ಉತ್ತಮ ಸಮಾಜಕ್ಕಾಗಿ

ಸ್ವಚ್ಛತಾ ಜಾಗೃತಿ ಜಾಥಾಗೆ ಚಾಲನೆ

Run for awareness Jatha

0

ಸ್ವಚ್ಛ ಬೆಳಗಾವಿ ನಗರ ನಿರ್ಮಾಣಕ್ಕೆ ಕೈಜೋಡಿಸಿ- ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ
ಸ್ವಚ್ಛತಾ ಜಾಗೃತಿ ಜಾಥಾಗೆ ಚಾಲನೆ- Tarun krantiಬೆಳಗಾವಿ: (news belgaum)ಸ್ವಚ್ಚತೆಯ ಕುರಿತು ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಿ, ಸ್ವಚ್ಛ ಬೆಳಗಾವಿ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಕರೆ ನೀಡಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಸ್ವಚ್ಛಭಾರತ ಮಿಷನ್ ಅಡಿ ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಗುರುವಾರ (ಫೆ.22) ಏರ್ಪಡಿಸಿದ್ದ ನಗರ ಸ್ವಚ್ಛತೆಯ ಕುರಿತ ಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯನ್ನು ಬಯಲು ಶೌಚಮುಕ್ತವನ್ನಾಗಿಸಲು ಎಲ್ಲರೂ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ ಸುಂದರ ಪರಿಸರ ನಿರ್ಮಾಣಕ್ಕೆ ಬದ್ಧರಾಗಬೇಕೆಂದು ಹೇಳಿದರು.
ಕಲಾತಂಡಗಳಿರುವ ವಾಹನಗಳ ಮೂಲಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಈ ಜಾಗೃತಿ ವಾಹನವೂ 33 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸಿ, ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಕಲಾತಂಡಗಳಿಂದ ಜಾಗೃತಿ:
ನಂತರ ಕಲಾ ತಂಡದವರು “ನಮ್ಮ ನಗರ ಸ್ವಚ್ಛವಾಗಿರಬೇಕು” ಎಂಬ ಜಾಗೃತಿ ಗೀತೆಯನ್ನು ಪ್ರಸ್ತುತಪಡಿಸಿ, ನೆರೆದಿದ್ದವರಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ಮಾಡದಿರುವುದು, ಒಣ ಕಸ-ಹಸಿ ಕಸ ಬೇರ್ಪಡಿಸಿ ಮಹಾನಗರ ಪಾಲಿಕೆಯ ತೊಟ್ಟಿ ಅಥವಾ ವಾಹನದಲ್ಲಿ ಎಸೆಯುವುದು, ಪೌಷ್ಠಿಕ ಆಹಾರ ಸೇವನೆ, ಊಟಕ್ಕೆ ಮುಂಚೆ ಸರಿಯಾಗಿ ಕೈತೊಳೆಯುವುದು ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸಿದರು.
ಚಿಕ್ಕೋಡಿ ತಾಲೂಕಿನ ದುಳಗನಬಾವಿ ಗ್ರಾಮದ ಭರತ ಕಲಾಚಂದ ನೇತೃತ್ವದ ರಂಗದರ್ಶನ ಕಲಾತಂಡ ಹಾಗೂ ಹುಕ್ಕೇರಿ ತಾಲೂಕಿನ ಯಾದಗೂರ ಗ್ರಾಮದ ಪುಂಡಲೀಕ ಗಿಡ್ಡಾಳೆ ನೇತೃತ್ವದ ವಿಶ್ವಶಕ್ತಿ ಕಲಾಪೋಷಕ ಕಲಾತಂಡಗಳು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದವು.
ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ ಕುರೇರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಪ್ರವೀಣ ಬಾಗೇವಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ, ಮಹಾನಗರ ಪಾಲಿಕೆಯ ಅಧಿಕಾರಿ ಶಶಿಧರ ನಾಡಗೌಡ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು./Run for awareness Jatha

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.