ಉತ್ತಮ ಸಮಾಜಕ್ಕಾಗಿ

ಸಿದ್ದು ಕೆಪಿಸಿಸಿ ಹೊಕ್ಕು ಹೊರಬಂದರು! ಮೈತ್ರಿ ಸರಕಾರ ” ಭದ್ರ” ಎಂಬ “ಸರ್ಟಿಫಿಕೇಟ್” ಕೊಟ್ಟರು!

Sidhu KPCC fired! Alliance government gave "a certificate" "security"!

0

ವಿಶೇಷ ಬರಹ: ಅಶೋಕ್ ಚಂದರಗಿ (news belagavi)

ಕಾಂಗ್ರೆಸ್ ಎಂದರೆ ಹೀಗೆ! ಗುಡುಗು,ಸಿಡಿಲು,ಮಿಂಚು ಎಲ್ಲವೂ ಸಾಮಾನ್ಯ. ಆದರೆ ಅರ್ಭಟದ ಮಳೆಯ ನಿರೀಕ್ಷೆಯಲ್ಲಿದ್ದಾಗಲೇ ಮೋಡಗಳೆಲ್ಲ ಸಿಕ್ಕ ಸಿಕ್ಕಲ್ಲಿ ಚದುರಿ ಹೋಗಿಬಿಡುತ್ತವೆ! ಕಳೆದ ಒಂದು ವಾರದಿಂದ ಧರ್ಮಸ್ಥಳದ ಶಾಂತಿವನದಲ್ಲಿ ನಡೆದ ಚಟುವಟಿಕೆಗಳು ಬೆಂಗಳೂರಿನಲ್ಲಿ ಮುಂದುವರೆಯುತ್ತವೆಯೆಂದು ನಿರೀಕ್ಷಿಸಿದವರಿಗೇ ಹೆಚ್ಚು ನಿರಾಶೆಯಾಗಿದೆ. ಅದರಲ್ಲೂ ಟಿವ್ಹಿ ವಾಹಿನಿಗಳಿಗೆ ತುಸು ಹೆಚ್ಚೇ ನಿರಾಶೆಯಾಗಿದೆ.

ಅವ್ಯವಸ್ಥೆ ನೋಡಿ ಐಎಎಸ್ ಅಧಿಕಾರಿ ಮೋಹನರಾಜ ಅಸಮಧಾನ: ಅಧಿಕಾರಿಗಳು ಪೆಚ್ಚು- Tarun kranti
ನಿನ್ನೆ ಗುರುವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಿದ ಸಿದ್ರಾಮಣ್ಣರ ನಿವಾಸ ಕಾವೇರಿಯ ಮುಂದೆ ಕಾದು ನಿಂತು ಲೈವ್ ಪ್ರಸಾರ ಮಾಡಲು ಮುಂದಾದ ಟಿವ್ಹಿ ವರದಿಗಾರರಿಗೆ ಸುದ್ದಿಗಳೇ ಸಿಗಲಿಲ್ಲ. ಸಿದ್ದು ತಣ್ಣಗೇ ಕೆಪಿಸಿಸಿ ಕಚೇರಿಗೆ ಹೋದರು. ಇನ್ನುಳಿದ ನಾಯಕರ ಜೊತೆ ಸಭೆ ನಡೆಸಿದರು. ಹೊರಗೆ ಬಂದರು. “ಮೈತ್ರಿ ಸರಕಾರ ಭದ್ರವಾಗಿದೆ” ಎಂದು ಒತ್ತಿ ಒತ್ತಿ ಹೇಳಿದರು. ಅಲ್ಲಿಗೆ ಎಲ್ಲವೂ ಮುಗಿಯಿತು. ಇನ್ನೇನಿದ್ದರೂ ರವಿವಾರ ನಡೆಯುವ “ಸಮನ್ವಯ ಸಮಿತಿ” ಸಭೆ.

ಇಂದು ಖರ್ಗೆಯವರು ಸಿದ್ದು ಅವರನ್ನು ಭೆಟ್ಟಿಯಾಗುವ ಪ್ರಮೇಯವೇ ಬರಲಿಲ್ಲ. ಸಿದ್ರಾಮಯ್ಯ ಅನುಭವಿಗಳು. ಅವರಿಗೆ ಎಲ್ಲವೂ ಗೊತ್ತು. ಅವರಿಗೆ ಏನನ್ನೂ ಹೇಳುವ ಅವಶ್ಯಕತೆಯಿಲ್ಲ. ಭೆಟ್ಟಿಯಾಗಲು ನನಗೆ ಯಾರೂ ಹೇಳಿಲ್ಲ ಎಂದು ಖರ್ಗೆ ಹೇಳಿ ಕೈತೊಳೆದುಕೊಂಡುಬಿಟ್ಟರು! ಹೈಕಮಾಂಡ್ ಮನದಾಳದ ಅಂದರೆ ರಾಹುಲ್ ಮನಸ್ಸಿನಲ್ಲಿ ಏನಿದೆಯೆಂಬುದನ್ನು ಸಿದ್ರಾಮಣ್ಣರಿಗೆ ತಿಳಿಸಬೇಕಾದವರು ತಿಳಿಸಿದ್ದಾರೆ. ಈ ಸರಕಾರ ಪತನಗೊಂಡರೆ ಮುಂದೇನಾಗಬಹುದೆಂಬುದನ್ನು ತಿಳಿಯದಷ್ಟು ಸಿದ್ರಾಮಣ್ಣ ಧಡ್ಡರಲ್ಲ. ಆದರೆ ಈ ರೀತಿ “ಗಲಾಟೆ” ಮಾಡದಿದ್ದರೆ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದರು ಎಂಬುದು ಅವರ ಲೆಕ್ಕಾಚಾರ. ಅಲ್ಲದೇ ತಮ್ಮ ಜೊತೆಗೆ ಯಾರ್ಯಾರಿದ್ದಾರೆಂಬುದನ್ನು ತೋರಿಸುವದೂ ಅವರಿಗೆ ಬೇಕಾಗಿತ್ತು. ತೋರಿಸಿದರು. ಅಷ್ಟರಮಟ್ಟಿಗೆ ಅವರ ತಂತ್ರ ಯಶಸ್ವಿ.

ಇಂದು ಶುಕ್ರವಾರ ಸಂಜೆ ನಡೆದ ಸಿಎಮ್ ಪಿ ಸಭೆಯಲ್ಲಿ ಬಜೆಟ್ ನಲ್ಲಿ ಏನೇನು ಸೇರಿಸಬೇಕೆಂಬುದನ್ನು ಮೋಯ್ಲಿ ಹಾಗೂ ಇತರರು ತಿಳಿಸಿದ್ದಾರೆ. ಮುಂದಿನದು ಕುಮಾರಸ್ವಾಮಿಗೆ ಬಿಟ್ಟಿದ್ದು. ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ ಜುಲೈ 5 ರಂದು. ಅದಕ್ಕೂ ಮೊದಲು ರವಿವಾರದ ಸಮನ್ವಯ ಸಮಿತಿ ಸಭೆ. ಅಲ್ಲಿ ಹದಿನೈದು ದಿನಗಳ ನಂತರ ಕುಮಾರಸ್ವಾಮಿ ಸಿದ್ರಾಮಣ್ಣ ಎದುರುಬದುರಾಗುತ್ತಾರೆ. ಕೈಕುಲುಕುತ್ತಾರೆ. ಸಾಧ್ಯವಾದರೆ (ಟಿವ್ಹಿ ಛಾಯಾಗ್ರಾಹಕರು ಒತ್ತಾಯಿಸಿದರೆ) ಇಬ್ಬರೂ ಎರಡೂ ಕೈಗಳನ್ನು ಮೇಲೆತ್ತಿಯೇ ಜೋಡಿಸುತ್ತಾರೆ.”ನಾವಿಬ್ಬರೂ ಒಂದು, ನಮ್ಮ ಸರಕಾರ ಒಂದು” ಎಂಬ ಘೋಷಣೆಯೊಂದಿಗೆ “ಮಂಗಳಾರತಿ” ಪದವನ್ನು ಹಾಡುತ್ತಾರೆ .

“ಆರತಿ ಎತ್ತೀರೆ ಕುಮಾರಣ್ಣನಿಗೆ
ಮಂಗಳಾರತಿ ಎತ್ತೀರೆ
ದೇವೇಗೌಡರ ಚಿರಂಜೀವಿಗೆ!!
ಕಾಂಗ್ರೆಸ್ ಎಂಬ ಎಣ್ಣೆಯಲಿ
ನಾನೊಂದು ಸುಡುಬತ್ತಿಯಾದೇನು
ಸುತ್ತಲಿದ್ದವರಿಗೆ ಬೆಳಕು ಚೆಲ್ಲೇನು!
ಕುಮಾರಣ್ಣನಿಗೆ ಆರತಿ ಎತ್ತೀರೆ!!

ಈ ಹಾಡಿನೊಂದಿಗೆ ಕಳೆದ ಎಂಟು ದಿನಗಳ ದೃಶ್ಯಕ್ಕೆ ಪರದೆ ಬೀಳುತ್ತದೆ. ಪ್ರೇಕ್ಷಕರಾದ ನಾವು ಚಪ್ಪಾಳೆ ಹೊಡೆದು ಮನೆಗೆ ಹೋಗುತ್ತೇವೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.