ಉತ್ತಮ ಸಮಾಜಕ್ಕಾಗಿ

7 ಕೋಟಿ ರೂಪಾಯಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಆದ್ರೆ ಮಧ್ನಾಹ್ನದ ಹೊತ್ತಿಗೆ 7 ಕೋಟಿ ಇದ್ದುದು, 48 ಸಾವಿರ ಮಾತ್ರ ಉಳಿದಿತ್ತು

Rs 7 crore seized counterfeit notes. But by mid-afternoon there were only 7 crore, and only 48,000 remained

0

ಬೆಳಗಾವಿ:(news belgaum) ಬೆಳಗಾವಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ₹7 ಕೋಟಿ ರೂಪಾಯಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಆದ್ರೆ ಮಧ್ನಾಹ್ನದ ಹೊತ್ತಿಗೆ ₹7 ಕೋಟಿ ಇದ್ದುದು, 48 ಸಾವಿರ ಮಾತ್ರ ಉಳಿದಿತ್ತು. ಇದೇನಿದು ಉಳಿದ ಕೋಟ್ಯಂತರ ರೂಪಾಯಿ ಯಾರ ಜೇಬು ಸೇರಿತು ಅನ್ನೋ ಕೂತುಹಲವಾ ಹಾಗಾದ್ರೆ ಈ ಸ್ಟೋರಿ ಓದಿ.
ಇಂದು ಬೆಳಿಗ್ಗೆ ಬೆಳಗಾವಿ ಪೋಲಿಸರು ಮತದಾರರಿಗೆ ಹಂಚಲು ಪ್ರಿಂಟ್ ಮಾಡಿದ್ದ 7ಕೋಟಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಬೆಳಿಗ್ಗೆ ಭಾರೀ ಜೋಶ್ ನಲ್ಲಿದ್ದ ಪೋಲಿಸರು ಮಧ್ಯಾಹ್ನದ ಹೊತ್ತಿಗೆ ಫುಲ್ ಡಲ್ ಹೊಡೆದ್ರು. ಯಾಕಂದ್ರೆ ಬೆಳಗಾವಿ ಪೋಲಿಸರ ‘ಆಪರೇಷನ್ ಏಳುಕೋಟಿ’ ಠುಸ್ ಆಗಿತ್ತು. ಹೌದು ಪೋಲಿಸರು ವಶಪಡಿಸಿಕೊಂಡ ಹಣವೆಷ್ಟು ಅಂತ ಸ್ವತಃ ಬೆಳಗಾವಿ ಪೋಲಿಸ್ ಕಮೀಶನರ್ ಡಿ.ಸಿ.ರಾಜಪ್ಪ ಅವರೇನಂತಾರೆಂದರೆ. ಪೋಲಿಸರು ಖೋಟಾ ನೋಟುಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ನೋಡುವಷ್ಟರಲ್ಲಿ ಬಿಗ್ ಶಾಕ್ ಕಾದಿತ್ತು.
ಅದೇನಂದ್ರೆ 24 ಎರಡು ಸಾವಿರ ಮುಖಬೆಲೆಯ ನೋಟುಗಳ 48 ಸಾವಿರ ಹೊರತು ಪಡಿಸಿದ್ರೆ ಎಲ್ಲ ನೋಟುಗಳ ಮೇಲೆ Children Bank ಎಂದು ಪ್ರಿಂಟ್ ಮಾಡಲಾಗಿದ್ದು, ನೋಟ್ ಮುಖಬೆಲೆಯ ಜಾಗದಲ್ಲಿ0000ಎಂದು ಪ್ರಿಂಟ್ ಹಾಕಲಾಗಿದೆ. ಈ ಬಗ್ಗೆ ಪೋಲಿಸರು ವಿಚಾರಿಸಿದಾಗ 15ಸೆಕೆಂಡ್ ಎಂಬ ಸಿನಿಮಾ ಶೂಟಿಂಗ್ ಗೋಸ್ಕರ್ ಪ್ರಿಂಟ್ ಹಾಕಿದ್ದೇವೆ ಎಂದು ಆರೋಪಿತ ತಿಳಿಸಿದ್ದಾನೆ. ಒಟ್ಟಾಗಿ ಬೆಳಗಾವಿ ಪೋಲಿಸರ ಭರ್ಜರಿ ಭೇಟೆ ಮಿಸ್ ಆಗಿದ್ದು ಸಿಕ್ಕಿರುವ 24 ಖೋಟಾ ನೋಟುಗಳ ಕುರಿತು ಪ್ರಕರಣ ದಾಖಲಿಸಿಕೊಂಡು ಈಗ ತನಿಖೆ ನಡೆಸಿದ್ದಾರೆ.
ವರ್ಗಾವಣೆ ಹೊಸ್ತಿಲಲ್ಲಿ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ತೀವೃ ಮಜುಗುರಕ್ಕೊಳಗಾಗಿದ್ದು, ಮಕ್ಕಳಾಟದ ಫೇಕ್ ನೋಟ್ ಗಳ ಬಗ್ಗೆ ಕೂಲಂಕೂಷ ವಿಚಾರಿಸದೇ ಅವಸರಕ್ಕೆ ಬಿದ್ದು ನಗೆಗಡಲಿಗೀಡಾದರು ಎನ್ನಲಾಗುತ್ತಿದೆ. ಚಿತ್ರ ನಿರ್ಮಾಣ ಮಾಡುತ್ತಿದ್ದು ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಇಂತಹ ನೋಟುಗಳನ್ನು ಮಾಡಲಾಗಿತ್ತು ಎಂದು ಬಂಧಿತ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ವಿಣಾರಣೆ ನಡೆಸಿದ್ದರೂ, ಮಜುಗುರಕ್ಕೊಳಗಾಗಿದ್ದು ನಿಜ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.