ಉತ್ತಮ ಸಮಾಜಕ್ಕಾಗಿ

ಸಾಕಷ್ಟು ಸಾಂಸ್ಕøತಿಕ ಕೊಡುಗೆಗಳು ಇದ್ದರೂ ಸಹ ಬ್ರಿಟಿಷರು ಬಿತ್ತಿದ ವಿಷ ಬೀಜದಿಂದ ಇಲ್ಲಿಯ ಪುರಾಣ ಪುಣ್ಯಕಥೆಗಳಿಗೆ ಮೌಲ್ಯವಿಲ್ಲದಂತಾಗಿರುವುದು ವಿಷಾದಕರ ಸಂಗತಿ: ಡಾ. ಚಂದ್ರಶೇಖರ ಕಂಬಾರ

Sadly, it is worth noting that the legendary legends of the legendary legends of the British have been worthless even though there are numerous cultural contributions: Dr. Chandrasekara poet

0

ಬೆಳಗಾವಿ:(news belagavi) ಭಾರತದಲ್ಲಿ ಸಾಕಷ್ಟು ಸಾಂಸ್ಕøತಿಕ ಕೊಡುಗೆಗಳು ಇದ್ದರೂ ಸಹ ಬ್ರಿಟಿಷರು ಬಿತ್ತಿದ ವಿಷ ಬೀಜದಿಂದ ಇಲ್ಲಿಯ ಪುರಾಣ ಪುಣ್ಯಕಥೆಗಳಿಗೆ ಮೌಲ್ಯವಿಲ್ಲದಂತಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಅವರು ಬುಧವಾರ ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18 ನೇ ಅಂತರಕಾಲೇಜು ಮಟ್ಟದ ಯುವಜನೋತ್ಸವ-2018 “ಕಲಾಸುರಭಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Auto Draft- Tarun kranti 17ಭಾರತದಲ್ಲಿ 1600 ಭಾರತೀಯ ಭಾಷೆಗಳು ಇವೆ. ಅವುಗಳಲ್ಲಿ 30 ಭಾಷೆಗಳು ಮಾನ್ಯತೆ ಪಡೆದಿವೆ. ಸ್ವಾತಂತ್ರ್ಯ ಸಿಕ್ಕನಂತರ 300 ಭಾಷೆಗಳು ನಾಶವಾಗಿವೆ. ಹೀಗೆ ಬಿಟ್ಟರೆ ಭಾರತೀಯ ಭಾಷೆಗಳು ನಾಶವಾಗುವುದು ಸಂಶಯವಿಲ್ಲ. ನಮ್ಮಲ್ಲಿರುವ ಭಾಷೆಗಳಲ್ಲಿ ತಿಳುವಳಿಕೆ, ಜ್ಞಾನ, ನಮ್ಮತನ, ನೆನಪು, ಪ್ರೀತಿ, ಸೃಜನಶೀಲತೆ ಅಡಕವಾಗಿರುವುದರಿಂದ ಇವುಗಳ ಅಸ್ತಿತ್ವವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಭಾರತದಲ್ಲಿ ಬೈಬಲ್‍ಗಿಂತ ಹೆಚ್ಚಿನ ಪ್ರಚಾರ ಪಡೆದಿರುವ ಪಂಚತಂತ್ರ ಕಥೆಗಳು ಇಂದಿನ ಯುವಕರಿಗೆ ನೀತಿಯನ್ನು ಭೋಧಿಸಲು ಅನುಕೂಲವಾಗಿವೆ. ಇಲ್ಲಿಯ ಯುವಕರು ನಮ್ಮ ದೇಶದಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಪ್ರಯೋಜನಕಾರಿ ಕೆಲಸಗಳನ್ನು ಮಾಡಬೇಕು. ಅವರಲ್ಲಿರುವ ಸೃಜನಾತ್ಮಕ ಕೌಶಲ್ಯಗಳ ಬಳಕೆಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಬ್ರಿಟಿಷರು ಶಿಕ್ಷಣ ಪದ್ಧತಿಯಲ್ಲಿ ಅಪಾರ ಬದಲಾವಣೆಗಳನ್ನು ತಂದು ದೇಶ ಸುಧಾರಣೆಯಲ್ಲಿ ಇಂಗ್ಲಿಷ ಭಾಷೆಯನ್ನು ಬಳಕೆಗೆ ತಂದರು. ಇಲ್ಲಿಯ ಪ್ರಾಂತೀಯ ಭಾಷೆಗಳೊಂದಿಗೆ ಇಂಗ್ಲಿಷ ಭಾಷೆಯು ಬೆಳವಣಿಗೆಯನ್ನು ಕಂಡಿದ್ದು ನಮ್ಮ ಮಾತೃಭಾಷೆಯೊಂದಿಗೆ ಪಾಶ್ಚಾತ್ಯ ಭಾಷೆಗಳನ್ನು ಕಲಿತು ದೇಶದ ಅಭಿವೃದ್ಧಿಯಲ್ಲಿ ಯುವಕರು ತಮ್ಮ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ಧಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾಲಯದಿಂದ ಆಯೋಜಿಸಲಾದ ಕಲಾಸುರಭಿ ಕಾರ್ಯಕ್ರಮವು ವಿದ್ಯಾರ್ಥಿಗಳ ಬುದ್ಧಿಮಟ್ಟ ಹೆಚ್ಚಿಸಿಕೊಳ್ಳಲು ಕಲಿಕೆಗೆ ಸಹಕಾರಿಯಾಗಿದೆ. ಇಲ್ಲಿ ಆಯೋಜಿಸಲಾದ ಕಾರ್ಯಕ್ರಮ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿಯ ಸಾಂಸ್ಕøತಿಕ, ಸಾಹಿತ್ಯಿಕ ವಿಷಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಮಾತನಾಡಿ, ಕರ್ನಾಟಕವು ಸಂಗೀತ, ನೃತ್ಯ, ಕಲೆಗಳಿಗೆ ದೇಶದಲ್ಲಿ ಹೆಸರುವಾಸಿಯಾಗಿದ್ದು, ಕುವೆಂಪು, ಕಾರಂತ, ದ.ರಾ. ಬೇಂದ್ರೆ, ಚಂದ್ರಶೇಖರ ಕಂಬಾರ ಹಾಗೂ ವಿಶ್ವೇಶ್ವರಯ್ಯರಂತ ಮಹನೀಯರಿಂದ ಶ್ರೀಮಂತವಾಗಿದೆ ಎಂದರು.
ವಿಟಿಯು ದೈಹಿಕ ಶಿಕ್ಷಣದ ನಿರ್ದೇಶಕ ಡಾ. ಅರೀಫ್ ಅಲಿ ಖಾನ ವಿಶ್ವವಿದ್ಯಾಲಯದ ವಾರ್ಷಿಕ ವರದಿ ವಾಚಿಸಿದರು.
ವಿಟಿಯು ಕುಲಸಚಿವ ಡಾ. ಎಚ್. ಎನ್. ಜಗನ್ನಾಥ ರೆಡ್ಡಿ, ಡಾ. ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಮ್. ಎ. ಸ್ವಪ್ನಾ, ಅಂಗಡಿ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಮಂಗಲ ಅಂಗಡಿ, ಶ್ರದ್ಧಾ ಅಂಗಡಿ, ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಅನಿಲಕುಮಾರ ಕೋರಿಶೆಟ್ಟಿ, ಕೆ.ಎಲ್.ಇ. ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕಟಗೇರಿ, ಜಿ.ಐ.ಟಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಸ್. ದೇಶಪಾಂಡೆ, ಪ್ರೊ. ಎಂ.ವಿ. ಕಂಠಿ, ಕಾರ್ಯಕ್ರಮದ ಸಾಂಸ್ಕøತಿಕ ಸಂಯೋಜಕರಾದ ಪ್ರೊ. ರಾಜು ನಾಗಾಂವ್ಕರ, ಪ್ರೊ. ವಿಜಯ ಕುಂಬಾರ ಹಾಗೂ ರಾಜ್ಯದ ವಿವಿಧ ಇಂಜನೀಯರಿಂಗ್ ಕಾಲೇಜುಗಳಿಂದ ಆಗಮಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಸುಮಾರು 80 ಸ್ಪರ್ಧೆಯ ನಿರ್ಣಾಯಕರು ಆಗಮಿಸಿದ್ದರು.
ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಸ್ವಾಗತಿಸಿದರು. ಕೀರ್ತಿ ಹಿಡದುಗ್ಗಿ ನಿರೂಪಿಸಿದರು. ರಕ್ಷಿತಾ ಮರಳಿ ವಂದಿಸಿದರು. Sadly, it is worth noting that the legendary legends of the legendary legends of the British have been worthless even though there are numerous cultural contributions: Dr. Chandrasekara poet

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.