ಉತ್ತಮ ಸಮಾಜಕ್ಕಾಗಿ

ಪ್ರೋ ಡಿ.ಬಿ ಜಾರೆಯವರಿಗೆ ಬೀಳ್ಕೊಡುವ ಸಮಾರಂಭ

Retirement Ceremony for Pro.D.B.Jaare

0

ಬೆಳಗಾವಿ: ಸ್ಥಳೀಯ ಅಂಜುಮನ್ ಕಲಾ ಹಾಗೂ ವಾಣಿಜ್ಯ ಕಾಲೇಜದಲ್ಲಿ ಅರ್ಥಶಾಸ್ತ್ರ ಪ್ರಾದ್ಯಾಪಕರಾಗಿ ಪ್ರೋ.ಡಿ.ಬಿ ಜಾರೆ ಅವರು
ವಯೋನಿವೃತ್ತಿಯಾದರು ಮಹಾವಿದ್ಯಾಲಯದಲ್ಲಿ ಬೀಳ್ಕೊಡುವ

ಸಮಾರಂಭದ ಹಮ್ಮಿಕೋಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ. ಮಾಹಿನ್ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿದ್ಯಾಭ್ಯಾಸ ಹೇಳುವುದರೊಂದಿಗೆ ಹತ್ತು ವರ್ಷಗಳಿಂದ ಎನ್‍ಎಸ್‍ಎಸ್ ಅಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರೋ ಬಿ.ಚಿ ಮುಗುಟ ಮಾತನಾಡಿ ಪ್ರೋ ಜಾರೆಯವರು ನನ್ನ ಬಾಲ್ಯ ಸೇಹ್ನಿತರು ಸದ್ಗುಣ-ಸಂಪನ್ನರು ಮತ್ತು ಆಗಾದ ಮನೋಭಾವ ಹುಳ್ಳವರು ಸಾವಿರಾರೂ ವಿದ್ಯಾರ್ಥಿಗಳಿಗೆ ದಾರಿ ದೀಪವಾದರು. ನಿವೃತ್ತಿಯಾಗುವರೆಗೂ ವಿದ್ಯಾರ್ಥಿಗಳ ಹತ್ತಾರೂ ಸಮಸ್ಯೆಗಳಿಗೆ ಸ್ಪಂಧಿಸಿದವರು ಎಂದರು. ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಎಚ್. ಆಯ್. ತಿಮ್ಮಾಪೂರ ಅವರು ಪ್ರೋ ಜಾರೆಯವರು ತುಂಬಾ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಕಾಲೇಜಿನ ಪ್ರತಿಯೊಂದು ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು.

ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಯೋನಿವೃತ್ತಿರಾದರೆ ವಿದ್ಯೆಯಿಂದ ನಿವೃತ್ತಯಾದಂತಿಲ್ಲ
ವಿದ್ಯಾರ್ಥಿಗಳಿಗೆ ಕೊನೆ ಉಸಿರು ಇರುವರೆಗೆ ನಮ್ಮಲ್ಲಿನ ಜ್ಞಾನ ಬೋಧನೆ ಮಾಡಿ ಅವರಿಗೆ ಜ್ಞಾನದ ಅರಿವು ಮೂಡಿಸಬೇಕು
ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೆತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗ ಉಪಸ್ಥಿತರಿದ್ದರು. ಎಸ್.ಎ ಮುಲ್ಲಾ
ನಿರೂಪಿಸಿದರು.ಆಯಿ.ಬಿ.ತಹಸಿಲ್ದಾರ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: