ಉತ್ತಮ ಸಮಾಜಕ್ಕಾಗಿ

ಕಾಂಗ್ರೆಸ್ ಲೆಡರಗಳು ತಾಕ್ಕತ್ತಿದ್ದರೆ ಹಿಂತವರ ವಿರುದ್ದ ಕ್ರಮ ತೆಗೆದುಕೋಳಲಿ: ಶಂಕರ ಮುನವಳ್ಳಿ ಎಚ್ಚರಿ

news belagavi

0

ಬೆಳಗಾವಿ:(news belgaum) ರಮೇಶ ಜಾರಕಿಹೊಳಿ ‘ಶಬ್ದಬಳಕೆ’ ತಿದ್ದಿಕೊಳ್ಳಲಿ: ಶಂಕರ ಮುನವಳ್ಳಿ ಎಚ್ಚರಿಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧೋಗತಿಗೆ ಇಲ್ಲಿನ ಸಚಿವ ಹಾಗೂ ಶಾಸಕರೇ ಇಳಿಸಲು ಕಾರಣವಾಗಿದ್ದಾರೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು. ಕಾಂಗ್ರೆಸ್ ಪಕ್ಷ ಇಂದು ಬಿಸಿನೆಸ್ ಗ್ರುಪ್ ಗಳು ಮತ್ತು ಕೆಲ ಪ್ರಭಾವಿ ವ್ಯಕ್ತಿಗಳ ಕೈಯಲ್ಲಿ ಸಿಕ್ಕು ನಲಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿಯುತ ಮನೋಭಾವನೆ ಇರಬೇಕು. ಜವಾಬ್ದಾರಿಯುತ ಹೇಳಿಕೆಗಳನ್ನು ಕೊಡಬೇಕು ಹೊರತು ಕೆಳಹಂತದ ಭಾಷೆ ಬಳಕೆಯಲ್ಲ. ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಹುಯಿಲೆಬ್ಬಿದೆ ಎಂದು ಖೇದ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಎದುರೇ ಮಾಜಿ ಶಾಸಕ ಫಿರೋಜ್ ಸೇಠ್ ಪ್ರೊಟೋಕಾಲ್ ಹೆಸರಲ್ಲಿ ಮಾಧ್ಯಮಗಳ ಎದುರು ಕಿತ್ತಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. PLD ಬ್ಯಾಂಕ್ ಚುನಾವಣೆಗೆ ಆಗ್ರಹಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡೆಸಿದ್ದ ತಡರಾತ್ರಿ ಧರಣಿ ವೇಳೆ ಗಲಾಟೆ ಮತ್ತು ಕೆಲ ಕಾರ್ಯಕರ್ತರ ಹತ್ಯೆ ನಡೆಯುವ ಸಂಭವ ಇತ್ತು. ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳ ಬಳಕೆ ಮಾಡುವ ಸಂಭವವಿತ್ತು. ಕಾಂಗ್ರೆಸ್ ಲೆಡರಗಳು ತಾಕ್ಕತ್ತಿದ್ದರೆ ಹಿಂತವರ ವಿರುದ್ದ ಕ್ರಮ ತೆಗೆದುಕೋಳಲಿ ಎಂದು ಹೆಳಿದರು ಆದರೆ ನಗರ ಪೊಲೀಸ್ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ & ಇಬ್ಬರೂ ಡಿಸಿಪಿಗಳು ತಡರಾತ್ರಿ ಸ್ಥಳದಲ್ಲಿದ್ದು ಪರಿಸ್ಥಿತಿ ಹತೋಟಿಗೆ ತಂದಿದ್ದು ಅಭಿನಂದನಾರ್ಹ ಎಂದರು. ಡಾ. ಜಿ. ಪರಮೇಶ್ವರ ಅವರು ನೂತನ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು. ರಮೇಶ ಜಾರಕಿಹೊಳಿ ಅವರು ತಮ್ಮ ಶಬ್ದ ಬಳಕೆಯನ್ನು ತಿದ್ದಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ಯಾರೇ ಆಗಲಿ ಅವರ ಬಗ್ಗೆ ಗೌರವದಿಂದ ಮಾತಾಡುವುದನ್ನು ರಮೇಶ ಜಾರಕಿಹೊಳಿ ಕಲಿಯಲಿ ಎಂದು ಎಚ್ಚರಿಸಿದರು. ಪಕ್ಷದ ಮಹಿಳಾ ಶಾಸಕರೊಬ್ಬರನ್ನು ‘ಕಾಲ ಕಸ’ಕ್ಕೆ ಹೋಲಿಸುವ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸ್ವಶೋಭೆ ತರುವುದಿಲ್ಲ ಎಂದರು. ತಪ್ಪು ತಿಳಿವಳಿಕೆಗಳಿದ್ದರೆ ನಿಮ್ಮಲ್ಲೇ, ಪಕ್ಷದ ಪಡಸಾಲೆಯಲ್ಲಿ ಸರಿಪಡಿಸಿಕೊಳ್ಳಿ ಹೊರತು ಸಾರ್ವಜನಿಕವಾಗಿ ಕೀಳು ಶಬ್ದ ಬಳಕೆ ಮಾಡಬೇಡಿ ಎಂದರು. ಪಕ್ಷದ ರಾಜ್ಯ ನಾಯಕರಿಗೆ ಜಿಲ್ಲೆಯ ನಾಯಕರನ್ನು ನಿಯಂತ್ರಿಸಲು ಯಾಕೆ ಆಗುತ್ತಿಲ್ಲ. ಹಣದ ಪ್ರಭಾವದ ಬಲಾಢ್ಯತನವೇ ಎಂದರು. ಕೆಪಿಸಿಸಿ ಇಂಥ ಕ್ಷುಲಕ್ ಶಬ್ದ ಬಳಸುವ ಸಚಿವರ ವಿರುದ್ದ ಕಠೋರ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದಲ್ಲಿ ಶಿಸ್ತು ಮೂಡುತ್ತದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ವೈಕ್ತಿಕ ರಾಜಕಿಯ ಮಾಡ್ತಾಯಿದೆ ಯಾಕಂದ್ರೆ ಜಾಹಿರಾತ ಬ್ಯಾನರಗಳನ್ನು ಹಾಕುವ ಸಮಯದಲ್ಲಿ ಹಾಯ್ ಕಾಮಾಡ್ ಪೋಟೊಗಳನ್ನಾ ಬಿಟ್ಟು ಹಾಕ್ತಾರೆ ಇಲ್ಲಿ ಕಾಂಗ್ರೆಸ್ ಪಕ್ಷಾ ವೈಕ್ತಿಕ ರಾಜಕಿಯ ಮಾಡ್ತಾಯಿದ್ದಾರೆ . ಪತ್ರಿಕಾಘೊಷ್ಠಿಯಲ್ಲಿ ಜಯರಾಮ ಕಾಂಬಳೆ ಪವಣ ಜಿವೇಕರ ಮಾರುತಿ ಚೌಗಲೆ ಇದ್ದರು

Leave A Reply

 Click this button or press Ctrl+G to toggle between Kannada and English

Your email address will not be published.