ಉತ್ತಮ ಸಮಾಜಕ್ಕಾಗಿ

ಸ್ವ ಸ್ವಾರ್ಥಕ್ಕೆ ರಾಜಕೀಯ ಮಾಡಬೇಡಿ :ಭೀಮಾಶಂಕರ ಪಾಟೀಲ ಎಚ್ಚರಿಸಿದರು.

news belagavi

0

ಬೆಳಗಾವಿ:(news belgaum) ಅಖಂಡ ಕರ್ನಾಟಕ ಏಕತೆಯ ಒಂದೇ ಪ್ರದೇಶದಲ್ಲಿ ಈಗ ಒಡಕಿನ ಧ್ವನಿ ಕೇಳುತ್ತಿದೆ ಎಂದು ಕರ್ನಾಟಕ ನವ ನಿರ್ಮಾಣ ಪಡೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ. ರಾಜ್ಯ ಒಡೆಯುವ ಮಾತು ಎದ್ದಿರುವುದು ಶೋಚನೀಯ. ಪ್ರತ್ಯೇಕ ರಾಜ್ಯ ಅಭಿವೃದ್ಧಿಗಾಗಿಯೋ ಅಧಿಕಾರ ದಾಹಕ್ಕೋ ಎಂಬುವುದನ್ನು ಸ್ಪಷ್ಠಪಡಿಸಬೇಕು. ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುತ್ತಿದ್ದರೆ ನೀವೇ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಅಧಿಕಾರದ ತೇವಲಿಗೆ & ಸ್ವ ಸ್ವಾರ್ಥಕ್ಕೆ ರಾಜಕೀಯ ಮಾಡಬೇಡಿ ಎಂದು ಎಚ್ಚರಿಸಿದರು.
ಡಾ. ಡಿ. ಎಂ. ನಂಜುಂಡಪ್ಪ ವರದಿ ಸ್ಪಷ್ಠತೆ ಹೊಂದಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಯ ವರದಿ ಅದರಲ್ಲಿ ಇದೆ. ಆದರೆ ಆ ವರದಿಯ ಸಂಪೂರ್ಣ ಅನುಷ್ಠಾನ ಆಗಿಲ್ಲ. ಜನಪ್ರತಿನಿಧಿಗಳು ಅದರ ಜಾರಿಗೆ ಕಾಳಜಿ ವಹಿಸಿಲ್ಲ. ಅಪ್ಪಟ ಕನ್ನಡಿಗರ ಬೆಳಗಾವಿ ನಗರದಲ್ಲಿ ವಿಷಮ ಬೀಜ ಬಿತ್ತುವವರು ಸುಮ್ಮನಾಗಲಿ, ಬೇರೆ ಯಾರಿಗೂ ಬೆಳಗಾವಿ ನಗರವನ್ನು ಬರೆದುಕೊಡಬೇಡಿ ಎಂದು ಒತ್ತಾಯಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.