ಉತ್ತಮ ಸಮಾಜಕ್ಕಾಗಿ

ಜನನಾಯಕನನ್ನು ಸ್ವಾಗತಿಸಲು ಸವದತ್ತಿ ನಗರದ ಸಜ್ಜಾಗಿದೆ.

Savadatti is the city's gear to welcome the man.

0

ಬೆಳಗಾವಿ:(news belgaum)  ಫೆ ೨೪ರಿಂದ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ,ಫೆ ೨೬ರಂದು ಮುಂಜಾನೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಮತ ಬೇಟೆ ನಡೆಸಲಿದ್ದಾರೆ, ರಾಹುಲ್ ಗಾಂಧಿ ನಗರಕ್ಕೆ ಆಗಮಿಸುತ್ತಿದ್ದು ಈಗಾಗಲೇ ಜನನಾಯಕನನ್ನು ಸ್ವಾಗತಿಸಲು ಸವದತ್ತಿ ನಗರದ ಸಜ್ಜಾಗಿದೆ.

ಫೆ ೨೬ ರಂದು ಮಂಜಾನೆ ಬೆಳಗಾವಿ ಜಿಲ್ಲೆಯ ಚಿಂಚೋಳಿಯಲ್ಲಿ ಸಾರ್ವಜನಿಕವಾಗಿ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಸವದತ್ತಿ ನಗರಕ್ಕೆ ಆಗಮಿಸಲಿದ್ದಾರೆ,ನಗರದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದ್ದು ನಗರದ ಸರ್ಕಾರಿ ಶಾಲಾ ಮೈದಾನದಲ್ಲಿ ಬೃಹತ ವೇದಿಕೆಯನ್ನು ಸಿದ್ದಪಡಿಸಲಾಗಿದೆ.

ಸಾರ್ವಜನಿಕ ಸಮಾವೇಶಕ್ಕೆ ಸಿದ್ದಗೊಂಡ ಬೃಹತ ವೇದಿಕೆ

ನಗರದ ಸರ್ಕಾರಿ ಶಾಲಾ ಕ್ರೀಡಾಂಗಣದಲ್ಲಿ ಈಗಾಗಲೇ ಬೃಹತ ವೇದಿಕೆ ನಿರ್ಮಿಸಲಾಗಿದ್ದು,ಸುಮಾರು ಐವತ್ತು ಸಾವಿರಕ್ಕು ಹೆಚ್ಚು ಜನರು ಸೇರುವ ನೀರಿಕ್ಷೆಯಲ್ಲಿ ಇಂತಹ ಬೃಹತ್ ಶಾಮಿಯಾನ ನಿರ್ಮಿಸಲಾಗಿದೆ,ಸಮಾವೇಶಕ್ಕೆ ಆಗಮಿಸಿದಂತ ಕಾರ್ಯಕರ್ತರಿಗೆ ಸೂಕ್ತ ಆಸನದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ,ಇನ್ನು ಕಾರ್ಯಕ್ರಮದಲ್ಲಿ ಯಾವುದಾದರು ಅಹಿತಕರ ಘಟನೆ ಸಂಭವಿಸದಂತ್ತೆ ಮುನ್ನ ಎಚ್ಚರಿಕಾ ಕ್ರಮವಾಗಿ ಸೂಕ್ತ ಬೀಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

ರಸ್ತೆ ಉದ್ದಕ್ಕೂ ಬ್ಯಾನರ್ಸ್ ಗಳ ಕಲರವ್

ನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನಲೆ, ನಗರದ ಪ್ರಮುಖ ಸರ್ಕಲ್ ಗಳಾಸ ಲಿಂಗಾರಾಜ ಸರ್ಕಲ್, ಎಸ್ಎಲ್ಒ ಕ್ರಾಸ್,ಬಸವೇಶ್ವರ ಸರ್ಕಲ್ ಹಾಗೂ ಇನ್ನಿತರ ಸರ್ಕಲ್ ಗಳು ಹಾಗೂ ಪ್ರಮುಖ ರಸ್ತೆಗಳು ಸೇರಿದಂತ್ತೆ ಇನ್ನಿತರ ಸ್ಥಳಿಗಳಲ್ಲಿ ರಾಹುಲ್ ಗಾಂಧಿಗೆ ಸ್ವಾಗತ ಕೋರುವ ಬ್ಯಾನರ್ಸ್ ಹಾಗೂ ಕಟೌಂಟ್ಸ ಗಳು ರಾರಾಜಿಸುತ್ತಿವೆ.

ಸವದತ್ತಿಯಲ್ಲಿ ನಡೆಯುವಂತಹ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ಮೇಣುಗೋಪಾಲ,ಸಿಎಂ ಸಿದ್ದರಾಮಯ್ಯ,ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ,ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ,ಸಚಿವ ಸಂತೋಷ ಲಾಡ್,ಡಿಕೆ ಶಿವಕುಮಾರ್, ವಿನಯ್ ಕುಲಕರ್ಣಿ,ಎಮ್ ಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಶಾಸಕರು ವಿಧಾನ ಪರಿಷತ್ ಸದಸ್ಯರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.Savadatti is the city’s gear to welcome the man.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.