ಉತ್ತಮ ಸಮಾಜಕ್ಕಾಗಿ

ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

Sexual assault on minor girls in Belgaum

0

ಬೆಳಗಾವಿ:(news belagavi) ಇತ್ತಿಚೆಗೆ ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಎರಡನೇ ರಾಜಧಾನಿಯಾದ ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಧರ್ಮದೇಟು ನೀಡಲಾಗಿದೆ. ಸ್ವತ: ಬಾಲಕಿಯರು ಹಾಗೂ ಪೋಷಕರು ಕಾಮುಕನಿಗೆ ಚಪ್ಪಲಿ ಸೇವೆ ಮಾಡಿದ್ದು, ಕಾಮುಕನನ್ನ ವಶಕ್ಕೆ ಪಡೆದಿರುವ ಪೋಲಿಸರು ಸಖತ್ ಡ್ರೀಲ್ ನಡೆಸಿದ್ದಾರೆ.

ಸರಕಾರಿ ಪ್ರಾಥಮಿಕ ಶಾಲೆಗೆ ಬಿಸಿಯೂಟ ನೀಡಲು ಬರುವ ಕಾಮುಕನೋರ್ವ ನಾಲ್ಕನೇ ತರಗತಿಯ ಇಬ್ಬರು ವಿದ್ಯಾರ್ಥೀನಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಗಾವಿಯ ಸಾರಥಿ ನಗರದಲ್ಲಿ ನಡೆದಿದೆ. ಎಂದಿನಂತೆ ನಿನ್ನೆ ಕೂಡ ಕಾಮುಕ ಪ್ರವೀಣ ಎಂಬಾತ ಬಿಸಿಯೂಟ ನೀಡಲು ಸಾರಥಿ ನಗರದ ಸರಕಾರಿ ಪ್ರಾಥಮಿಕ ಶಾಲೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥೀನಿಯರ ಎದೆಯ ಭಾಗಕ್ಕೆ ಕೈಹಾಕಿ ವಿಕೃತಿ ಮೆರೆದಿದ್ದಾನೆ. ಕೂಡಲೇ ಬಾಲಕಿಯರು ಕಿರುಚಿದ್ದರಿಂದ ಕಾಮುಕ ಕಾಲ್ಕಿತ್ತಿದ್ದಾನೆ. ಕಾಮುಕನ ದೌರ್ಜನ್ಯದ ವಿಷಯವನ್ನ ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ಕೆರಳಿದ ಪೋಷಕರು ಇಂದು ಬಿಸಿಯೂಟ ನೀಡಲು ಶಾಲೆಗೆ ಬಂದ ಪ್ರವೀಣನನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಚಪ್ಪಲಿ ಸೇವೆ ಮಾಡಿದ್ದಾರೆ.
ಬಾಲಕಿಯ ತಾಯಿ

ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ- Tarun kranti

ಬಿಜೆಪಿ ಸ್ಥಳೀಯ ಮುಖಂಡ ವಿರೇಶ ಕಿವಡಸಣ್ಣವರ ಎಂಬಾತನಿಗೆ ಸೇರಿದ ಸಮೃದ್ದಿ ಸೇವಾ ಸಂಸ್ಥೆಯಲ್ಲಿ ಈ ಕಾಮುಕ ಪ್ರವೀಣ ಕೆಲಸ ಮಾಡುತ್ತಿದ್ದು ಸಮೃದ್ದಿ ಸಂಸ್ಥೆಯಿಂದಲೇ ಸರಕಾರಿ ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಇತ್ತ ಪೋಷಕರು ಕಾಮುಕ ಪ್ರವೀಣನನ್ನ ಥಳಿಸುತ್ತಿದ್ದಾಗ ಆಕ್ರೋಶ ಭರಿತರಾದ ಬಾಲಕಿಯರು ಕೂಡ ಪೋಷಕರೊಂದಿಗೆ ಸೇರಿಕೊಂಡು ಕಾಮುಕನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ ತಂಡ ಕೂಡ ಸ್ಥಳಕ್ಕೆ ಬಂದು ಬಾಲಕಿಯಿಂದ ಮಾಹಿತಿ ಪಡೆದುಕೊಂಡಿದೆ.

 

ಎಂ.ಕೆ.ಕುಂದ್ರಿ. ಮಕ್ಕಳ ಸಹಾಯವಾಣಿ ಅಧಿಕಾರಿ ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎ.ಪಿ.ಎಂ.ಸಿ ಪೋಲಿಸರು ಕಾಮುಕ ಪ್ರವೀಣನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಎ.ಪಿ.ಎಂ.ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.