ಉತ್ತಮ ಸಮಾಜಕ್ಕಾಗಿ

ಮಾದರಿ ನೀತಿ ಸಂಹಿತೆ-ಬ್ಯಾಂಕ್ ಅಧಿಕಾರಿಗಳ ಸಭೆ ಸಂಶಯಾಸ್ಪದ ಹಣ ಸಾಗಾಣಿಕೆ: ತೀವ್ರ ನಿಗಾ

Sample Code Code-Bank Officers Meeting Suspicious Money Transfer: Intensive Care

0

ಬೆಳಗಾವಿ:(NEWS BELGAUM) ಚುನಾವಣೆ ಸಂದರ್ಭದಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ಹಣ ಸಾಗಿಸುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಲಿದೆ. ಆದ್ದರಿಂದ ಸಂಶಯಾಸ್ಪದ ಹಣ ಸಾಗಾಣಿಕೆ ಅಥವಾ ಖಾತೆಗಳ ವಹಿವಾಟುಗಳ ಮೇಲೆ ಬ್ಯಾಂಕುಗಳು ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಮಾ.9) ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ-ಬ್ಯಾಂಕ್ ಅಧಿಕಾರಿಗಳ ಸಭೆ ಸಂಶಯಾಸ್ಪದ ಹಣ ಸಾಗಾಣಿಕೆ: ತೀವ್ರ ನಿಗಾ- Tarun krantiಚುನಾವಣೆ ವೇಳೆ ಹಣದ ಬಳಕೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳ ಸಿಬ್ಬಂದಿ, ವಾಹನಗಳು, ಹಣ ಸಾಗಾಣಿಕೆಯ ಖಾಸಗಿ ಸಂಸ್ಥೆಗಳ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿಸುತ್ತವೆ. ಆದ್ದರಿಂದ ಹಣ ಸಾಗಾಣಿಕೆ ಹಾಗೂ ಬ್ಯಾಂಕುಗಳ ಪ್ರತಿಯೊಂದು ವ್ಯವಹಾರಗಳ ಸಮರ್ಪಕ ದಾಖಲೆಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ ಎಲ್ಲ ಬ್ಯಾಂಕುಗಳ ಅಧಿಕಾರಿಗಳು ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಣ ಮುಟ್ಟುಗೋಲು:
ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕು ಅಥವಾ ಬ್ಯಾಂಕುಗಳಿಂದ ಎಟಿಎಂಗಳಿಗೆ ಹಣ ಸಾಗಿಸುವಾಗ ಬ್ಯಾಂಕ್ ನಿಯಮಾವಳಿ ಪ್ರಕಾರ ಎಲ್ಲ ದಾಖಲೆಗಳು ಇರಲೇಬೇಕು. ಒಂದು ವೇಳೆ ದಾಖಲೆ ಇಲ್ಲದೇ ಹಣ ಸಾಗಾಣಿಕೆ ಕಂಡುಬಂದರೆ ಸಂಶಯಾಸ್ಪದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬ್ಯಾಂಕುಗಳ ಸಿಬ್ಬಂದಿ ಅಥವಾ ಹಣ ಸಾಗಾಣಿಕೆಯ ಖಾಸಗಿ ಸಂಸ್ಥೆಗಳ ಸಹಾಯವಿಲ್ಲದೇ ಭಾರೀ ಮೊತ್ತದ ಹಣ ಸಾಗಾಣಿಕೆ ಮಾಡುವುದು ಕಷ್ಟಸಾಧ್ಯ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಅಕ್ರಮ ಹಣದ ವರ್ಗಾವಣೆ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ. ಆದ್ದರಿಂದ ಅಕ್ರಮ ಹಣ ಸಾಗಾಣಿಕೆ ತಡೆಗಟ್ಟಲು ಬ್ಯಾಂಕುಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಯಾವುಲ್ಲಾ ಹೇಳಿದರು.
ಯಾವುದೇ ವ್ಯಕ್ತಿಯು 50 ಸಾವಿರ ಮೇಲ್ಪಟ್ಟ ಹಣವನ್ನು ಕೊಂಡೊಯ್ಯುವಾಗ ಕೂಡ ಸಮರ್ಪಕ ದಾಖಲಾತಿ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಸಂಶಯಾಸ್ಪದ ಹಣ ಎಂದು ಪರಿಗಣಿಸಿ ಅದನ್ನು ಕೂಡ ವಶಪಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಅಭ್ಯರ್ಥಿಗಳ ಖಾತೆ ಮೇಲೆ ನಿಗಾ:
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರ ಖಾತೆಗಳಿಂದ ನಡೆಯುವ ಪ್ರತಿಯೊಂದು ವ್ಯವಹಾರಗಳ ಮೇಲೂ ಬ್ಯಾಂಕುಗಳು ಕಣ್ಣಿಟ್ಟಿರಬೇಕು ಎಂದು ಜಿಯಾವುಲ್ಲಾ ಸೂಚಿಸಿದರು.
ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣಾ ಖರ್ಚು-ವೆಚ್ಚ ಪಾವತಿಸಲು ಪ್ರತ್ಯೇಕ ಖಾತೆ ಹೊಂದಿರಬೇಕಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ಖರ್ಚಿನ ಮಿತಿ 28 ಲಕ್ಷ ರೂಪಾಯಿ.
28 ಲಕ್ಷ ರೂಪಾಯಿಗಳ ಪೈಕಿ ಕೇವಲ 20 ಸಾವಿರ ರೂಪಾಯಿ ಮಾತ್ರ ನಗದು ಖರ್ಚು ಮಾಡಬಹುದು ಇನ್ನುಳಿದಂತೆ ಪ್ರತಿಯೊಂದು ವ್ಯವಹಾರವು ಚೆಕ್ ಅಥವಾ ಆರ್‍ಟಿಜಿಎಸ್ ಮೂಲಕವೇ ನಡೆಯಬೇಕು ಎಂದು ವಿವರಿಸಿದರು.
ಅಭ್ಯರ್ಥಿಗಳ ಪತಿ/ಪತ್ನಿ ಅಥವಾ ಅವಲಂಬಿತರ ಖಾತೆಗಳಿಗೆ ಒಂದು ಲಕ್ಷಕ್ಕಿಂತ ಅಧಿಕ ಹಣದ ಜಮಾ ಅಥವಾ ಹಿಂತೆಗೆಯುವಿಕೆ ಬಗ್ಗೆ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಮಾಹಿತಿ ಒದಗಿಸಲಾಗುತ್ತದೆ.

ಜಿಲ್ಲೆ ಅಥವಾ ಆಯಾ ವಿಧಾನಸಭಾ ಕ್ಷೇತ್ರದಲ್ಲಿನ ಒಂದೇ ಬ್ಯಾಂಕಿನಿಂದ ಅನೇಕ ವ್ಯಕ್ತಿಗಳ ಖಾತೆಗೆ ಏಕಕಾಲಕ್ಕೆ ಆರ್‍ಟಿಜಿಎಸ್ ಮೂಲಕ ಹಣ ವರ್ಗಾವಣೆ ಬಗ್ಗೆಯೂ ಮಾಹಿತಿ ಒದಗಿಸಬೇಕು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಿದರು.
ಅದೇ ರೀತಿ ಯಾವುದೇ ರಾಜಕೀಯ ಪಕ್ಷದ ಖಾತೆಗೆ ಒಂದು ಲಕ್ಷಕ್ಕಿಂತ ಅಧಿಕ ಮೊತ್ತದ ವಹಿವಾಟುಗಳ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದಲ್ಲದೇ ಮತದಾರರಿಗೆ ಆಮಿಷವೊಡ್ಡುವ ಉದ್ದೇಶದಿಂದ ನಡೆಯಬಹುದಾದ ಯಾವುದೇ ರೀತಿಯ ಸಂಶಯಾಸ್ಪದ ಹಣಕಾಸಿನ ವರ್ಗಾವಣೆ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಮಾದರಿ ನೀತಿ ಜಾರಿಯಲ್ಲಿರುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಖಾತೆಯಿಂದ ಒಂದು ಲಕ್ಷ್ಷೂ ಅಧಿಕ ವಹಿವಾಟು ನಡೆದರೆ ಅದನ್ನು ಕೂಡ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಭಾರತೀಯ ರಿಜರ್ವ ಬ್ಯಾಂಕಿನ ನಿಯಮಾವಳಿ ಪ್ರಕಾರವೇ ಹಣ ಸಾಗಾಣಿಕೆ ನಡೆಸಬೇಕು. ಚುನಾವಣಾ ಆಯೋಗ ತಿಳಿಸಿರುವಂತೆ ಸಂಶಯಾಸ್ಪದ ಹಣ ಸಾಗಾಣಿಕೆ ಕಂಡುಬಂದರೆ ತಕ್ಷಣವೇ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಹಣಸಾಗಾಣಿಕೆ ಮಾಡುವ ಬ್ಯಾಂಕ್ ಸಿಬ್ಬಂದಿ, ವಾಹನಗಳು, ರಕ್ಷಣಾ ಸಿಬ್ಬಂದಿ ಹಾಗೂ ಎಟಿಎಂ ನಿರ್ವಹಣೆದಾರರ ಬಗ್ಗೆ ಎಲ್ಲ ಬ್ಯಾಂಕುಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಬೇಕು ಎಂದು ಜಿಯಾವುಲ್ಲಾ ತಿಳಿಸಿದರು.
ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ರಮೇಶ ಕಳಸದ, ಚುನಾವಣಾ ವೆಚ್ಚ ವೀಕ್ಷಕ ನೋಡಲ್ ಅಧಿಕಾರಿ ಎಂ.ಪಿ.ಅನಿತಾ ಸೇರಿದಂತೆ ಎಲ್ಲ ಬ್ಯಾಂಕುಗಳ ಅಧಿಕಾರಿಗಳು ಸಭೆಯ್ಲಲಿ ಪಾಲ್ಗೊಂಡಿದ್ದರು.Sample Code Code-Bank Officers Meeting Suspicious Money Transfer: Intensive Care

Leave A Reply

 Click this button or press Ctrl+G to toggle between Kannada and English

Your email address will not be published.