ಉತ್ತಮ ಸಮಾಜಕ್ಕಾಗಿ

ಚಿಕ್ಕೋಡಿ ಜಿಲ್ಲೆಗಾಗಿ 80 ವರ್ಷದ ಹಿರಿಯ ವಯೋವೃದ್ಧ ರಾಜಕಾರಣಿ ಬಿ.ಆರ್.ಸಂಗಪ್ಪಗೋಳ ಅವರು ಕಳೆದ 29 ದಿನಗಳಿಂದ ಧರಣಿ, ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುತ್ತಿದ್ದಾರೆ

Senior 80-year-old senior politician BR Sungappallo is the Chikkodi district

0

ಬೆಳಗಾವಿ: ಚಿಕ್ಕೋಡಿ:(news belgaum) ಚಿಕ್ಕೋಡಿ ಜಿಲ್ಲೆಗಾಗಿ 80 ವರ್ಷದ ಹಿರಿಯ ವಯೋವೃದ್ಧ ರಾಜಕಾರಣಿ ಬಿ.ಆರ್.ಸಂಗಪ್ಪಗೋಳ ಅವರು ಕಳೆದ 29 ದಿನಗಳಿಂದ ಧರಣಿ, ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಆದರೆ ಸಂಸದರು ಜಿಲ್ಲೆ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಹುಟ್ಟು ಹಬ್ಬದ ಸಂಭ್ರಮದಲ್ಲಿರುವುದು ವಿಷಾದಕರ ಸಂಗತಿ ಎಂದು ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ ಕದಮ ಅಸಮಧಾನ ವ್ಯಕ್ತಪಡಿಸಿದರು.

ಚಿಕ್ಕೋಡಿ ಜಿಲ್ಲಾ ಸಮಿತಿಯಿಂದ ಕಳೆದ 29 ನೇ ದಿನದಿಂದ ಹೋರಾಟ ನಡೆಸಲಾಗುತ್ತಿದ್ದು, ಜಿಲ್ಲೆಗಾಗಿ ಜನರು ಅವಿರತವಾಗಿ ಹೋರಾಟ ನಡೆಸುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು ಹೋರಾಟ ನಿರತರನ್ನು ಮಾತನಾಡಿಸುವ ಸೌಜನ್ಯ ಕೂಡ ತೋರುತ್ತಿಲ್ಲ ಎಂದು ಕಿಡಿಕಾರಿದರು.

ಚಿಕ್ಕೋಡಿ ಜಿಲ್ಲೆಗಾಗಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಸದಸ್ಯರು ಠರಾವು ಮಂಡಿಸಿ ಸರ್ಕಾರಕ್ಕೆ ಸಲ್ಲಿಸಿ ಜಿಲ್ಲಾ ಹೋರಾಟ ನಡೆಸುತ್ತಿರುವ ವೇದಿಕೆಗೆ ಬಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆ ಜನಸಾಮಾನ್ಯರಿಗೆ ಮಾತ್ರ ಬೇಕಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಜಿಲ್ಲೆ ಬೇಕಾಗಿಲ್ಲ ಎಂಬುದು ಇದರಿಂದ ಗೋಚರಿಸತೋಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕೋಡಿ ತಾಲೂಕಿನ ಬಂಬಲವಾಡ ಗ್ರಾಮ ಪಂಚಾುಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಕರ್ನಾಟಕ ಜನಸೇವಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಾಜಿ ಶಾಸಕ ದತ್ತು ಹಕ್ಯಾಗೋಳ, ಬಿ.ಆರ್.ಸಂಗಪ್ಪಗೋಳ, ಸುರೇಶ ಬ್ಯಾಕೂಡೆ, ರಾಮಣ್ಣ ಘಸ್ತೆ, ನಿಂಗಪ್ಪ ಚೌಗಲಾ, ಕಲ್ಹಂದರ ಜಲೂದರ, ಭೀಮು ಹಳಿಂಗಳಿ, ಮಲ್ಲು ಕುಂದರಗಿ, ಹಸನ ಸನದಿ, ಅರ್ಜುನ ಕಮತೆ, ಸಿದಗೌಡ ಪಾಟೀಲ, ನಿಜಗುಣಿ ಆಲೂರೆ, ಡಾ. ಶಿವರಾಜ ಹುದ್ದಾರ, ಶಕುಂತಲಾ ಹುಲ್ಲೋಳಿ, ಮಂಜುಳಾ ಹಳಿಜೋಳೆ, ಶಕುಂತಲಾ ಜೋಂದಳೆ, ಸುನೀತಾ ಪಾಟೀಲ, ಲಕ್ಷ್ಮೀ ಹುದ್ದಾರ, ರೇಣುಕಾ ಬೋರಗಾಂವೆ, ಸರಸ್ವತಿ ಟಂಕಸಾಲೆ, ಜಯಶ್ರೀ ಘಾಟಗೆ, ಸಂಗೀತಾ ಹಂಜಿ, ಅವಕ್ಕಾ ಸಾವಳಗಿ, ನಿರ್ಮಲಾ ಹೆಬ್ಬಾಳೆ ಇತರರು ಇದ್ದರು.Senior 80-year-old senior politician BR Sungappallo is the Chikkodi district

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.