ಉತ್ತಮ ಸಮಾಜಕ್ಕಾಗಿ

ಸಡಗರದ ಚಾಂಗದೇವ ಜಾತ್ರೆ ಶಿಂದಿಕುರಬೇಟ

Shri Chandav (Yamanurappa) of the Shindikurabeta village is a fair fair

0

ಶಿಂದಿಕುರಬೇಟ : 
News Belgaum-ಸಡಗರದ ಚಾಂಗದೇವ ಜಾತ್ರೆ 1ಬೆಳಗಾವಿ:(news belgaum) ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಚಾಂಗದೇವ (ಯಮನೂರಪ್ಪ) ದೇವರ ಜಾತ್ರೆ ಮಾರ್ಚ 5 ಹಾಗೂ 6ರಂದು ಸಡಗರದಿಂದ ಜರುಗಿತು.
ಈ ನಿಮಿತ್ತ ಮಾರ್ಚ 5ರಂದು ಗಂಧಾಭಿಷೇಕ ಉತ್ಸವ ಜರುಗಿತು. ಮುತೈದೆಯರ ಕುಂಭ, ಆರತಿಗಳ ಮೆರವಣಿಗೆ ಅತ್ಯಂತ ಸಡಗರದಿಂದ ನಡೆಯಿತು. ಗ್ರಾಮದ ಆಜಾದ್ ಬ್ರಾಸ್ ಬ್ಯಾಂಡ್ ಕಂಪನಿ, ವಿಘ್ನೇಶ್ವರ ಜಾಂಜ್ ಪಥಕ್, ಹಲಗಿ ಮಜಲು, ಹಾಗೂ ಉಪ್ಪಾರಟ್ಟಿಯ ಶ್ರೀ ಬಾಳೇಶ್ವರ ಭಜನಾ ಸಂಘ ಈ ಕಲಾ ತಂಡಗಳು ಮೆರವಣಿಗೆಯಲ್ಲಿ ವಿಶೇಷ ರಂಗು ತಂದಿದ್ದವು.
ಗಂಧಾಭಿಷೇಕ ಮೆರವಣಿಗೆಗೆ ಗೋಕಾಕ ಡಿ.ಎಸ್.ಪಿ. ಪ್ರಭು ಡಿ.ಟಿ. ಇವರು ಚಾಲನೆ ನೀಡಿದರು. ನಂತರ ನಡೆದ ಪೂಜಾ ಕಾರ್ಯಕ್ರಮವನ್ನು ಶಿದ್ಧಮಲ್ಲಯ್ಯ ಹಿರೇಮಠ ಇವರು ನಡೆಸಿಕೊಟ್ಟರು. ಸಂಜೆ ಬೆಳಗಾವಿಯ ಪ್ರತಿಭಾ ನಾಟ್ಯ ಹಾಗೂ ಸಂಗೀತ ಕೇಂದ್ರದವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಎಸ್.ಎನ್.ಮುತಾಲಿಕ ದೇಸಾಯಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.
News Belgaum-ಸಡಗರದ ಚಾಂಗದೇವ ಜಾತ್ರೆ 3ಮಾರ್ಚ 6ರಂದು ಮುಖ್ಯ ಜಾತ್ರೆ ಜರುಗಿತು.ಗ್ರಾಮದ ಭಕ್ತರು ನೈವೆದ್ಯ ಅರ್ಪಿಸಿದರು. ರಾತ್ರಿ ಶಾಲಾ ಮಕ್ಕಳ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಭಾರತಿ ಗುಮತಿ, ಪ್ರೇಮಾ ಕಂಬಾರ, ವನೀತಾ ಸರ್ವಿ ಇವರು ನೇತೃತ್ವ ವಹಿಸಿದ್ದರು. ಅರ್ಚಕ ಗೋಪಾಲ ಖಟಾವಕರ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.
ದುರ್ಗಾದೇವಿ ದೇವಋಷಿ ಪರಶುರಾಮ ಪೂಜೇರಿ, ಸಾರಿಗೆ ಇಲಾಖೆ ಸಿಬ್ಬಂದಿ ಚಾಂದ ಪನಿಬಂಧ, ಡಿ,ಎಸ್.ಎಸ್. ಜಿಲ್ಲಾ ಸಂಚಾಲಕ ಕಾಡಪ್ಪ ತೆಳಗೇರಿ, ಈರಪ್ಪ ಭೋಜಿ, ರಮೇಶ ಮೇತ್ರಿ, ಆರೋಗ್ಯ ಇಲಾಖೆ ಸಿಬ್ಬಂದಿ ಎಸ್.ಬಿ.ಕಾಳ್ಯಾಗೋಳ, ಭೀಮಶಿ ಮಲಕನ್ನವರ, ದುಂಡವ್ವ ಪಂಚಯ್ಯನವರಮಠ, ಶಂಕರೆವ್ವ ಭೋಜಿ, ಸುನಂದಾ ಹುಣಶ್ಯಾಳಿ, ಅನುಸೂಯಾ ಕೋಪರ್ಡೆ, ರತ್ನವ್ವ ಹಣಮಂತಗೋಳ, ಲಕ್ಕವ್ವ ಮಲಕನ್ನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.Shri Chandav (Yamanurappa) of the Shindikurabeta village is a fair fair

ಚಾಂಗದೇವ ಜಾತ್ರೆ ನಿಮಿತ್ತ ಉಚಿತ ಸೀರೆ,ಬಟ್ಟೆ ವಿತರಣೆ.
ಸಡಗರದ ಚಾಂಗದೇವ ಜಾತ್ರೆ ಶಿಂದಿಕುರಬೇಟ- Tarun krantiಬೆಳಗಾವಿ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ನಡೆಯಲಿರುವ ಚಾಂಗದೇವ(ಯಮನೂರಪ್ಪ) ಜಾತ್ರೆಯಲ್ಲಿ ಭಾಗವಹಿಸುವ ಮುತೈದೆಯರಿಗೆ ಪ್ರತಿ ವರ್ಷದಂತೆ ಉಚಿತ ಸೀರೆ ಹಾಗೂ ವಿಘ್ನೇಶ್ವರ ಜಾಂಜ್ ಪಥಕ್‍ದವರಿಗೆ ಉಚಿತ ಬಟ್ಟೆ ದೇವಸ್ಥಾನದ ವತಿಯಿಂದ ವಿತರಣಾ ಕಾರ್ಯಕ್ರಮ ದಿ.2ರಂದು ದೇವಸ್ಥಾನ ಆವರಣದಲ್ಲಿ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರುತಿ ಜಾಧವ ಅವರು ಚಾಂಗದೇವ ದೇವಸ್ಥಾನ ತೀವ್ರ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ಶ್ಲಾಘನೀಯ ವಿಷಯ ಈ ನಿಟ್ಟಿನಲ್ಲಿ ಗ್ರಾಮದ ಎಲ್ಲರು ಸಹಕರಿಸುವುದು ಅತ್ಯಗತ್ಯ ಎಂದರು.
ಗ್ರಾಮದ ದುರ್ಗಾದೇವಿ,ಬನಶಂಕರಿ,ಯಲ್ಲಮ್ಮಾದೇವಿ, ರಾಮಲಿಂಗೇಶ್ವರ,ಸಿದ್ಧಾರೂಢ,ಕೃಷ್ಣಗೌಳಿ,ಕಂಬಾರ,ಹಣಬರ ಸೇರಿದಂತೆ ಇತರ ಸಮಾಜದವರ ಮಹಿಳೆಯರಿಗೆ ಉಚಿತ ಸೀರೆ ವಿತರಿಸಲಾಯಿತು. ವಿಘ್ನೇಶ್ವರ ಜಾಂಜ್ ಪಥಕ್ ಮೇಳದ ಯುವಕರಿಗೂ ಬಟ್ಟೆ ವಿತರಿಸಲಾಯಿತು.
ತಾ.ಪಂ. ಸದಸ್ಯ ನಿಂಗಪ್ಪ ಬಂಬಲಾಡಿ, ಗ್ರಾ.ಪಂ.ಅಧ್ಯಕ್ಷ ದಾವಲ ದಬಾಡಿ, ಯುವ ಧುರೀಣರಾದ ಶ್ರೀಕಾಂತ ಕಾಳ್ಯಾಗೋಳ,ಅಶೋಕ ಮಲಕನ್ನವರ, ದುರ್ಗಾದೇವಿ ದೇವಋಷಿ ಪರಶುರಾಮ ಪೂಜೇರಿ ಗ್ರಾ.ಪಂ ಉಪಾಧ್ಯಕ್ಷೆ ಬಸವ್ವಾ ಪೂಜೇರಿ, ಗಣ್ಯರಾದ ಈರಪ್ಪ ಭೋಜಿ, ರಮೇಶ ಮೇತ್ರಿ, ಆರೋಗ್ಯ ಇಲಾಖೆ ಸಿಬ್ಬಂದಿ ಸರೋಜಿನಿ ಕಾಳ್ಯಾಗೋಳ, ವನೀತಾ ಸರ್ವಿ, ಶಂಕರೆವ್ವಾ ಭೋಜಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾಲಕ್ಷ್ಮೀ ಗುಮತಿ ಸ್ವಾಗತಿಸಿದರು. ಅರ್ಚಕ ಗೋಪಾಲ ಖಟಾವಕರ ನಿರೂಪಿಸಿದರು. ಭಾರತಿ ಗುಮತಿ ವಂದಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.