ಉತ್ತಮ ಸಮಾಜಕ್ಕಾಗಿ

ಸ್ವಾತಂತ್ರ್ಯೋತ್ಸವ: ವಿಶೇಷ ಪೂಜೆ ಸಲ್ಲಿಸಲು ಸೂಚನೆ :ಹಾಗೂ :ಅರ್ಜಿಗಳನ್ನು ಆಹ್ವಾನಿಸಲಾಗಿದೆ.

sa 2018

0

ಸ್ವಾತಂತ್ರ್ಯೋತ್ಸವ: ವಿಶೇಷ ಪೂಜೆ ಸಲ್ಲಿಸಲು ಸೂಚನೆ
ಬೆಳಗಾವಿ:(news belgaum) ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಆಗಸ್ಟ್ 15 ರಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಜಿಲ್ಲೆಯ ಎಲ್ಲ ಸಾರ್ವಜನಿಕ ದೇವಾಲಯ, ಮಂದಿರ, ಮಸೀದಿ, ಚರ್ಚು, ಗುರುದ್ವಾರ, ಬೌದ್ಧ ಮಂದಿರ ಹಾಗೂ ಜೈನ್ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವಂತೆ ಸಾರ್ವಜನಿಕ ಸಂಸ್ಥೆಗಳ ಪದಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿ, ಪ್ರಕಟಣೆ ಹೊರಡಿಸಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆ: ಪ್ರತಿಭಾ ಪುರಸ್ಕಾರ
ಬೆಳಗಾವಿ: ಮಾರ್ಚ್ ಮತ್ತು ಏಪ್ರಿಲ್ 2018ರಲ್ಲಿ ನಡೆದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರ್ಜಿಯ ಪ್ರತಿ ಹಾಗೂ ಅಪ್‍ಲೋಡ್ ಮಾಡಿರುವ ಎಲ್ಲಾ ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಯನ್ನು ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿರುವ ಶಾಲಾ/ಕಾಲೇಜುಗಳ ಮುಖ್ಯಸ್ಥರಿಂದ ದೃಢೀಕರಿಸಿ ಆಯಾ ಶಾಲಾ/ಕಾಲೇಜುಗಳಿರುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಆಗಸ್ಟ್ 22 ರೊಳಗಾಗಿ ಸಲ್ಲಿಸಿ ತಮ್ಮ ಮೂಲ ದಾಖಲಾತಿಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
ವಿದ್ಯಾರ್ಥಿಗಳಿಗನ್ನು ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‍ಸೈಟ್: www.backwardclasses.kar.nic.in ಅಥವಾ ಸಹಾಯವಾಣಿ: 8050770004 ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಕಂಪ್ಯೂಟರ್ ತರಬೇತಿ
ಬೆಳಗಾವಿ: ಉಚಿತ ಕಂಪ್ಯೂಟರ ತರಬೇತಿ ಬಯಸುವ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವ ವಿಕಲಚೇತನರಿಗೆ ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಉಚಿತ ಕಂಪ್ಯೂಟರ ತರಬೇತಿ ಹಾಗೂ ಹೊಸದಾಗಿ BPO, Retail, Hospitality Banking and insurance ಹಾಗೂ ಈಗಾಗಲೇ ಕಂಪ್ಯೂಟರ ಮಾಹಿತಿ ಇರುವ ಅಭ್ಯರ್ಥಿಗಳಿಗೆ ನೇರವಾಗಿ ಉದ್ಯೋಗÀ ಅವಕಾಶಗಳನ್ನು ದೊರಕಿಸಿ ಕೊಡಲಾಗುವುದು.
ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಹಾಗೂ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತರಬೇತಿಗೆ ಹಾಜರಾಗಬಹುದು. ತರಬೇತಿ ಅವಧಿಯಲ್ಲಿ ಊಟ ಹಾಗೂ ವಸತಿ ಉಚಿತವಾಗಿರುತ್ತದೆ. ತರಬೇತಿಯ ನಂತರ ಕನಿಷ್ಟ ರೂ.8000 ರಿಂದ ವೇತನ ದೊರಕಿಸಿಕೊಡಲಾಗುವುದು.
ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ, ರೇಷನ ಕಾರ್ಡ ಹಾಗೂ 4 passport size ಭಾವಚಿತ್ರಗಳು ಈ ಎಲ್ಲಾ ದಾಖಲೆಗಳ 2 ನಕಲು ಪ್ರತಿಯೊಂದಿಗೆ ಆಗಸ್ಟ್ 15 ರೊಳಗೆ ಮೇಲ್ಕಾಣಿಸಿದ ವಿಳಾಸಕ್ಕೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 9480809598/ 9480809580/ 9164166845 ಗೆ ಸಂಪರ್ಕಿಸಬಹುದಾಗಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಮುಖ್ಯಸ್ಥರಾದ ಅರುಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.