ಉತ್ತಮ ಸಮಾಜಕ್ಕಾಗಿ

ಸದ್ಭಾವನಾ ದಿನಾಚರಣೆ

news belagavi

0

ಬೆಳಗಾವಿ: (news belgaum)ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಲೀಡ್ಸೆಲ್, ದೇಶಪಾಂಡೆ ಪೌಂಡೇಶನ್ ಸಹಯೋಗದಲ್ಲಿ ದಿನಾಂಕ 20.8.2018ರಂದು ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು.

ದಿವಗಂತ ಮಾಜಿ ಪ್ರಧಾನಿ ಭಾರತರತ್ನ ರಾಜೀವಗಾಂಧಿವರ 74ನೇ ಜನ್ಮದಿನವನ್ನು ರಾಷ್ಟ್ರಾದ್ಯಂತ ಪ್ರತಿವರ್ಷದ ಅಗಷ್ಟ 20ನೇ ತಾರೀಖನ್ನು ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ. ಇತರರ ಬಗೆಗೆ ಸಾಮರಸ್ಯ ಭಾವನೆ ಹೊಂದುವ ಉದ್ದೇಶದಿಂದ 2008ರ ಅಗಷ್ಟ 20ನೇ ತಾರೀಖಿನಿಂದ ಈ ದಿನವನ್ನು ಆಚರಿಸುತ್ತ ಬರಲಾಗಿದೆ. ಈ ದಿನವು ದೇಶದ ಜನರಲ್ಲಿ ರಾಷ್ಟ್ರೀಯ ಬಾವೈಕ್ಯತೆ, ಶಾಂತಿ, ಸಮಗ್ರತೆ, ಪ್ರೀತಿ, ಬಾಂಧವ್ಯ ಹಾಗೂ ಕೋಮುಸೌಹಾರ್ದ ಭಾವನೆಗಳನ್ನು ಉತ್ತೇಜಿಸುವುದಕ್ಕಾಗಿ ಆಚರಿಸಲಾತ್ತಿದೆ.
ಪ್ರಾಂಶುಪಾಲರಾದ ಡಾ.ಎಸ್.ಎಸ್. ಸಾಲಿಮಠರು ಮಾತನಾಡುತ್ತ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಜನ್ಮದಿನವನ್ನು ಸದ್ಭಾವನ ದಿನವಾಗಿ ಆಚರಣೆ ಮಾಡುವದರ ಔಚಿತ್ಯವನ್ನು ವಿವರಿಸುತ್ತ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವುದು ಅಗತ್ಯವಾಗಿದೆ, ರಾಜೀವ ಗಾಂಧಿ ಅವರ ಮಾತುಗಳನ್ನು ಉಲ್ಲೇಖಿಸುತ್ತ “ ಭಾರತವು ಪುರಾತನ ರಾಷ್ಟ್ರವಾಗಿದ್ದರೂ ಜನ ಸಂಖ್ಯೆ ಆಧಾರದಲ್ಲಿ ಜಗತ್ತಿನ ಅತೀ ಹೆಚ್ದು ಯುವ ಶಕ್ತಿಯನ್ನು ಹೊಂದಿದೆ, ಭಾರತವು ಸ್ವತಂತ್ರ, ಸದೃಡ, ಸ್ವಾವಲಂಬಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಬಹುಸುವುದರೊಂದಿಗೆ ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಪಟ್ಟಿಯಲ್ಲಿರಲು ಬಯಸುತ್ತಿದೆ“ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನೆ ಸಂಯೋಜನಾಧಿಕಾರಿ ಡಾ. ವೀರಣ್ಣ. ಡಿ. ಕೆ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲೀಡ್‍ಸೆಲ್‍ನ ಸ್ವಯಂಸೇವಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.Sadbhavana Day

Leave A Reply

 Click this button or press Ctrl+G to toggle between Kannada and English

Your email address will not be published.