ ಪೊಲೀಸ್, ಅಂಬ್ಯೂಲನ್ಸ್‍ಗಳಿಗೆ ತ್ವರಿತವಾಗ ಕರೆ ಮಾಡಿ ತಿಳಿಸಲು ಮುಂದಾಗಬೇಕು. ಈ ಬಗೆಯ ಸಹಾಯಕ್ಕೆ ಯಾವುದೇ ರೀತಿಯ ಅನುಮಾನ ಹಾಗೂ ಭಯಗಳಿಗೆ ಒಳಗಾಗಬೇಕಾಗಿಲ್ಲ ಎಂದು ತಿಳಿ ಹೇಳಿದ ಅವರು, ವ್ಯಕ್ತಿ ಅಘಾತ ಹಾಗೂ ಅಪಘಾತಕ್ಕೆ ಒಳಗಾದಾಗ ಯಾವವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕಾಗುತ್ತದೆ ಎಂಬುದನ್ನು ಪ್ರಯೋಗಿಕವಾಗಿ ಮನವರಿಕೆ ಮಾಡಿದರು.

ಜೆಜಿಐ ಸಂಸ್ಥೆಯ ರಜಿಸ್ಟಾರ್ ಪ್ರೊ. ಕೆ.ಜಿ. ಮಳಲಿ, ಕಾಲೇಜಿನ ಪ್ರಾಚಾಂiರ್À ಸುನಿಲ ದೇಸಾಯಿ ಹಾಗೂ ಜೈನ ಕಾಲೇಜಿನ ಯುಥ ರೆಡಕ್ರಾಸ್ ವಿಂಗನ ಸಂಯೋಜಕರಾದ ಪ್ರೊ. ಕಿರಣ ಪಾಟೀಲ ಮತ್ತು ಪ್ರೊ. ಜ್ಯೋತಿ ಕುಲಕರ್ಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೈನ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶರೋನ್ ಥೇದಾರೆ ಸ್ವಾಗತಿಸಿದರು. ಸೋನೊ ಪರಬಾಳೆ ವಂದಿಸಿದರು. Response to compassion is important in case of accident: Ashok Badami   

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.