ಉತ್ತಮ ಸಮಾಜಕ್ಕಾಗಿ

ಕಲಾವಿದ ಸುಶೀಲ ತರಬರ ಏಕವ್ಯಕ್ತಿ ಚಿತ್ರಕಲಾಪ್ರದರ್ಶನ

Solo painting show by Artist Sushil Tarabar

0

ಬೆಳಗಾವಿ :  (news belagavi)  ಬೆಳಗಾವಿಯ ಕಲಾವಿದ ಸುಶೀಲ ತರಬರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜೂ. 28 ರಿಂದ ಇಂದು ದಿ. ಜುಲೈ 1 ರವರೆಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಲಲಿತಕಲಾ ಅಕಾಡಮಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀಮತಿ ಎಂ. ಜೆ ಕಮಲಾಕ್ಷಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕಲಾವಿದ ಸುಶೀಲ ತರಬರ ಅವರು ಒಳ್ಳೆಯ ಕಲಾವಿದರು.

ಅತ್ಯತ್ತಮ ಚಿತ್ರಗಳನ್ನು ರಚಿಸಿದ್ದು ಇವರಿಗೆ ಒಳ್ಳೇಯ ಭವಿಷ್ಯವಿದೆ. ಇವರ ಚಿತ್ರಕಲಾ ಪ್ರದರ್ಶನಗಳು ಹೊರರಾಜ್ಯಗಳಲ್ಲಿಯೂ ನಡೆಯುವಂತಾಗಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಾವಿದರೂ, ಲಲಿತ ಕಲಾ ಅಕಾಡಮಿ ಸದಸ್ಯರಾಗಿರುವ ಗಣಪತಿ ಎಸ್ .ಹೆಗಡೆಯವರು ಸುಶೀಲ ತರಬರ ಅವರಿಗೆ ಚಿತ್ರಕಲೆ ಕರಗತವಾಗಿದೆ ಅವರು ಬಿಡಿಸಿರುವ ನಿಸರ್ಗದ ಚಿತ್ರಗಳು,
ಅಮೂರ್ತ ಚಿತ್ರಗಳು ಹಾಗೂ ಬನಾರಸ ಚಿತ್ರಗಳನ್ನು ತುಂಬ ಸುಂದರವಾಗಿ ಬಿಡಿಸಿದ್ದಾರೆ. ಸರಕಾರವು ಕಲಾವಿದರಿಗೆ ಕೊಡವ ಸವಲತ್ತುಗಳ ಕುರಿತು ತಿಳಿದುಕೊಂಡು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರೊ. ಬಾಬು ಜತ್ತಾಕರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾವಿದ ಸುಶೀಲ ತರಬರ ಪ್ರಾಸ್ತಾವಿಕ ನುಡಿಗಳನ್ನಾಡಿ ಚಿತ್ರಕಲೆಯಲ್ಲಿ ತಾವು ಬೆಳೆದು ಬಂದ ರೀತಿಯನ್ನು ಹಂಚಿಕೊಳ್ಳುತ್ತ ಚಿತ್ರಕಲೆಯಲ್ಲಿ ಬೆಳೆಯುವಲ್ಲಿ ಸಹಕರಿಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಂಡರು.
ಕಲಾವಿದ ನವೀನ ಪತ್ತಾರ ನಿರೂಪಿಸಿದರು. ಕಲಾವಿದರಾದ ಕರಿಯಪ್ಪ ಹಂಚಿನಮನಿ , ಬಿ. ಎಸ್ ಪಂಡಿತ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.